ಗೋಕಾಕ:ವಿದ್ಯಾರ್ಥಿಗಳು ಪೂರ್ವ ತಯಾರಿಯಿಂದ ಪರೀಕ್ಷೆಯನ್ನು ಎದುರಿಸಲು ಸಿದ್ಧರಾಗಬೇಕು : ಶ್ವೇತಾ ಎಮ್. ಬೀಡಿಕರ
ವಿದ್ಯಾರ್ಥಿಗಳು ಪೂರ್ವ ತಯಾರಿಯಿಂದ ಪರೀಕ್ಷೆಯನ್ನು ಎದುರಿಸಲು ಸಿದ್ಧರಾಗಬೇಕು : ಶ್ವೇತಾ ಎಮ್. ಬೀಡಿಕರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ, 27 ;
– ಇದೇ ಮಾರ್ಚನಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪೂರ್ವ ತಯಾರಿಯಿಂದ ಪರೀಕ್ಷೆಯನ್ನು ಎದುರಿಸಲು ಸಿದ್ಧರಾಗಬೇಕು. ಯಾರೂ ಧೈರ್ಯ ಕುಂದಿಸಿಕೊಳ್ಳುವ ಅವಶ್ಯಕತೆಯಿಲ್ಲ. ಮಾನಸಿಕವಾಗಿ ಪರೀಕ್ಷೆ ಬರೆದು ಹೆಚ್ಚಿನ ಅಂಕ ಪಡೆಯುವುದರ ಜೊತೆಗೆ ಯಶಸಸ್ಸು ಸಾಧಿಸಬೇಕೆಂದು ಕಂದಾಯ ಇಲಾಖೆಯ ಉಪವಿಭಾಗದ ಅಧಿಕಾರಿ ಕುಮಾರಿ. ಶ್ವೇತಾ ಎಮ್. ಬೀಡಿಕರ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ನವ ಜೀವನ ಮಿಷನ್ ಪ್ರೌಢ ಶಾಲೆಯಲ್ಲಿ ಬುಧವಾರದÀಂದು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳು ಸುಲಭವಾಗಿ ಪರೀಕ್ಷೆ ಎದುರಿಸಲು ಮಾನಸಿಕವಾಗಿ ಸಧೃಢವಾಗುವುದರ ಮೂಲಕ ಕಠಿಣ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಳ್ಳಲು ಸುಲಭವಾದ ಅಧ್ಯಯನದ ಸೂತ್ರಗಳನ್ನು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಬಾಬು ವರ್ಗೀಸ್, ಶ್ರೀಮತಿ. ಆಲೀಸ್ ವರ್ಗೀಸ್, ಚೇರಮನ್‍ರಾದ ಡಾ. ಜೇಮ್ಸ್ ವರ್ಗೀಸ್, ಕಾರ್ಯದರ್ಶಿಗಳಾದ ಶ್ರೀಮತಿ ವಿದ್ಯಾ ವರ್ಗೀಸ್, ಪ್ರಾಂಶುಪಾಲರಾದ ಮ್ಯಾಥ್ಯು ವರ್ಗೀಸ್, ಮುಖ್ಯೋಪಾದ್ಯಾಯರಾದ ಸಂತೋಷ ಪಾಟೀಲ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.