RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಉತ್ತರ ಕರ್ನಾಟಕವು ರಂಗಭೂಮಿ ಕಲಾವಿದರ ತವರೂರು : ಚಲನಚಿತ್ರ ನಟಿ ಶೈಲಶ್ರೀ

ಗೋಕಾಕ:ಉತ್ತರ ಕರ್ನಾಟಕವು ರಂಗಭೂಮಿ ಕಲಾವಿದರ ತವರೂರು : ಚಲನಚಿತ್ರ ನಟಿ ಶೈಲಶ್ರೀ 

ಉತ್ತರ ಕರ್ನಾಟಕವು ರಂಗಭೂಮಿ ಕಲಾವಿದರ ತವರೂರು : ಚಲನಚಿತ್ರ ನಟಿ ಶೈಲಶ್ರೀ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 7 :

 

ಉತ್ತರ ಕರ್ನಾಟಕವು ರಂಗಭೂಮಿ ಕಲಾವಿದರ ತವರೂರು ಆಗಿದೆ ಎಂದು ಹಿರಿಯ ಚಲನಚಿತ್ರ ನಟಿ ಶೈಲಶ್ರೀ ಹೇಳಿದರು.
ಅವರು ಶನಿವಾರದಂದು ನಗರದ ರೋಟರಿ ರಕ್ತ ಭಂಡಾರದ ಶ್ರೀಮತಿ ಮಂಗಲಾದೇವಿ ತಾಂವಶಿ ಸಭಾಭವನದಲ್ಲಿ ಜರುಗಿದ ಆಶಾ ಕಿರಣ ಕಲಾ ಟ್ರಸ್ಟ್ ವತಿಯಿಂದ ರಂಗಭೂಮಿ ಪ್ರಖ್ಯಾತ ನಟಿ ಮಾಲತಿಶ್ರೀ ರಂಗ ಪ್ರಶಸ್ತಿ ಹಾಗೂ ರಂಗಭೂಮಿ ದ್ರೋಣ ಬಿ.ಆರ್.ಅರಿಷಿಣಗೋಡಿ ರಂಗಪ್ರಶಸ್ತಿ,ರಂಗಭೂಮಿ ಭೀಷ್ಮ ಬಸವಣ್ಣೆಪ್ಪ ಹೊಸಮನಿ ರಂಗಪ್ರಶಸ್ತಿ ವಿತರಿಸಿ ಮಾತನಾಡಿದರು.
ರಂಗ ಕಲಾವಿದರು ನಾಟಕಗಳ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುತ್ತಿದ್ದರು. ಅಂದಿನ ಕಲೆ ಹಾಗೂ ಸಂಸ್ಕøತಿಯ ಪರಂಪರೆಯನ್ನು ಮುಂದುವರೆಸಿಕೊಂಡು ಉಳಿಸಬೇಕಾಗಿದೆ. ಇಂದಿನ ಯುವ ಪೀಳಿಗೆಗೆ ಅವುಗಳ ಪರಿಚಯಿಸುವುದರ ಮೂಲಕ ಭಾರತೀಯ ಸಂಸ್ಕøತಿಯ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು.
ಚಲನಚಿತ್ರ ನಿರ್ದೇಶಕ ಹಾಗೂ ಕೆಬಿಆರ್ ಡ್ರಾಮಾ ಕಂಪನಿ ಸಲಹೆಗಾರರಾದ ಚಿಂದೋಡಿ ಬಂಗಾರೇಶ್ ಮಾತನಾಡಿ ಸಮಾಜದ ಪರಿವರ್ತನೆಯಲ್ಲಿ ವೃತ್ತಿ ರಂಗಭೂಮಿ ಕಲಾವಿದರ ಪಾತ್ರ ಮಹತ್ವದ್ದಾಗಿದೆ. ರಕ್ತಗತವಾಗಿ ಬೆಳೆದು ಬಂದ ರಂಗಭೂಮಿಯು ಇಂದು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಅದಕ್ಕೆ ಜನರ ಸಹಕಾರ ಮುಖ್ಯವಾಗಿದೆ. ಗೋಕಾಕ ನಾಡು ವೃತ್ತಿ ರಂಗಭೂಮಿಯ ಕಲಾವಿದರನ್ನು ತಯರಿಸುವ ಕಾರ್ಖಾನೆಯಾಗಿದೆ. ರಂಗಭೂಮಿಗೆ ಗೋಕಾವಿ ನಾಡಿನ ಕೊಡುಗೆ ಅಪಾರವಾಗಿದೆ. ರಂಗಭೂಮಿಯಲ್ಲಿ ಪಾತ್ರ ಯಾವುದೇ ಇರಲಿ ಅದಕ್ಕೆ ಸಹಜತೆ,ಜೀವಂತಿಕೆ ತುಂಬುವ ಕಲೆ ರಂಗಭೂಮಿ ಕಲಾವಿದರಲ್ಲಿ ಕರಗತವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಆಶಾಕಿರಣ ಕಲಾ ಟ್ರಸ್ಟ ನೀಡುವ ಪ್ರಸ್ತುತ ಸಾಲಿನ ರಂಗಭೂಮಿ ಕಲಾವಿದೆ ಮಾಲತಿಶ್ರೀ ರಂಗಪ್ರಶಸ್ತಿಯನ್ನು ಕಲಾವಿದೆ ಪ್ರೇಮಾ ಗುಳೇದಗುಡ್ಡ ಹಾಗೂ ಮಹದೇವ ಹೊಸೂರ ಅವರಿಗೆ ಪ್ರದಾನ ಮಾಡಲಾಯಿತು.
ಈ ಸಾಲಿನ ಬಿ.ಆರ್. ಅರಿಷಿಣಗೋಡಿ ರಂಗಪ್ರಶಸ್ತಿಯನ್ನು ಸಾಹಿತಿ ಹಾಗೂ ರಂಗಕಲಾವಿದ ಮಹಾಲಿಂಗ ಮಂಗಿ ಮತ್ತು ಬಸವಣ್ಣೆಪ್ಪ ಹೊಸಮನಿ ರಂಗಪ್ರಶಸ್ತಿಯನ್ನು ಜಾನಪದ ಕಲಾವಿದ ಈಶ್ವರಚಂದ್ರ ಬೆಟಗೇರಿ ಅವರಿಗೆ ನೀಡಲಾಯಿತು.
ಸಮಾರಂಭದ ಸಾನಿಧ್ಯವನ್ನು ಅಗಡಿ ಅಕ್ಕಿಮಠದ ಡಾ. ಗುರುಲಿಂಗ ಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಕಸಾಪ ತಾಲೂಕಾಧ್ಯಕ್ಷ ಮಹಾಂತೇಶ ತಾಂವಶಿ ವಹಿಸಿದ್ದರು. ವೇದಿಕೆ ಮೇಲೆ ಬೆಂಗಳೂರಿನ ಆಶಾಕಿರಣ ಕಲಾ ಟ್ರಸ್ಟ ಅಧ್ಯಕ್ಷೆ ಮಾಲತಿಶ್ರೀ ಮೈಸೂರು, ಜೆಡಿಎಸ್ ಮುಖಂಡ ಅಶೋಕ ಪೂಜಾರಿ, ಧಾರಾವಾಹಿ ನಟಿ ಕುಮಾರಿ ಶ್ವೇತಾ ರಾವ್, ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಅಕ್ಕಿ, ರೋಟರಿ ರಕ್ತ ಭಂಡಾರದ ಚೇರಮನ್ ಮಲ್ಲಿಕಾರ್ಜುನ ಕಲ್ಲೋಳಿ ಇದ್ದರು.
ಶ್ಯಲಾ ಕೊಕ್ಕರಿ ಸ್ವಾಗತಿಸಿದರು. ಆರ್.ಎಲ್.ಮಿರ್ಜಿ ನಿರೂಪಿಸಿ,ವಂದಿಸಿದರು.

Related posts: