RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಒಬ್ಬ ವಿದ್ಯಾರ್ಥಿಗೆ 18 ಜನ ಸಿಬ್ಬಂದಿ ಕರ್ತವ್ಯ ನಿರ್ವಹಣೆ : ಅಪರೂಪದ ಘಟನೆಗೆ ಸಾಕ್ಷಿಯಾದ ಕಲ್ಲೋಳಿಯ ಎನ್.ಆರ್.ಪಾಟೀಲ್ ಪಿ.ಯು ಕಾಲೇಜ

ಗೋಕಾಕ:ಒಬ್ಬ ವಿದ್ಯಾರ್ಥಿಗೆ 18 ಜನ ಸಿಬ್ಬಂದಿ ಕರ್ತವ್ಯ ನಿರ್ವಹಣೆ : ಅಪರೂಪದ ಘಟನೆಗೆ ಸಾಕ್ಷಿಯಾದ ಕಲ್ಲೋಳಿಯ ಎನ್.ಆರ್.ಪಾಟೀಲ್ ಪಿ.ಯು ಕಾಲೇಜ 

ಒಬ್ಬ ವಿದ್ಯಾರ್ಥಿಗೆ 18 ಜನ ಸಿಬ್ಬಂದಿ ಕರ್ತವ್ಯ ನಿರ್ವಹಣೆ : ಅಪರೂಪದ ಘಟನೆಗೆ ಸಾಕ್ಷಿಯಾದ ಕಲ್ಲೋಳಿಯ ಎನ್.ಆರ್.ಪಾಟೀಲ್ ಪಿ.ಯು ಕಾಲೇಜ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 10 :

 

 

ಒಬ್ಬಳು ವಿದ್ಯಾರ್ಥಿನಿಗಾಗಿ 18 ಜನ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದ ಅಪರೂಪದ ಘಟನೆಗೆ ಮೂಡಲಗಿ ಶೈಕ್ಷಣಿಕ ವಲಯದ ಕಲ್ಲೋಳಿಯ ಎನ್.ಆರ್.ಪಾಟೀಲ್ ಪಿ.ಯು ಕಾಲೇಜ ಸಾಕ್ಷಿಯಾಗಿದೆ

ಮಾರ್ಚ್ 4 ರಿಂದ ರಾಜಾದ್ಯಂತ ಪಿ.ಯು.ಸಿ ದ್ವೀತಿಯ ವರ್ಷದ ಪರೀಕ್ಷೆಗಳು ಜರುಗುತ್ತಿದ್ದು, ಮಂಗಳವಾರದಂದು ಜರುಗಿದ ಉರ್ದು ಭಾಷಾ ಪರೀಕ್ಷೆಗೆ ಕಲ್ಲೋಳಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಎನ್.ಆರ್.ಪಾಟೀಲ್ ಪಿ.ಯು ಕಾಲೇಜನಲ್ಲಿ ಜರುಗಿದ ಪರೀಕ್ಷೆಯಲ್ಲಿ ವಡರಟ್ಟಿ ಪದವಿ ಪೂರ್ವ ಮಹಾವಿದ್ಯಾಲಯದ ದ್ವೀತಿಯ ವರ್ಷದ ವಿದ್ಯಾರ್ಥಿನಿ ಕುಮಾರಿ ಮುಸ್ಕಾನ ಪಠಾಣ ಎಂಬುವವಳು ಉರ್ದು ಭಾಷಾ ಪರೀಕ್ಷೆಗೆ ಹಾಜರಾಗಿದ್ದಳು
ಇವಳಿಗಾಗಿ ಚಿಕ್ಕೋಡಿ ಯಿಂದ ಕಲ್ಲೋಳಿಗೆ ಪ್ರಶ್ನೆ ಪತ್ರಿಕೆ ತರಲು 5 ಜನ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರೆ ಪರೀಕ್ಷಾ ಕೇಂದ್ರದಲ್ಲಿ ಒಬ್ಬರು ಕೋಠಡಿ ಮೇಲ್ವಿಚಾರಕ, ಒಬ್ಬರು ಮುಖ್ಯ ಅಧಿಕ್ಷಕ , ಒಬ್ಬರು ಸಹ ಅಧೀಕ್ಷರು , ವಿಕ್ಷಕ ದಳ 2 , ಕಛೇರಿ ಸಿಬ್ಬಂದಿ 3 , ಪೊಲೀಸರು 2 , ಒಬ್ಬರು ಪೀವನ್ , ಸೇರಿದಂತೆ ಒಟ್ಟು 15 ಜನ ಸಿಬ್ಬಂದಿಗಳು ಪರೀಕ್ಷಾ ಕರ್ತವ್ಯ ನಿರ್ವಹಿಸಿದ್ದಾರೆ.

ಪರೀಕ್ಷಾ ಕೇಂದ್ರಕ್ಕೆ 3 ಜನರ ಫ್ಲೈಯಿಂಗ್ ಸ್ಕೋಡ್ ಸಿಬ್ಬಂದಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು . ಒಟ್ಟಾರೆ ಒಬ್ಬ ವಿದ್ಯಾರ್ಥಿನಿಗೆ ಒಟ್ಟು 18 ಜನ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿ ಗಮನ ಸೆಳೆದಿದ್ದಾರೆ

Related posts: