ಘಟಪ್ರಭಾ:ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರಿಗಿಂತ ನರ್ಸಗಳ ಜವಾಬ್ದಾರಿ ಹೆಚ್ಚಾಗಿದೆ : ಉಷಾ ಭಂಡಾರಿ
ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರಿಗಿಂತ ನರ್ಸಗಳ ಜವಾಬ್ದಾರಿ ಹೆಚ್ಚಾಗಿದೆ : ಉಷಾ ಭಂಡಾರಿ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಫೆ 22 :
ನರ್ಸ ಓರ್ವ ತಾಯಿ ಇದ್ದಂತೆ. ತಾಯಿ ತನ್ನ ಎಲ್ಲ ಮಕ್ಕನ್ನು ಭೇದ ಭಾವ ಮಾಡದೇ ಯಾವ ರೀತಿ ಜೋಪಾನ ಮಾಡುತ್ತಾಳೆ. ಅದೇ ರೀತಿ ಓರ್ವ ನರ್ಸ ತಮ್ಮ ಜೀವನವನ್ನು ಯಾವದೇ ರೋಗಿಯಲ್ಲಿ ತಾರತಮ್ಯ ಮಾಡದೇ ಅವರ ಸೇವೆಗೆ ಮೀಸಲಿಡಬೇಕೆಂದು ರಾಜ್ಯ ನರ್ಸಿಂಗ ಕೌನ್ಸಿಲ್ ಬೆಂಗಳೂರು ಇದರ ಉಪ ನಿರ್ದೇಶಕರಾದ ಉಷಾ ಭಂಡಾರಿ ಹೇಳಿದರು.
ಅವರು ಶನಿವಾರ ಸ್ಥಳೀಯ ಜೆ.ಜಿ ಆಸ್ಪತ್ರೆ ಸಂಸ್ಥೆಯ ನರ್ಸಿಂಗ ಕಾಲೇಜಿನ ವಾರ್ಷಿಕೋತ್ಸವ ಮತ್ತು ದೀಪ ಬೆಳಗಿಸುವದರ ಮೂಲಕ ಪ್ರತಿಜ್ಞಾ ವಿಧಿ ಭೋದಿಸುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ನರ್ಸಗಳು ದೀಪದಂತೆ ಬದುಕಬೇಕು. ದೀಪವು ಯಾವ ರೀತಿ ತನ್ನನ್ನು ತಾವು ಉರಿದುಕೊಂಡು ಇನ್ನೊಬ್ಬರಿಗೆ ಬೆಳಕು ಕೊಡುತ್ತದೆ. ಆದೇ ರೀತಿ ನರ್ಸಗಳು ತಮ್ಮ ಜೀವನವನ್ನು ಎಲ್ಲ ರೋಗಿಗಳ ನಿಸ್ವಾರ್ಥ ಸೇವೆಗೆ ಮೀಸಲಿಡಬೇಕು.
ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರಿಗಿಂತ ನರ್ಸಗಳ ಜವಾಬ್ದಾರಿ ಹೆಚ್ಚಾಗಿದೆ. ವೈದ್ಯರು ವಿದ್ಯಾಬ್ಯಾಸ ಮುಗಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಾರೆ. ಆದರೆ ನರ್ಸಗಳು ವಿದ್ಯಾಬ್ಯಾಸದ ಪ್ರಾರಂಭದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಿರುದು ಅವರ ಮೇಲಿರುವ ಜವಾಬ್ದಾರಿಗೆ ಉದಾಹರಣೆಯಾಗಿದೆ. ನರ್ಸಿಂಗ ಕ್ಷೇತ್ರಕ್ಕೆ ಉತ್ತಮ ಭವಿಷ್ಯವಿದ್ದು ವಿದ್ಯಾರ್ಥಿಗಳು ಇದನ್ನು ಅರಿತು ವಿದ್ಯಾಭ್ಯಾಸ ಮಾಡಿ ತಾವು ಕಲಿತಂತಹ ಕಾಲೇಜಿಗೆ ಹೆಸರು ತರಬೇಕೆಂದು ಹೇಳಿದರು.
ರಾಜ್ಯ ಸರ್ಕಾರದಿಂದ ನೈಂಟಿಂಗೆಲ್ ಪ್ರಶಸ್ತಿ ಪುರಸ್ಕøತರಾದ ಸಂಸ್ಥೆಯ ಹಳೆಯ ವಿದ್ಯಾರ್ಥಿನಿ ನರ್ಸ ಶ್ರೀದೇವಿ ಶರಪ್ಪನವರ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಪೂಜ್ಯರ ಹೆಸರಿನಲ್ಲಿ ಪ್ರಾರಂಭವಾದ ಜೆ.ಜಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುತ್ತಿದೆ. ನರ್ಸಗಳು ತಮ್ಮ ಜವಾಬ್ದಾರಿಯನ್ನು ಅರಿತು ಸೇವೆಯನ್ನು ಮಾಡಬೇಕೆಂದು ಹೇಳಿದರು.
ನರ್ಸಿಂಗ ಕಾಲೇಜಿನ ಪ್ರಾಂಶುಪಾಲರಾದ ಸಿದ್ಧುಸಿಂಗ ಹಜಾರೆ ಪ್ರಾಸ್ತಾವಿವಾಗಿ ಮಾತನಾಡಿ ವರದಿ ವಾಚನ ಮಾಡಿದರು. ನರ್ಸಿಂಗ ಶಾಲೆಯ ಪ್ರಾಂಶುಪಾಲ ಗಣಪತಿ ಮಾರಿಹಾಳ 31ನೇ ಬ್ಯಾಚಿನ ಜಿ.ಎನ್.ಎಂ ಹಾಗೂ 18 ಬ್ಯಾಚಿನ ಬಿ.ಎಸ್.ಸಿ ನರ್ಸಿಂಗ ವಿದ್ಯಾರ್ಥಿಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಬಿ.ಆರ್.ಪಾಟೀಲ(ನಾಗನೂರ) ವಹಿಸಿದ್ದರು. ವೇದಿಕೆ ಮೇಲೆ ಸಂಸ್ಥೆಯ ಉಪಾಧ್ಯಕ್ಷ ಎ.ಎನ್.ಕರಲಿಂಗನವರ, ನಿರ್ದೇಶಕರಾದ ಅಪ್ಪಯ್ಯಾ ಬಡಕುಂದ್ರಿ, ಚಂದ್ರಶೇಖರ ಕಾಡದವರ, ಸುರೇಶ ಕಾಡದವರ, ಆರ್.ಟಿ.ಶಿರಾಳಕರ, ಎಸ್.ಎಂ.ಚಂದರಗಿ, ಆಶಾದೇವಿ ಕತ್ತಿ, ಬಿ.ಎಚ್.ಇನಾಮದಾರ, ಸಿಇಓ ಬಿ.ಕೆ.ಎಚ್.ಪಾಟೀಲ ಇದ್ದರು.
ಡಾ.ಡಾ.ಹೊಸಮಠ, ಡಾ. ಜೆ.ಕೆ.ಶರ್ಮಾ, ಮ್ಯಾನೇಜರ ಎಲ್.ಎಸ್.ಹಿಡಕಲ್ ಸೇರಿದಂತೆ ಸಂಸ್ಥೆಯ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಶಿಕ್ಷಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.