RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಭಗವಂತನ ಸ್ಮರಣೆಯನ್ನು ಮಾಡದಿದ್ದರೇ ಮಾನವರ ಜೀವನ ವ್ಯರ್ಥವಾಗುತ್ತದೆ : ಮುರುಘರಾಜೇಂದ್ರ ಶ್ರೀ

ಗೋಕಾಕ:ಭಗವಂತನ ಸ್ಮರಣೆಯನ್ನು ಮಾಡದಿದ್ದರೇ ಮಾನವರ ಜೀವನ ವ್ಯರ್ಥವಾಗುತ್ತದೆ : ಮುರುಘರಾಜೇಂದ್ರ ಶ್ರೀ 

ಭಗವಂತನ ಸ್ಮರಣೆಯನ್ನು ಮಾಡದಿದ್ದರೇ ಮಾನವರ ಜೀವನ ವ್ಯರ್ಥವಾಗುತ್ತದೆ : ಮುರುಘರಾಜೇಂದ್ರ ಶ್ರೀ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 22 :

 

 

ಶಿವರಾತ್ರಿಯಂದು ಶಿವನ ಚಿಂತನೆ ಮಾಡಿ, ಮಾನವ ಜನ್ಮವನ್ನು ಸಾರ್ಥಕ ಮಾಡಿಕೊಳ್ಳುವಂತೆ ಇಲ್ಲಿಯ ಶೂನ್ಯ ಸಂಪಾದನಾಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಅವರು ಶನಿವಾರದಂದು ಇಲ್ಲಿಯ ವಿವೇಕಾನಂದ ನಗರದಲ್ಲಿಯ ಶ್ರೀ ಶಿವಲಿಂಗೇಶ್ವರ 12ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡುತ್ತಿದ್ದರು.
ಭಗವಂತ ನಮಗೆ ಎಲ್ಲವನ್ನು ನೀಡಿದ್ದು, ಭಗವಂತನ ಸ್ಮರಣೆಯನ್ನು ಮಾಡದಿದ್ದರೇ ಮಾನವರ ಜೀವನ ವ್ಯರ್ಥವಾಗುತ್ತದೆ. ಮನಸ್ಸಿನ ಮೈಲಿಗೆಯನ್ನು ಕಳೆಯಲು ದೇವರ ಚಿಂತನೆಯನ್ನು ಮಾಡಿ ಜಾಗ್ರರಣೆಯಿಂದ ಜಾಗೃತರಾಗಿ ಶಿವನ ಆರಾಧನೆಯನ್ನು ಮಾಡಲು ತಿಳಿಸಿದ ಅವರು, ಜ್ಞಾನ ದಾಸೋಹ, ಅನ್ನ ದಾಸೋಹದ ಜೊತೆಗೆ ಮಕ್ಕಳಿಗಾಗಿ ಕ್ರೀಡೆಗಳನ್ನು ಆಯೋಜಿಸುತ್ತಿರುವದು ಇಂದಿನ ಅವಶ್ಯಕತೆಯಾಗಿದೆ. ಇದರಿಂದ ನಗರದ ಮಾನಸಿಕ ನೆಮ್ಮದಿ ಕಾಣುವದು ಸಾಧ್ಯವಾಗುತ್ತದೆ. ಇಂತಹ ಮಾಡುತ್ತಿರುವ ಶ್ರೀ ಶಿವಲಿಂಗೇಶ್ವರ ವಿಕಾಸ ಸಮಿತಿಯವರ ಕಾರ್ಯ ಇತರರಿಗೂ ಮಾದರಿಯಾಗಿದೆ ಎಂದರು.
ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಶಿವಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ, ಸುಮಂಗಲೆಯರಿಂದ ಆರತಿ, ದೀಪೋತ್ಸವ, ಉಡಿ ತುಂಬುವ ಕಾರ್ಯಕ್ರಮ, ಭಜನೆ ಹಾಗೂ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳ ಜರುಗಿದವು.
ಈ ಸಂದರ್ಭದಲ್ಲಿ ಹೂಲಿಕಟ್ಟಿಯ ಶ್ರೀ ಕುಮಾರ ದೇವರು, ನಗರಸಭೆ ಸದಸ್ಯರಾದ ಶ್ರೀಮತಿ ಭಾರತಿ ಹತ್ತಿ, ಶ್ರೀಶೈಲ ಯಕ್ಕುಂಡಿ, ನಿವೃತ್ತ ಅಭಿಯಂತರ ಎಮ್.ಎಸ್.ವಾಲಿ, ಗುತ್ತಿಗೆದಾರ ಎಸ್.ಆರ್.ಕಪ್ಪಲಗುದ್ದಿ, ವಿಕಾಸ ಸಮಿತಿ ಅಧ್ಯಕ್ಷ ಬಿ.ಬಿ. ಕಾಪಸಿ, ಸದಸ್ಯರಾದ ಜೀವಪ್ಪ ಬಡಿಗೇರ, ಭೀಮಪ್ಪ ಗೋಲಭಾಂವಿ, ವೀರಭದ್ರ ಶೇಬಣ್ಣವರ ಅಶೋಕ ಗೋಣಿ, ಉದಯ ಬನ್ನಿಶೆಟ್ಟಿ, ಈಶ್ವರ ಪಾಟೀಲ, ಲಕ್ಕಪ್ಪ ಕೊತ್ತಲ, ಬಾಳೇಶ ಕರಿಗಾರ, ಶಿದ್ಲಿಂಗಪ್ಪ ದಾಸಪ್ಪನವರ, ಅಮರಗುಂಡಪ್ಪ ಬಿಜ್ಜಳ, ಶ್ರೀಮತಿ ಸುನಂದಾ ಮನ್ನಿಕೇರಿ, ಶ್ರೀಮತಿ ಜಗದೇವಿ ಭೋಸಗಾ, ಶ್ರೀಮತಿ ಉಮಾದೇವಿ ಹಿರೇಮಠ, ಶ್ರೀಮತಿ ಪ್ರೇಮಲತಾ ಕಡಗದ ಸೇರಿದಂತೆ ಅನೇಕರು ಇದ್ದರು.
ಶಿಕ್ಷಕ ಕೆ.ಎ.ಕೊಲ್ಹಾಪೂರ ಸ್ವಾಗತಿಸಿದರು, ಶೈಲಾ ಕೊಕ್ಕರಿ ನಿರೂಪಿಸಿ ವಂದಿಸಿದರು.

Related posts: