ಬೆಟಗೇರಿ:ಪ್ರಾಮಾಣಿಕತೆ, ಶ್ರದ್ಧೆಯಿಂದ ಸತತ ಪರಿಶ್ರಮಪಟ್ಟರೆ ಸಾಧನೆ ಸಾಧ್ಯ : ರಾಜೇಂದ್ರ ಸಣ್ಣಕ್ಕಿ
ಪ್ರಾಮಾಣಿಕತೆ, ಶ್ರದ್ಧೆಯಿಂದ ಸತತ ಪರಿಶ್ರಮಪಟ್ಟರೆ ಸಾಧನೆ ಸಾಧ್ಯ : ರಾಜೇಂದ್ರ ಸಣ್ಣಕ್ಕಿ
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಫೆ 19 :
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಾಲಾ ಮಕ್ಕಳು ಎಷ್ಟು ಓದಿದರೂ ಕಡಿಮೇ, ಪ್ರಾಮಾಣಿಕತೆ, ಶ್ರದ್ಧೆಯಿಂದ ಸತತ ಪರಿಶ್ರಮಪಟ್ಟರೆ ಸಾಧನೆ ಸಾಧ್ಯ ಎಂದು ಕೌಜಲಗಿ ಜಿಪಂ ಮಾಜಿ ಸದಸ್ಯ ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಸಮೀಪದ ಕೌಜಲಗಿ ಗ್ರಾಮದ ಕನಕ ಶಿಕ್ಷಣ ಸಂಸ್ಥೆಯ ಶ್ರೀ ಸಂಗೊಳ್ಳಿ ರಾಯಣ್ಣ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಶ್ರೀ ವೈ.ಎಲ್.ಸಣ್ಣಕ್ಕಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ(ಫೆ.16)ರಂದು ನಡೆದ ಶಾಲೆಯ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯತಿಥಿಗಳಾಗಿ ಮಾತನಾಡಿ, ಇಂದಿನ ದಿನಮಾನದಲ್ಲಿ ಪಾಲಕರು ಮಕ್ಕಳಿಗೆ ಶಿಕ್ಷಣ ಕೂಡಿಸಲು ಮುಂದಾಗಬೇಕು, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದರು.
ಸ್ಥಳೀಯ ಕನಕ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಮಂಜುನಾಥ ಸಣ್ಣಕ್ಕಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಕೌಜಲಗಿ ಅರ್ಬನ್ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಾನಂದ ಲೋಕನ್ನವರ, ಮೂರಾಜಿ ಶಾಲೆಯ ಮುಖ್ಯೋಪಾಧ್ಯಯ ಆನಂದ ಯರಗಟ್ಟಿ ಅತಿಥಿಗಳಾಗಿ ಮಾತನಾಡಿದರು.
ಉಭಯ ಶಾಲಾ ಮಕ್ಕಳಿಂದ ಯಕ್ಷಗಾನ ಸೇರಿದಂತೆ ವಿವಿಧ ಸಾಂಸ್ಕøತಿಕ, ಮನರಂಜನೆಯ ಕಾರ್ಯಕ್ರಮ ಜರುಗಿದವು. ಶಾಲೆಯಲ್ಲಿ ಪಾಲಕರಿಗೆ ಆಯೋಜಿಸಿದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಪಾಲಕರಿಗೆ, ವಿವಿಧ ವಲಯದಲ್ಲಿ ಸಾಧನೆಗೈದ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ವಿತರಿಸಲಾಯಿತು. ಇಲ್ಲಿಯ ಶಾಲಾ ಮಕ್ಕಳ ಯಕ್ಷಗಾನ ಪ್ರದರ್ಶನ ನೋಡುಗರು ಹುಬ್ಬೆರುಸುವಂತಿತ್ತು, ಶಾಲಾ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ವಿಕ್ಷೀಸಿ ಸ್ಥಳೀಯರು, ವಿದ್ಯಾರ್ಥಿಪಾಲಕರು ಸಂಭ್ರಮಿಸಿದರು.
ಮೆಳವಂಕಿ ಜಿಪಂ ಸದಸ್ಯೆ ಶಶಿಕಲಾ ಸಣ್ಣಕ್ಕಿ, ಗ್ರಾಪಂ ಮಾಜಿ ಅಧ್ಯಕ್ಷ ನೀಲಪ್ಪ ಕೇವಟಿ, ಗ್ರಾಪಂ ಅಧ್ಯಕ್ಷ ರಮಜಾನ್ ಪೊದಿ, ಅಶೋಕ ಉದ್ದಪ್ಪನ್ನವರ, ಎಸ್.ಬಿ.ಹಳ್ಳೂರ, ಅವ್ವಣ್ಣ ಮೋಡಿ, ರಾಯಪ್ಪ ಬಳೊಲದಾರ, ಬಸು ಜೋಗಿ, ಮಾಲತೇಶ ಸಣ್ಣಕ್ಕಿ, ಗಂಗಣ್ಣ ಲೋಕನ್ನವರ ಸೇರಿದಂತೆ ಗಣ್ಯರು, ಶಾಲೆಯ ಮುಖ್ಯೋಪಾಧ್ಯಯರು, ವಿದ್ಯಾರ್ಥಿ ಪಾಲಕರು, ಶಿಕ್ಷಕರು, ಸ್ಥಳೀಯರು, ಇತರರು ಇದ್ದರು.