RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ :ಹಸಿರು ಗೋಕಾಕಗಾಗಿ ಒಂದು ಕಾರ್ಯಕ್ರಮಕ್ಕೆ ಹರಿದು ಬಂದ ಜನಸಾಗರ : ವೃಕ್ಷಗಳನ್ನು ರಕ್ಷಿಸುವ ಜಾಗೃತಿ ವಾಗಬೇಕಾಗಿದೆ ಮುರಘರಾಜೇಂದ್ರ ಶ್ರೀ

ಗೋಕಾಕ :ಹಸಿರು ಗೋಕಾಕಗಾಗಿ ಒಂದು ಕಾರ್ಯಕ್ರಮಕ್ಕೆ ಹರಿದು ಬಂದ ಜನಸಾಗರ : ವೃಕ್ಷಗಳನ್ನು ರಕ್ಷಿಸುವ ಜಾಗೃತಿ ವಾಗಬೇಕಾಗಿದೆ ಮುರಘರಾಜೇಂದ್ರ ಶ್ರೀ 

ಹಸಿರು ಗೋಕಾಕಗಾಗಿ ಒಂದು ಕಾರ್ಯಕ್ರಮಕ್ಕೆ ಹರಿದು ಬಂದ ಜನಸಾಗರ : ವೃಕ್ಷಗಳನ್ನು ರಕ್ಷಿಸುವ ಜಾಗೃತಿ ವಾಗಬೇಕಾಗಿದೆ ಮುರಘರಾಜೇಂದ್ರ ಶ್ರೀ

ಗೋಕಾಕ ಅ 13: ಜಗತ್ತಿನಲ್ಲಿ ಪ್ರಕೃತಿ ಕೊಡುಗೆಗಳಾದ ವೃಕ್ಷ,ಆಕಳು,ನದಿಗಳು ಪರೋಪಕಾರಿ ಕಾರ್ಯನಿರ್ವಹಿಸಿ ಮನಕೂಲವನ್ನು ಸಂವರಕ್ಷೀಸುತ್ತಿರುವ ಹಾಗೆ ಇಂದು ಅವಗಳನ್ನು ಉಳಿಸಿ ಬೆಳಸುವ ಪವಿತ್ರ ಕಾರ್ಯನಿರ್ವಹಿಸಬೇಕಾಗಿದೆ ಎಂದು ಸ್ಥಳಿಯ ಶೂನ್ಯ ಸಂಪಾದನಮಠದ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು ಹೇಳಿದ್ದರು.

ಅವರು ಅರಣ್ಯ ಇಲಾಖೆ, ಗೋಕಾಕ ಕರ್ನಾಟಕ ರಕ್ಷಣಾ ವೇದಿಕೆ,ಮಠಾಧೀಶರ ವೇದಿಕೆ, ತಾಲೂಕಿನ ವಿವಿಧ ಸಂಘಟನೆಗಳ ಮತ್ತು ವಿವಿದ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಇಂದು ನಗರದ ಹೊರವಲಯ ಮೇಹದಿ ನಗರದಲ್ಲಿ ಹಮ್ಮಿಕೊಂಡ ಹಸಿರು ಗೋಕಾಕಗಾಗಿ ಒಂದು ದಿನ ತಾಲುಕಿನಾದ್ಯಂತ ಏಕ ಕಾಲಕ್ಕೆ ಸುಮಾರು 25 ಸಾವಿರ ಸಸಿ ನೆಡುವ ಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸಿ ಮಾತನಾಡಿದರು.
ವೃಕ್ಷಗಳಿಂದ ಆಗುವ ಲಾಭಗಳ ಬಗ್ಗೆ ಅರಿತಿರುವ ಮನಕೂಲ ಅರಣ್ಯ ನಾಶ ಮಾಡುವುದ್ದನ್ನು ಬಿಟ್ಟು ಅವುಗಳ ಸಂವರಕ್ಷೀಸುವ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತಮ್ಮನು ತಾವು ತೊಡಗಿಸಿಕೋಳ್ಳಬೆಕಾಗಿದೆ ಅಂದಾಗ ಮಾತ್ರ ನಮ್ಮ ಭವ್ಯ ಅರಣ್ಯ ಸಂಪತ್ತು ಹಚ್ಚ ಹಸಿರಾಗಲು ಸಾದ್ಯ ಆ ದಿಶೆಯಲ್ಲಿ ತಾಲೂಕಿನ ಎಲ್ಲ ಸಂಘ ಸಂಸ್ಥೆ ಮತ್ತು ಇಲಾಖೆಗಳ ಸಹಯೋಗದಲ್ಲಿ ಇಂದು ಗೋಕಾಕ ತಾಲೂಕಿನಾದ್ಯಂತ ಏಕಕಾಲಕ್ಕೆ 25000 ಸಾವಿರ ಸಸಿಗಳನ್ನು ನೆಡಲಾಗಿದೆ ಎಲ್ಲರೂ ಒಗಟ್ಟಾಗಿ ಅವಗಳನ್ನು ರಕ್ಷಿಸಿ ಉಳಿಸಿ ಬೇಳೆಸಲ್ಲು ಕಂಕಣ ಬದ್ದರಾಗಬೇಕಾಗಿದೆ ಎಂದು ಶ್ರೀಗಳು ಹೇಳಿದ್ದರು.

ಕರವೇ ತಾಲೂಕ ಅದ್ಯಕ್ಷ ಬಸವರಾಜ ಖಾನಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ದೇವರಾಜ, ಸಾಹಿತಿ ಡಾ|| ಸಿ.ಕೆ.ನಾವಲಗಿ ಪರಿಸರ ಸಂರಕ್ಷಣೆ ಕುರಿತು ಮಾತನಾಡಿದರು.

ಇಂದು ಮುಂಜಾನೆ ಸರಿಯಾಗಿ 11 ಘಂಟೆಗೆ ಕಾರ್ಮಿಕ ಧುರಿಣ ಅಂಭಿರಾವ್ ಪಾಟೀಲ ಸಸಿ ನೆಡುವ ಮೂಲಕ ಏಕಕಾಲಕ್ಕೆ 25 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಎ.ಪಿ.ಎಮ್.ಸಿ.ಅಧ್ಯಕ್ಷ ಅಡಿವೆಪ್ಪಾ ಕಿತ್ತೂರ ಕ್ಷೇತ್ರಶೀಕ್ಷಣಾಧಿಕಾರಿ ಜಿ.ಬಿ.ಬಳಗಾರ ಜಿ.ಪಂ. ಸದಸ್ಯರುಗಳಾದ ಟಿ.ಆರ್.ಕಾಗಲ, ಮಡ್ಡೇಪ್ಪಾ ತೋಳಿನವರ,ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಾರುತಿ ಪಾತ್ರೋಟ, ಸಂಗೋಳಿ, ವಲಯ ಅರಣ್ಯಾಧಿಕಾರಿ ಉಪ್ಪಾರ, ನಗರ ಸಭೆ ಸದಸ್ಯರುಗಳಾದ ಎಸ್.ಎ.ಕೂತವಾಲ, ಪರಶುರಾಮ ಭಗತ್, ಭೀಮಶಿ ಭರಮನ್ನವರ, ನಿವೃತ್ತ ಅರಣ್ಯಾಧಿಕಾರಿ ಎಸ್.ಸಿ.ಪಾಟೀಲ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಹನಮಂತ ಇಂಗಳಗಿ, ಸತೀಶ ಮುಂಗರವಾಡಿ, ಗೋಪಾಲ ಮಾಳಗಿ ಕರವೇ ಪದಾಧಿಕಾರಿಗಳಾದ ಸಾದಿಕ್ ಹಲ್ಯಾಳ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷೆ ಶ್ರೀಮತಿ ಯಶೋಧಾ ಬಿರಡಿ, ಕೃಷ್ಣಾ ಖಾನಪ್ಪನವರ, ಮುಗುಟ ಪೈಲವಾನ, ಶಟ್ಟೇಪ್ಪ ಗಾಡಿವಡ್ಡರ, ರಹೀಮಾನ್ ಮೂಕಾಶಿ, ಮಲ್ಲಪ್ಪ ತಲೆಪ್ಪಗೋಳ, ಅಬ್ದುಲ್ ಪೀರಜಾದೆ, ಅಶೋಕ ಓಸ್ವಾಲ, ಲಕ್ಕಪ್ಪ ನಂದಿ, ರಮೇಶ ನಾಕಾ. ಸೇರಿದಂತೆ ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಇದೇ ಸಂಧರ್ಬದಲ್ಲಿ ನಗರದ ಪ್ರವೀಣ ಶಹಾರವರು ತಮ್ಮ 60ನೇ ಹುಟ್ಟುಹಬ್ಬವನ್ನು ಸಸಿ ನೆಡುವುದರ ಮುಖಾಂತರ ಆಚರಿಸಿಕೊಂಡರು.

ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿ ಕರ್ನಾಟಕ ಯುವ ಸೇನೆ, ಕರವೇ ಸ್ವಾಭಿಮಾನಿ ಬಣ, ಸಿರಿಗ್ನಡ ಮಹೀಳಾ ವೇದಿಕೆ, ಜೆ.ಸಿ.ಐ ಸಂಸ್ಥೆ, ವೃತ್ತಿನಿರತ ಛಾಯಾಗ್ರಾಹಕರ ಸಂಘ, ಬಾಡಿಬಿಲ್ಡರ್ಸ್ ಅಸೊಸಿಯನ್, ರೋಟರಿ ಕ್ಲಭ್, ಲಾಯಿನ್ಸ ಕ್ಲಬ್ ಸೇರಿದಂತೆ ಅನೇಕ ಸಂಘಟನೆಗಳು ನಗರದ ಮುಸ್ಲಿಂ ಸ್ಮಶಾನ, ಲಿಂಗಾಯತ ಸ್ಮಶಾನ, ಗಣೇಶ ನಗರ, ಮೆಹದಿ ನಗರ, ಮಾಲದಿನ್ನಿ ಕ್ರಾಸ್, ಸ್ಥಳಗಳಲ್ಲಿ ಸೇರಿದಂತೆ ತಾಲೂಕಿನಾದ್ಯಂತ ಕೊಣ್ಣೂರ,ಕೊಳವಿ,ತವಗ,ಮದವಾಲ,ಖನಗಾಂವ, ಮಕ್ಕಳಗೇರಿ,ಮೀಡಕನಟ್ಟಿ,ಹುಣಶ್ಯಾಳ ಪಿ.ಜಿ, ಕಳಿಗುದ್ದಿ,ವಡೇರಹಟ್ಟಿ, ಬಳೋಬಾಳ,ಬೀರನಗಡ್ಡಿ, ಪಂಚಾಯತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ, ಕರವೇ ಗ್ರಾ.ಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಶಿಶು ಅಭಿವೃದ್ದಿ ಇಲಾಖೆ, ಗ್ರಾಮಗಳ ಹಿರಿಯ ಮುಖಂಡರ ಸಹಕಾರದೊಂದಿಗೆ ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲಿ 2000ರಂತೆ ತಾಲೂಕಿನಾದ್ಯಂತ ಸುಮಾರು 25300 ಸಸಿಗಳನ್ನು ಏಕಕಾಲಕ್ಕೆ ನೆಡುವುದರ ಮುಖಾಂತರ ಹಸಿರು ಗೋಕಾಕಗಾಗಿ ಒಂದು ದಿನ ಕಾರ್ಯಕ್ರಮವನ್ನು ಪರಿಪೂರ್ಣವಾಗಿ ಯಶಸ್ವಿಗೊಳಿಸಿ ಅವುಗಳನ್ನು ಉಳಿಸಿ ಬೆಳೆಸಲು ಫನತೊಡಲಾಯಿತ್ತು

Related posts: