ಗೋಕಾಕ:ಕಾವ್ಯಗಳು ಬದುಕಿನ ಭವನೆಯನ್ನು ಪ್ರತಿಬಿಂಬಿಸುತ್ತವೆ : ಲಾತೂರ
ಕಾವ್ಯಗಳು ಬದುಕಿನ ಭವನೆಯನ್ನು ಪ್ರತಿಬಿಂಬಿಸುತ್ತವೆ : ಲಾತೂರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ, 2 ;-
ಕಾವ್ಯಗಳು ಬದುಕಿನ ಭವನೆಯನ್ನು ಪ್ರತಿಬಿಂಬಿಸುತ್ತವೆ. ಆರೋಗ್ಯಕರ ಸಮಾಜಕ್ಕೆ ಕಾವ್ಯ ದಿವ್ಯ ಔಷಧಿ ಆಗಬಲ್ಲದು ಎಂದು ಇಲ್ಲಿಯ ರಾಮ ಪೌಂಡೇಶನ್‍ನ ಅಧ್ಯಕ್ಷ ವಿಷ್ಣು ಲಾತೂರ ಹೇಳಿದರು.
ಶನಿವಾರದಂದು ನಗರದ ಜೀರಗ್ಯಾಳ ಸಭಾಭವನದಲ್ಲಿ ಸಿರಿಗನ್ನಡ ಮಹಿಳಾ ವೇದಿಕೆಯವರು ಹಮ್ಮಿಕೊಂಡ ಭಾವಗೀತೆ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ, ಎಲ್ಲರೂ ಕನ್ನಡ ಸಾಹಿತ್ಯವನ್ನು ಪ್ರೋತ್ಸಾಹಿಸಿ ಶ್ರೀಮಂತಗೊಳಿಸುವಂತೆ ಕರೆ ನೀಡಿದರು.
ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಅಹಿತಕರ ಘಟನೆಗಳನ್ನು ತಡೆಯಲು ಶ್ರಮಿಸಬೇಕು. ಕಲೆ, ಸಾಹಿತ್ಯ, ಸಾಂಸ್ಕøತಿಕಗಳ ತವರೂರಾದ ಗೋಕಾಕನಲ್ಲಿಕಲಾ ಭವನವನ್ನು ನಿರ್ಮಿಸಲು ನಾವೆಲ್ಲ ಶ್ರಮಿಸೋಣ ಎಂದರು.
ವೇದಿಕೆ ಮೇಲೆ ಪ್ರಾಧ್ಯಾಪಕಿ ಡಾ. ಸುನಂದಾ ಮೆಳವಂಕಿ, ಸಾಹಿತಿ ಮಹಾಲಿಂಗ ಮಂಗಿ, ಡಾ. ಅಶೋಕ ಜೀರಗ್ಯಾಳ, ಸಿರಿಗನ್ನಡ ಮಹಿಳಾ ವೇದಿಕೆ ರಾಜ್ಯ ಉಪಾಧ್ಯಕ್ಷೆ ರಜನಿ ಜೀರಗ್ಯಾಳ, ತಾಲೂಕಾಧ್ಯಕ್ಷೆ ಸಂಗೀತಾ ಬನ್ನೂರ, ಸಿರಿಗನ್ನಡ ವೇದಿಕೆ ತಾಲೂಕಾಧ್ಯಕ್ಷ ಈಶ್ವರ ಮಮದಾಪೂರ ಇದ್ದರು.
ಜಯಾ ಚುನಮರಿ ಸ್ವಾಗತಿಸಿದರು. ಚೇತನ ಜೋಗನ್ನವರ ನಿರೂಪಿಸಿದರು. ರಾಜೇಶ್ವರಿ ಹಿರೇಮಠ ವಂದಿಸಿದರು.