RNI NO. KARKAN/2006/27779|Wednesday, December 25, 2024
You are here: Home » breaking news » ಗೋಕಾಕ:ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವದ ಪ್ರಜೆಗಳಾಗಬೇಕು : ಬಿಇಒ ಅಜೀತ ಮನ್ನಿಕೇರಿ

ಗೋಕಾಕ:ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವದ ಪ್ರಜೆಗಳಾಗಬೇಕು : ಬಿಇಒ ಅಜೀತ ಮನ್ನಿಕೇರಿ 

ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವದ ಪ್ರಜೆಗಳಾಗಬೇಕು : ಬಿಇಒ ಅಜೀತ ಮನ್ನಿಕೇರಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 20 :

 

 

ವಿದ್ಯಾರ್ಥಿಗಳು ಭವಿಷ್ಯ ಬದಲಾಯಿಸಿಕೊಳ್ಳಬೇಕಾದರೆ ಹವ್ಯಾಸಗಳನ್ನು ಬದಲಾಯಿಸಿಕೊಳ್ಳಬೇಕು. ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ, ಸಚ್ಛಾರಿತ್ರ್ಯ ವಿದ್ಯಾರ್ಥಿಗಳ ಆಧಾರಸ್ಥಂಭ ಎಂದು ಮೂಡಲಗಿ ಬಿಇಓ ಅಜೀತ ಮನ್ನಿಕೇರಿ ಹೇಳಿದರು.
ಬುಧವಾರ ತಾಲೂಕಿನ ಶಿಂದಿಕುರಬೇಟ ಗ್ರಾಮದ ಶ್ರೀ ಮಹಾಕಾಳಿ ಶಿಕ್ಷಣ ಸಂಸ್ಥೆಯ ಶ್ರೀ ಸಿದ್ಧರಾಮೇಶ್ವರ ಆದರ್ಶ ಕನ್ನಡ ಹಿರಿಯ ಅನುದಾನಿತ ಪ್ರಾಥಮಿಕ ಶಾಲೆಯ 7ನೇ ವರ್ಗದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ ಹಾಗೂ 31ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಹಿರಿಯ ಜೀವಿಗಳಿಗೆ ಸನ್ಮಾನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ದೃಢ ಪ್ರಯತ್ನ, ಆತ್ಮವಿಶ್ವಾಸಗಳೇ ಯಶಸ್ಸಿನ ಸಾಧನೆಯಾಗಿದೆ. ಮಹಾಕಾಳಿ ಶಿಕ್ಷಣ ಸಂಸ್ಥೆಯ ಸಾಧನೆ ಆದರ್ಶಪ್ರಾಯವಾಗಿದ್ದು ಎಲ್ಲ ರಂಗಗಳಲ್ಲಿ ಅದು ಉತ್ಕøಷ್ಟತೆಯನ್ನು ಹೊಂದಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ ಅವರು, ಪ್ರತಿಯೊಬ್ಬ ಮ್ಕಕಳಲ್ಲಿಯೂ ಪ್ರತಿಭೆ ಇದ್ದು ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಪಾಲಕರ ಮತ್ತು ಶಿಕ್ಷಕರ ಮೇಲಿದೆ. ಕಠಿಣ ಪರಿಶ್ರಮದಿಂದ ವಿದ್ಯಾರ್ಥಿಗಳು ಪ್ರಯತ್ನಶೀಲರಾಗಬೇಕು. ಇದಕ್ಕೆ ಪೂರಕವಾಗಿ ಸಹಕಾರ ಹಾಗೂ ಮಾರ್ಗದರ್ಶನವನ್ನು ಪಾಲಕರು ಮತ್ತು ಶಿಕ್ಷಕರು ನೀಡಬೇಕು. ಎಲೆಕ್ಟ್ರಾನಿಕ್ ಮಾಧ್ಯಮಗಳು ಒಳ್ಳೇಯ ಉದ್ದೇಶಕ್ಕೆ ಉಪಯೋಗಿಸಿ ಪ್ರತಿಭಾನ್ವಿತರಾಗಿರೆಂದು ಶುಭ ಹಾರೈಸಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಆಧುನಿಕ ತಾಂತ್ರಿಕತೆಯೊಂದಿಗೆ ಗುಣಮಟ್ಟದ ಶಿಕ್ಷಣ ದೊಂದಿಗೆ ಉತ್ತಮ ಸಂಸ್ಕಾರವನ್ನು ಶಿಕ್ಷಣ ಇಲಾಖೆ ನೀಡಲಾಗುತ್ತದೆ ಎಂದರು.
ಶಿಕ್ಷಕ ಗಿರೀಶ ಸಾಂಗಲಿ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಸಾಧನೆ ಮಾಡಲು ದೃಢ ಸಂಕಲ್ಪ ಮತ್ತು ಕಾರ್ಯತತ್ಪರೆಯಿಂದ ಕೆಲಸ ಮಾಡಿದಾಗ ಮಾತ್ರ ಏನನ್ನಾದರೂ ಸಾಧಿಸಬಹುದು. ಸ್ಪಷ್ಟ ಗುರಿ ಹಾಗೂ ಯೋಜನೆಗಳಿಂದ ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ತೊಡಗಬೇಕು.ವಿದ್ಯಾರ್ಥಿಗಳು ಉದಾತ್ತವಾದ ಗುರಿಯನ್ನು ಇಟ್ಟುಕೊಂಡು ಅದರ ಸಾಧನೆಗಾಗಿ ಶ್ರಮಿಸಬೇಕು ಮತ್ತು ಶಿಸ್ತು, ಸಮಯ ಪಾಲನೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಹೇಳಿ ಪಠ್ಯದ ಜೊತೆಗೆ ಪಠ್ಯೇತರ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳ ಕಡೆಗೆ ಆಸಕ್ತಿ ತೊರಬೇಕೆಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಅಂಕಲಗಿಯ ಶ್ರೀ ಅಡವಿಸಿದ್ದೇಶ್ವರ ಮಹಾಸ್ವಾಮಿಜಿ, ಶ್ರೀ ವಿಠ್ಠಲ ದೇವರ ದೇವಋಷಿಗಳಾದ ಮುರೇಪ್ಪ ಪೂಜೇರಿ ವಹಿಸಿದ್ದರು. ಶಾಲೆಯ ಅಧ್ಯಕ್ಷ ಜ್ಯೋತ್ತೆಪ್ಪ ಬಂತಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆ ಮೇಲೆ ಬಾಳಪ್ಪ ಕಡೇಲಿ, ಬಾಳಪ್ಪ ಗಾಡಿವಡ್ಡರ, ರಾಮು ಜೈನ, ಲಕ್ಷ್ಮಣ ಆಲೋಶಿ, ರಾಮಪ್ಪ ಗುಜನಟ್ಟಿ, ಮಲ್ಲಪ್ಪ ಹಳ್ಳಿ, ರಾಮಚಂದ್ರ ಕಾಳ್ಯಾಗೋಳ, ಸಿದ್ರಾಮ ಕಳಸನ್ನವರ, ವಿಠ್ಠಲ ಕಟ್ಟಿಕಾರ, ದಸ್ತಗೀರಸಾಬ ತಟಗಾರ, ರಮೇಶ ಮೇತ್ರಿ, ಪರಸಪ್ಪ ನಾಯಿಕ, ರಾಮು ಸಾಂಗಲಿ, ಶಂಕರ ನೀಲಗಾರ, ಶಂಕರ ಮಲಕನ್ನವರ, ತಮ್ಮಣ್ಣಾ ಭಜಂತ್ರಿ, ದಯಾನಂದ ಬೆಳಗಾವಿ, ಮಂಜುನಾಥ ಗುಡಕೇತ್ರ, ಸುಧೀರ ಜೋಡಟ್ಟಿ, ವಿಠ್ಠಲ ಕಾಶಪ್ಪಗೋಳ, ಕೆ.ಆರ್.ಅಜ್ಜಪ್ಪನವರ, ಮಾರುತಿ ಶಿರಗುರಿ, ಭೀಮಪ್ಪ ಕಳಸನ್ನವರ, ಮಹ್ಮದ ಇಸಾಕ ಅನಸಾರಿ, ರಾಮಪ್ಪ ಜೊತ್ತೇನ್ನವರ, ಬಡಪ್ಪ ಬಂಡಿವಡ್ಡರ, ಮಾನಿಂಗ ತೆಳಗೇರಿ ಸೇರಿದಂತೆ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯ ಜೀವಿಗಳನ್ನು ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪ್ರಧಾನ ಗುರು ಎಂ.ಆರ್.ಕಡಕೋಳ ಸ್ವಾಗತಿಸಿದರು. ಎಸ್.ಎಸ್.ದೊಡಮನಿ ನಿರೂಪಿಸಿದರು. ಎಸ್.ಆರ್.ತರಾಳ ವಂದಿಸಿದರು.

Related posts: