ಬೆಟಗೇರಿ:ಅದ್ದೂರಿಯಾಗಿ ನಡೆದ ಬಗರನಾಳ ಗ್ರಾಮದ ಸಾಧಕರ ಸತ್ಕಾರ, ಗುರುವಂದನಾ ಸಮಾರಂಭ
ಅದ್ದೂರಿಯಾಗಿ ನಡೆದ ಬಗರನಾಳ ಗ್ರಾಮದ ಸಾಧಕರ ಸತ್ಕಾರ, ಗುರುವಂದನಾ ಸಮಾರಂಭ
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಫೆ 29 :
ಸಮೀಪದ ಬಗರನಾಳ ಗ್ರಾಮದ ಸಾಧಕರ ಸತ್ಕಾರ, ಗುರುವಂದನಾ ಹಾಗೂ ವಿವಿಧ ನೂತನ ಕಟ್ಟಡ ಉದ್ಘಾಟನೆ ಸಮಾರಂಭ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಆವರಣದಲ್ಲಿ ಶುಕ್ರವಾರ ಫೆ.28 ರಂದು ಸಂಭ್ರಮದಿಂದ ಅದ್ಧೂರಿಯಾಗಿ ನಡೆಯಿತು.
ಸುಣಧೋಳಿ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಸ್ವಾಮಿಜಿ, ಗದಗ ತಿರುಂಜಿ ಕ್ಷೇತ್ರದ ಆಧ್ಯಾತ್ಮಿಕ ಪ್ರವಚನಕಾರ ಬಸವ ಸಮರ್ಥ ಸ್ವಾಮಿಜಿ ಸಾನಿಧ್ಯ, ಗೋಕಾಕ ಬಿಇಒ ಜಿ.ಬಿ.ಬಳಿಗಾರ, ಧಾರವಾಡ ಕೃಷಿ ವಿಶ್ವವಿದ್ಯಾಲಯ ವ್ಯವಸ್ಥಾಪನಾ ಮಂಡಳಿ ನಿರ್ದೇಶಕ ಡಾ.ರಾಜೇಂದ್ರ ಸಣ್ಣಕ್ಕಿ, ಬೆಂಗಳೂರು ಮ್ಯಾಕ್ಸ್ ಸೆಕ್ಯೂರಿಟಿ ಎಮ್‍ಡಿ ಅವಿನಾಶ ಗುರುಸ್ವಾಮಿ ಮುಖ್ಯ ಅತಿಥಿಗಳಾಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ವಿವಿಧ ಕಟ್ಟಡ ಹಾಗೂ ಗುರುವಂದನಾ ಸಮಾರಂಭ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸ್ಥಳೀಯ ಶಿಕ್ಷಣಪ್ರೇಮಿ ರಾಮಪ್ಪ ತಳವಾರ, ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಸಮಾರಂಭಕ್ಕೆ ಆಗಮಿಸಿದ ಗೋಕಾಕ ತಾಲೂಕು ಸೇರಿದಂತೆ ಹಲವಡೆ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತರಾದ ಸ್ಥಳೀಯ ಸಾಧಕರನ್ನು, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗ್ರಾಮ ಪಂಚಾಯ್ತಿ, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಶಿಕ್ಷಣಪ್ರೇಮಿಗಳು, ಗಣ್ಯರು, ಅತಿಥಿಗಳನ್ನು, ಸತ್ಕಾರ ಮೂರ್ತಿ, ವಿಶೇಷ ಆಹ್ವಾನಿತರನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು.
ಯುವ ಮುಖಂಡ ನಾಗಪ್ಪ ಶೇಖರಗೋಳ, ಮೆಳವಂಕಿ ಜಿಪಂ ಸದಸ್ಯೆ ಶಶಿಕಲಾ ಸಣ್ಣಕ್ಕಿ, ಕೆಮ್ಮನಕೋಲ ತಾಪಂ ಸದಸ್ಯೆ ನೀಲವ್ವ ಬಳಿಗಾರ, ಮೂಡಲಗಿ ಬಿಇಒ ಅಜೀತ ಮನ್ನಿಕೇರಿ, ಗೋಕಾಕ ಕ್ಷೇತ್ರ ಸಮನ್ವಯಾಧಿಕಾರಿ ಎಮ್.ಬಿ.ಪಾಟೀಲ, ಎ.ಬಿ.ಮಲಬನ್ನವರ, ಶಿವಲಿಂಗಪ್ಪ ಬಳಿಗಾರ, ಐ.ಎಮ್.ಧಪೇದಾರ, ಬಸನಗೌಡ ಪಾಟೀಲ, ಸುಭಾಷ ಹಾವಾಡಿ, ಬಿ.ಟಿ.ಪುಂಜಿ, ಪ್ರಕಾಶ ಕುರಬೇಟ, ಹನುಮಂತ ಹಾವಾಡಿ, ಸಿದ್ದಪ್ಪ ಅಡವಿ, ರಾಮಪ್ಪ ವೆಂಕಟಾಪೂರ, ಸಮಾರಂಭದ ಸಂಘಟಕ ಮತ್ತು ಆಯೋಜಕ ಸಮಿತಿ ಸದಸ್ಯರು, ಸ್ಥಳೀಯ ಶಾಲೆಯಲ್ಲಿ ಸೇವೆಗೈದ ಶಿಕ್ಷಕರು, ಗ್ರಾಮಸ್ಥರು, ಶಾಲಾ ಮಕ್ಕಳು, ಇತರರು ಇದ್ದರು.