ಗೋಕಾಕ:ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲೂ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ : ಮೆಟ್ಟಗುಡ್ಡ
ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲೂ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ : ಮೆಟ್ಟಗುಡ್ಡ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 14 :
ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲೂ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳಾ ಮೆಟ್ಟಗುಡ್ಡ ಹೇಳಿದರು.
ನಗರದ ಬಸವ ಮಂದಿರದಲ್ಲಿ ಭಾವಯಾನ ಮಹಿಳಾ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆಯವರು ಹಮ್ಮಿಕೊಂಡ ಅಂತ್ರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಹಿಳೆಯರು ಆತ್ಮವಿಶ್ವಾಸ ಹಾಗೂ ಚೈತನ್ಯದಿಂದ ಕಾರ್ಯನಿರ್ವಹಿಸುತ್ತಿದ್ದರೂ ಅತ್ಯಾಚಾರ, ಶೋಷಣೆ ಹಾಗೂ ಭ್ರೂಣಹತ್ಯೆಯಂತಹ ಸಮಸ್ಯೆಗಳನ್ನು ಮೆಟ್ಟಿನಿಂತು ಜಾಗೃತಿಯನ್ನು ವಹಿಸಬೇಕು. ಈ ಸಮಸ್ಯೆಗಳನ್ನು ಬೇರುಮಟ್ಟದಲ್ಲಿಯೇ ಮಟ್ಟಹಾಕಬೇಕು ಅಂದಾಗ ಮಾತ್ರ ಸಮಾಜದಲ್ಲಿ ಮಹಿಳೆಯರು ನೆಮ್ಮದಿಯಿಂದ ಸಾಧ್ಯವಾಗುತ್ತದೆ. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ, ಸ್ವಾಭಿಮಾನಿಯಾಗಿ ಸಮಸ್ಯೆಗಳನ್ನು ಎದುರಿಸಿ ಸಮಾಜಮುಖಿಯಾಗಿ ಬದುಕುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾವಯಾನ ಮಹಿಳಾ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷೆ ಮಹಾನಂದಾ ಪಾಟೀಲ ವಹಿಸಿದ್ದರು.
ವೇದಿಕೆ ಮೇಲೆ ಭಾವಯಾನ ಮಹಿಳಾ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆಯ ಗೌರವಾಧ್ಯಕ್ಷೆ ಪುಷ್ಪಾ ಮುರಗೋಡ, ಸಂಚಾಲಕಿ ಭಾರತಿ ಮದಭಾವಿ, ಅಕ್ಕ ನೀಲಾಂಬಿಕಾ ವೇದಿಕೆಯ ಅಧ್ಯಕ್ಷೆ ನೀಲಮ್ಮ ಶಿರಗಾಂವಕರ ಇದ್ದರು.
ವಿನೂತಾ ನಾವಲಗಿ ಸ್ವಾಗತಿಸಿದರು, ಶಿವಲೀಲಾ ಪಾಟೀಲ ನಿರೂಪಿಸಿದರು, ರಾಜಶ್ರೀ ತೋಟಗಿ ವಂದಿಸಿದರು.
ನಂತರ ಶಿವಾ ಪೌಂಡಶೇಷನ ಆಶ್ರಮದ ಮಕ್ಕಳು ಹಾಗೂ ಭಾವಯಾನ ಮಹಿಳಾ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆಯ ಸದಸ್ಯೆಯರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.