ಗೋಕಾಕ:ದೇಶದ್ರೋಹ ಅಮೂಲ್ಯಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಕರವೇ ಆಗ್ರಹ : ಅಮೂಲ್ಯಳ ಪ್ರತಿಕೃತಿ ದಹಿಸಿ ಆಕ್ರೋಶ
ದೇಶದ್ರೋಹ ಅಮೂಲ್ಯಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಕರವೇ ಆಗ್ರಹ : ಅಮೂಲ್ಯಳ ಪ್ರತಿಕೃತಿ ದಹಿಸಿ ಆಕ್ರೋಶ ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 21 : ದೇಶದ್ರೋಹ ಘೋಷಣೆ ಕೂಗಿದ ಅಮೂಲ್ಯಗೆ ಗಲ್ಲು ಶಿಕ್ಷೆ ವಿದಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿಸಿದರು ಶುಕ್ರವಾರದಂದು ನಗರದ ವಾಲ್ಮೀಕಿ ವೃತ್ತದಲ್ಲಿ ಸೇರಿದಂತೆ ಕರವೇ ಕಾರ್ಯಕರ್ತರು ದೇಶದ್ರೋಹಿ ಅಮೂಲ್ಯಳ ವಿರುದ್ಧ ಘೋಷಣೆಗಳನ್ನು ಕೂಗಿ ಅವಳ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಪ್ರತಿಭಟನೆಯ ನೆಪದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯಳ ಕ್ರಮ ಖಂಡನಾರ್ಹವಾಗಿದ್ದು, ಸರಕಾರ ದೇಶದ್ರೋಹ ಘೋಷಣೆ ಕೂಗಿದ ಅಮೂಲ್ಯ ಲಿಯೋನಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ದೇಶದ್ರೋಹ ಕಾನೂನಿನಲ್ಲಿ ತಿದ್ದುಪಡಿ ತಂದು ದೇಶಕ್ಕೆ ದ್ರೋಹ ಬಗೆಯುವ ಯಾವದೇ ವ್ಯಕ್ತಿ ಅಥವಾ ಶಕ್ತಿಗಳಿಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಗಲುಶಿಕ್ಷೆ ವಿಧಿಸುವಂತಾಗಬೇಕು ಈ ಕುರಿತು ಕೇಂದ್ರ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕರವೇ ವತಿಯಿಂದ ದೇಶದ್ರೋಹ ಕಾನೂನಿನಲ್ಲಿ ತಿದ್ದುಪಡಿ ಮಾಡಿ ಗಲ್ಲುಶಿಕ್ಷೆಗೆ ಗುರಿ ಪಡಿಸಬೇಕೆಂದು ಒತ್ತಾಯಿಸಲು ದೆಹಲಿಯ ಜಂತರ ಮಂಥರನಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದ ಖಾನಪ್ಪನವರ ಸರಕಾರ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ದೇಶದ್ರೋಹಿ ಅಮೂಲ್ಯಳಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು ಪ್ರತಿಭಟನೆಯಲ್ಲಿ ಸಾದಿಕ ಹಲ್ಯಾಳ , ಮಂಜು ಪ್ರಭುನಟ್ಟಿ, ಯಲ್ಲಪ್ಪ ಧರ್ಮಟ್ಟಿ, ಮುಗುಟು ಪೈಲವಾನ, ಸಂತೋಷ ಕೋಲಕಾರ, ನಿಜಾಮ ನಧಾಫ್, ಕೃಷ್ಣಾ ಖಾನಪ್ಪನವರ, ಕಿರಣ ವಾಲಿ, ರಫೀಕ ಗುಳೆದಗುಡ್ಡ, ಅಬ್ಬು ಮುಜಾವರ, ಬಸವರಾಜ ಗಾಡಿವಡ್ಡರ, ಹನೀಫಸಾಬ ಸನದಿ, ಯಾಸೀನ ಮುಲ್ಲಾ ಸೇರಿದಂತೆ ಇತರರು ಇದ್ದರು .