ಗೋಕಾಕ:ಛಾಯಾಗ್ರಾಹಕ , ಬಾಡಿ ಬಿಲ್ಡಿಂಗ್ , ಶ್ರೀಗನ್ನಡ ಮಹಿಳಾ ವೇದಿಕೆ ಸಂಘಟನೆಗಳಿಂದ ಸಸಿ ನೆಟ್ಟು ಪೋಷಿಸುವ ಪ್ರಮಾಣ
ಛಾಯಾಗ್ರಾಹಕ , ಬಾಡಿ ಬಿಲ್ಡಿಂಗ್ , ಶ್ರೀಗನ್ನಡ ಮಹಿಳಾ ವೇದಿಕೆ ಸಂಘಟನೆಗಳಿಂದ ಸಸಿ ನೆಟ್ಟು ಪೋಷಿಸುವ ಪ್ರಮಾಣ
ಗೋಕಾಕ ಅ 13: ಕರ್ನಾಟಕ ರಕ್ಷಣಾ ವೇದಿಕೆ,ಮಠಾಧೀಶರ ವೇದಿಕೆ ಆಶ್ರಯದಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಮತ್ತು ವಿವಿದ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಸಿರು ಗೋಕಾಕಗಾಗಿ ಒಂದು ದಿನ ನಿಮಿತ್ಯ ಏಕ ಕಾಲಕ್ಕೆ ಸುಮಾರು 25 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತ ಪಡಿಸಿ ಸಿರಿಗನ್ನಡ ಮಹಿಳಾ ವೇದಿಕೆ, ಬಾಡಿಬಿಲ್ಡರ್ಸ ಅಸೊಸಿಯನ್ ಮತ್ತು ವೃತ್ತಿನಿರತ ಛಾಯಾಗ್ರಾಹಕ ಸಂಘಟನೆಯ ನೇತೃತ್ವದಲ್ಲಿ ಗೋಕಾಕ ನಗರದ ಲಿಂಗಾಯತ ಸಮುದಾಯದ ಸ್ಮಶಾನದಲ್ಲಿ ಮುಂಜಾನೆ ಸರಿಯಾಗಿ 11 ಗಂಟೆಗೆ ಏಕಕಾಲಕ್ಕೆ ಸುಮಾರು 150 ಸಸಿಗಳನ್ನು ನೆಡಲಾಯಿತು
ಸಂದರ್ಭದಲ್ಲಿ ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯ ಉಪಾಧ್ಯಕ್ಷೆ ರಜನಿ ಜಿರಗ್ಯಾಳೆ ಕಸಾಪ ತಾಲೂಕಾಧ್ಯಕ್ಷ ಮಹಾಂತೇಶ ತಾಂವಶಿ, ವೇದಿಕೆಯ ಪದಾಧಿಕಾರಿಗಳಾದ ಸಂಗೀತಾ ಬನ್ನೂರ, ವೈಷಾಲಿ ಭರಭರಿ, ಭಾರತಿ ಮಗದುಮ, ಪ್ರೇಮಾ ಜಕ್ಕನವರ, ಪುಷ್ಪಾ ಮುರಗೋಡ, ವೃತ್ತಿನಿರತ ಛಾಯಾಗ್ರಾಹಕ ಸಂಘದ ಪದಾಧಿಕಾರಿಗಳಾದ ರವಿ ಉಪ್ಪಿನ, ಕೆ.ಮಲ್ಲಿಕಾರ್ಜುನ, ಲಕ್ಷ್ಮಣ ಯಮಕನಮರಡಿ, ಸಚಿನ ಮಗದುಮ, ಆನಂದ ಹಲಕಟ್ಟಿ, ಬಾಡಿ ಬಿಲ್ಡರ್ಸ್ ಅಸೊಸಿಯನ್ ಸಂಘದ ಸಂಜು ದೇವರಮನಿ, ರಮೇಶ ಕಳಿಮನಿ, ಕಾಟೇಶ ಗೋಕಾವಿ, ಲಕ್ಷ್ಮಣ ತೊಟಗಿ, ದಹಿಕ ಶಿಕ್ಷಣಾಧಿಕಾರಿಯಾದ ಸೂಲೆಗಾಂವಿ, ಶಿಕ್ಷಕ ಮೇಟಿ, ಈಶ್ವರ ಮಮದಾಪೂರ ಸೇರಿದಂತೆ ಶಾಲಾ ವಿಧ್ಯಾರ್ಥಿಗಳು ಭಾಗವಹಿಸಿ ಸಸಿ ನೆಟ್ಟು ಸಂಭ್ರಮಿಸಿದರು.