RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಏಕಕಾಲಕ್ಕೆ 25 ಸಾವಿರ ಸಸಿ ನೆಡುವ ಕಾರ್ಯಕ್ಕೆ ಹರಿದು ಬಂದ ಜನ ಸಾಗರ

ಗೋಕಾಕ:ಏಕಕಾಲಕ್ಕೆ 25 ಸಾವಿರ ಸಸಿ ನೆಡುವ ಕಾರ್ಯಕ್ಕೆ ಹರಿದು ಬಂದ ಜನ ಸಾಗರ 

ಏಕಕಾಲಕ್ಕೆ 25 ಸಾವಿರ ಸಸಿ ನೆಡುವ ಕಾರ್ಯಕ್ಕೆ ಹರಿದು ಬಂದ ಜನ ಸಾಗರ

ಗೋಕಾಕ ಅ 13: ಕರ್ನಾಟಕ ರಕ್ಷಣಾ ವೇದಿಕೆ,ಮಠಾಧೀಶರ ವೇದಿಕೆ ಆಶ್ರಯದಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಮತ್ತು ವಿವಿದ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಸಿರು ಗೋಕಾಕಗಾಗಿ ಒಂದು ದಿನ ನಿಮಿತ್ಯ ಏಕ ಕಾಲಕ್ಕೆ ಸುಮಾರು 25 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತ ಪಡಿಸಿ ಕರವೇ ಬಡಿಗವಾಡ ಘಟಕ ,ಅರಣ್ಯ ಇಲಾಖೆ, ಗ್ರಾ.ಮ ಪಂಚಾಯತಿ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ತವಗ ಗ್ರಾಮದ ಸರಕಾರಿ ಆಸ್ಪತ್ರೆ ಆವರಣ ಹಾಗೂ ಪಂಚಾಯತಿ ವ್ಯಾಪ್ತಿಯಲ್ಲಿ ಮುಂಜಾನೆ ಸರಿಯಾಗಿ 11 ಗಂಟೆಗೆ ಏಕಕಾಲಕ್ಕೆ ಸುಮಾರು 2000 ಸಸಿಗಳನ್ನು ನೆಡಲಾಯಿತು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಗಂಗವ್ವಾ ನಿಂ ಮಾಯನ್ನವರ, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಬಾಳೇಶ ಜುಪ್ರಿ, ಗೋಕಾಕ ಸಪ್ಲಾಯರ್ಸರಾದ ಬಸವರಾಜ ಬಾ ಹತ್ತರಗಿ ತಾ.ಪಂ ಸದಸ್ಯರು ಶಿವಾನಂದ ತವಗಮಠ, ಡಾ|| ಶಿವಶಂಕರ ಹೀರೆಮಠ ಹಾಗೂ ಸಿಬಂದ್ದಿಗಳು ಹಾಗೂ ಗ್ರಾಮಸ್ಥರಾದ ಭೀರಪ್ಪ ಪೂಜೇರಿ, ನಿಂಗಪ್ಪ ಹತ್ತರಕಿ, ಸಿದ್ಲಿಂಗಯ್ಯ ಹೀರೆಮಠ ಅರಣ್ಯ ಇಲಾಖೆಯ ಸಿಬಂದ್ದಿಗಳಾದ ಪಿ.ಬಿ.ಶಿರಗಾಂವಕರ, ಎಮ್.ಬಿ.ಹೆಬ್ಬಾಳ, ಎಸ್ ಎ. ಜಕಾತಿ, ಎಸ್.ಎಸ್.ಗಸ್ತಿ, ಕರವೇ ಅಧ್ಯಕ್ಷರಾದ ಮಲ್ಲಪ್ಪ ಸಂಪಗಾರ ಹಾಗೂ ಪದಾಧೀಕಾರಿಗಳಾದ ಶಿವು ಕಮತಿ, ಗಣಪತಿ ಜಾಗನೂರ, ಗಣಪತಿ ಸಂಪಗಾರ, ರಾಮಚಂದ್ರ ಕಟ್ರಿ, ಸೇರಿದಂತೆ ಇನ್ನು ಹಲವರು ಉಪಸ್ಥಿತರಿದ್ದರು

Related posts: