ಗೋಕಾಕ:ಬಜೆಟನಲ್ಲಿ ಜಲಸಂಪನ್ಮೂಲ ಇಲಾಖೆಗೆ ಹೆಚ್ಚಿನ ಅನುದಾನ : ಸಚಿವ ರಮೇಶ
ಬಜೆಟನಲ್ಲಿ ಜಲಸಂಪನ್ಮೂಲ ಇಲಾಖೆಗೆ ಹೆಚ್ಚಿನ ಅನುದಾನ : ಸಚಿವ ರಮೇಶ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 5 :
ಸಿಎಮ್ ಬಿಎಸ್‍ವೈ ಮಂಡಿಸಿದ ಬಜೆಟನಲ್ಲಿ ಜಲಸಂಪನ್ಮೂಲ ಇಲಾಖೆಗೆ ಹೆಚ್ಚಿನ ಅನುದಾನ ನೀಡಿದ್ದನ್ನು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅಭಿನಂದಿಸಿದ್ದಾರೆ.
ಗುರುವಾರದಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಂಡಿಸಿರುವ 2020-21ನೇ ಸಾಲಿನ ಮುಂಗಡ ಪತ್ರಕ್ಕೆ ತಮ್ಮ ಪ್ರತಿಕ್ರಿಯೆ ನೀಡಿರುವ ಅವರು, ಉತ್ತರ ಕರ್ನಾಟಕದ ಮಹದಾಯಿ ಯೋಜನೆಯಡಿ ಕಳಸಾ ಮತ್ತು ಬಂಡೂರಿ ನಾಲೆಗಳ ಕಾಮಗಾರಿಗೆ 500 ಕೋಟಿ ರೂ ಮತ್ತು ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ 1500 ಕೋಟಿ ರೂಪಾಯಿಗಳ ಅನುದಾನ ನೀಡಿರುವದು ಸ್ವಾಗತಾರ್ಹ. ನೀರು ಸಂರಕ್ಷಣೆ ಹಿತದೃಷ್ಟಿಯಿಂದ ಇಸ್ರೇಲ್ ಮಾದರಿಯಲ್ಲಿ ಒಂದು ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲು ಯೋಜನೆ ರೂಪಿಸಿರುವದು ಮತ್ತು ನೀರಿನ ಪ್ರತಿ ಹನಿಯ ಅಡಿಟ್ ಮಾಡಲು ಜಲಗ್ರಾಮ ಕ್ಯಾಲೆಂಡರ್ ಸಿದ್ದಪಡಿಸಿರುವದನ್ನು ಶ್ಲಾಘಿಸಿದ್ದಾರೆ.
ಕರಾವಳಿಯ ಪ್ರದೇಶದಲ್ಲಿ ಪಶ್ಚಿಮ ಘಟ್ಟದ ನದಿಗಳಿಗೆ ಅಡ್ಡಲಾಗಿ ಕಿಂಡಿ ಆಣೆಕಟ್ಟು ಯೋಜನೆಯ ಅನುಷ್ಠಾನಕ್ಕಾಗಿ ಈ ಕೂಡಲೇ ನಾವು ಕಾರ್ಯಪ್ರವೃತ್ತರಾಗುತ್ತೆವೆ. ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹಣಾ ಸಾಮಥ್ರ್ಯ ಹೆಚ್ಚಿಸಲು ಪರ್ಯಾಯ ನಾಲೆ ಮೂಲಕ ನವಲೆ ಹತ್ತಿರ ಅಮತೋಲನ ಜಲಾಶಯ ನಿರ್ಮಾಣಕ್ಕಾಗಿ 20ಕೋಟಿ ರೂ. ಹೊಸ ಏತ ನೀರಾವರಿ ಯೋಜನೆಗಳಿಗೆ 5ಸಾವಿರ ಕೋಟಿ ರೂಪಾಯಿಗಳನ್ನು ಬಜೇಟನಲ್ಲಿ ಒದಗಿಸಿರುವದು ಸಂತಸದ ವಿಷಯವಾಗಿದೆ.
ತಿಂತಣಿ ಸಮೀಪ ಕೃಷ್ಣಾ ನದಿಗೆ ಹೊಸದಾಗಿ ಜಲಾಶಯ ಕಾಮಗಾರಿಯನ್ನು ಅನುಷ್ಠಾನಗೊಳಿಸಲು ಶೀಘ್ರಕ್ರಮ ವಹಿಸುತ್ತೆವೆ. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ದೃಷ್ಟಿಯಿಂದ “ಜಲಧಾರೆ” ಎಂಬ ಎಐಐಬಿ ನೆರವಿನ ನೂತನ ಯೋಜನೆಯ ಅನುಷ್ಠಾನಕ್ಕೆ 700 ಕೋಟಿ ರೂಪಾಯಿಗಳ ಅನುದಾನ ಒದಗಿಸಿದ್ದು, ಒಟ್ಟಾರೆ ಇದು ರೈತರ ಪ್ರಗತಿ ಸೂಚಕ ಬಜೆಟ್ ಆಗಿದ್ದು, ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಯೋಜನೆಗಳನ್ನು ಚಾಚೂ ತಪ್ಪದೇ ಜಾರಿಗೊಳಿಸುವದಾಗಿ ತಿಳಿಸಿದ್ದಾರೆ.
ಅದಲ್ಲದೆ ನಿರುದ್ಯೋಗದ ಸಮಸ್ಯೆ ಎದುರಿಸುತ್ತಿರುವ ಬೆಳಗಾವಿ ಜಿಲ್ಲೆಯಲ್ಲಿ ಕೈಗಾರಿಕಾ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆಗೆ ಬಜೆಟನಲ್ಲಿ ಸಿಎಂ ಬಿಎಸ್‍ವೈ ಘೋಷಿಸಿರುವದು ಸ್ವಾಗತಿಸಿರುವ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
ಗುರುವಾರದಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಂಡಿಸಿರುವ 2020-21ನೇ ಸಾಲಿನ ಮುಂಗಡ ಪತ್ರಕ್ಕೆ ತಮ್ಮ ಪ್ರತಿಕ್ರಿಯೆ ನೀಡಿರುವ ಅವರು, ಧಾರವಾಡ ಮತ್ತು ಬೆಳಗಾವಿ ನಡುವೆ ನೂತನ ರೈಲು ಮಾರ್ಗಕ್ಕಾಗಿ ಉಚಿತ ಭೂಮಿ ಮತ್ತು ಶೇಕಡಾ 50ರಷ್ಟು ಕಾಮಗಾರಿ ವೆಚ್ಚವನ್ನು ರಾಜ್ಯ ಸರಕಾರ ಭರಿಸುವದಾಗಿ ಮುಖ್ಯಮಂತ್ರಿಯವರು ಘೋಷಿಸಿರುವದನ್ನು ಮುಕ್ತ ಕಂಠದಿಂದ ಸ್ವಾಗತಿಸಿದ್ದಾರೆ.