ಗೋಕಾಕ:28 ಮತ್ತು 29ರಂದು ಸದ್ಗುರು ಬಾಳಯ್ಯ ಮಹಾಸ್ವಾಮಿಗಳ ಶಿವರಾತ್ರಿ ಜಾತ್ರಾ ಮಹೋತ್ಸವ
28 ಮತ್ತು 29ರಂದು ಸದ್ಗುರು ಬಾಳಯ್ಯ ಮಹಾಸ್ವಾಮಿಗಳ ಶಿವರಾತ್ರಿ ಜಾತ್ರಾ ಮಹೋತ್ಸವ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 24 :
ತಾಲೂಕಿನ ಪಂಚಮಠಗಳಲ್ಲಿ ಒಂದಾದ ಶ್ರೀ ಕ್ಷೇತ್ರ ತವಗ ಮಠದ ಸದ್ಗುರು ಬಾಳಯ್ಯ ಮಹಾಸ್ವಾಮಿಗಳ ಶಿವರಾತ್ರಿ ಜಾತ್ರಾ ಮಹೋತ್ಸವ ಇದೆ. ದಿ.28 ಮತ್ತು 29ರಂದು ಜರುಗಲಿದೆ.
ಶುಕ್ರವಾರ ದಿ.28ರಂದು ಕರ್ತೃ ಗದ್ದುಗೆ ಪೂಜಾಭಿಷೇಕ. ರಾತ್ರಿ 10 ಗಂಟೆಗೆ ಸಕಲ ವಾದ್ಯ ಮೇಳದೊಂದಿಗೆ ದೇವರುಗಳ ಪಲ್ಲಕ್ಕಿ ಕರೆ ತರುವದು. ಶನಿವಾರ ದಿ.29ರಂದು ಮುಂಜಾನೆ 10ಗಂ ಪ್ರಸಾದ ಪೂಜೆಯೊಂದಿಗೆ ಮಹಾದಾಸೋಹ ಕಾರ್ಯಕ್ರಮ ಮಧ್ಯಾಹ್ನ 2ಗಂ ಪಂಚಮ ಪೀಠಾಧಿಕಾರಿ ಬ್ರಹ್ಮಶ್ರೀ ಸಿದ್ಧಲಿಂಗಯ್ಯ ಮಹಾಸ್ವಾಮಿಗಳವರ ತುಲಾಭಾರ ಕಾರ್ಯಕ್ರಮ ಹಾಗೂ ಸಾಯಂಕಾಲ 5ಗಂ ದೇವನುಡಿ ನಡೆಯಲಿದೆ ಎಂದು ಜಾತ್ರಾ ಕಮೀಟಿ ಪ್ರಕಟನೆಯಲ್ಲಿ ತಿಳಿಸಿದೆ.