ಗೋಕಾಕ:ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿರುವ ತತ್ವ ಶ್ರೀ ಶಿವಯೋಗಿ ತತ್ವ ವಿಚಾರ ವೇದಿಕೆ ಕಾರ್ಯ ಮಾದರಿಯಾಗಿದೆ : ಹೊಳೆಪ್ಪಗೋಳ
ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿರುವ ತತ್ವ ಶ್ರೀ ಶಿವಯೋಗಿ ತತ್ವ ವಿಚಾರ ವೇದಿಕೆ ಕಾರ್ಯ ಮಾದರಿಯಾಗಿದೆ : ಹೊಳೆಪ್ಪಗೋಳ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ, 2 ;-
11 ವರ್ಷಗಳಿಂದ ಪ್ರತಿದಿನ ಸತ್ಸಂಗ ನಡೆಸುತ್ತ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿರುವ ತತ್ವ ಶ್ರೀ ಶಿವಯೋಗಿ ತತ್ವ ವಿಚಾರ ವೇದಿಕೆ ಕಾರ್ಯ ಮಾದರಿಯಾಗಿದೆ ಎಂದು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಹೇಳಿದರು.
ಭಾನುವಾರದಂದು ನಗರದ ಶ್ರೀ ಸಿದ್ಧಿವಿನಾಯಕ ಸಮುದಾಯ ಭವನದಲ್ಲಿ ಶ್ರೀ ಶಿವಯೋಗಿ ತತ್ವ ವಿಚಾರ ವೇದಿಕೆಯ 11ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತ, ಆಧುನಿಕ ಭರಾಟೆಯಲ್ಲಿ ಆಧ್ಯಾತ್ಮಿಕದಿಂದ ದೂರವಾಗುತ್ತಿರುವ ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುತ್ತಿರುವ ವೇದಿಕೆ ಕಾರ್ಯದಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಧಾರವಾಡದ ಖ್ಯಾತ ಪ್ರವಚನಕಾರ ಶ್ರೀ ಪಂಡಿತ ವೆಂಕಟ ನರಸಿಂಹಾಚಾರ್ಯ ಜೋಶಿ ಅವರು ಮಾತನಾಡುತ್ತ, ದೇವಾಲಯಗಳು ಭೊಜನಾಲಯಗಳಾಗದೇ ಜ್ಞಾನಾಲಯಗಳಾಗಬೇಕು. ಅಂತಹ ಕಾರ್ಯ ಮಾಡುತ್ತಿರುವ ವೇದಿಕೆಯ ಕಾರ್ಯ ಶ್ಲಾಘನೀಯ. ಜ್ಞಾನ ಬಹುಮುಖ್ಯ. ಜ್ಞಾನದ ಹಸಿವಿರಬೇಕು. ತಾಯಿ ದೇವರಿಗೆ ಸಮಾನ. ತಾಯಿಯ ಪಾದಸ್ಪರ್ಶ ಎಲ್ಲ ತೀರ್ಥಗಳಿಗೆ ಸಮಾನ. ಸೃಷ್ಠಿಕರ್ತ ಭಗವಂತನು ಎಲ್ಲ ಜೀವಿಗಳಲ್ಲೂ ನೆಲೆಸಿದ್ದಾನೆ. ಎಲ್ಲ ದೇವರ ಹೆಸರುಗಳು ಭಗವಂತನ ಹೆಸರುಗಳೇ ಆಗಿವೆ. ಭಗವಂತ ಅವತಾರಗಳಲ್ಲಿ ಮನುಕುಲಕ್ಕೆ ನೀಡಿದ ಸಂದೇಶಗಳ ಆಚರಣೆಯಿಂದ ತಮ್ಮ ಜನ್ಮವನ್ನು ಪಾವನಗೊಳಿಸಿಕೊಳ್ಳುವಂತೆ ತಿಳಿಸಿದರು.
ವೇದಿಕೆ ಮೇಲೆ ನಿವೃತ್ತ ಪ್ರಾಚಾರ್ಯ ಬಿ.ಎಚ್.ಸಂಸುದ್ದಿ, ತಾ.ಪಂ. ಇಓ ಬಸವರಾಜ ಹೆಗ್ಗನಾಯಕ್, ಬಿಇಓ ಜಿ.ಬಿ.ಬಳಿಗಾರ, ಎಸಿಎಫ್ ಎಮ್.ಕೆ.ಪಾತ್ರೂಟ, ಪಿಡಬ್ಲುಡಿ ಎಇಇ ಆರ್.ಎ.ಗಾಣಗೇರ, ಸಮಾಜ ಕಲ್ಯಾಣಾಧಿಕಾರಿ ಬಿ.ವಾಯ್.ಕುರಿಹುಲಿ, ತೋಟಗಾರಿಕಾ ಅಧಿಕಾರಿ ಎಮ್.ಎಲ್.ಜನ್ಮಟ್ಟಿ, ಜಿ.ಪಂ. ಎಇಇ ಆಯ್.ಎಮ್.ದಫೇದಾರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಆರ್.ಕೆ.ಬಿಸಿರೊಟ್ಟಿ, ವೇದಿಕೆ ಅಧ್ಯಕ್ಷ ಬಿ.ಆರ್.ಮುರಗೋಡ, ಉಪಾದ್ಯಕ್ಷ ಯಲ್ಲಪ್ಪ ಕುರುಬಗಟ್ಟಿ, ಸುರೇಶ ಸಾಲಿ, ಶಿವಪ್ಪ ಧರೀಗೌಡರ, ಸದಾನಂದ ಕೊಳದುರ್ಗಿ ಇದ್ದರು.
ಬಸವರಾಜ ರಾಮಗಾನಟ್ಟಿ ಸ್ವಾಗತಿಸಿದರು. ವಂದಿಸಿದರು.