RNI NO. KARKAN/2006/27779|Friday, November 22, 2024
You are here: Home » breaking news » ಘಟಪ್ರಭಾ:ಮರಡಿ ತೋಟದಲ್ಲಿ ಉಪ್ಪಿನ ಸತ್ಯಾಗ್ರಹದ 90 ನೇ ವರ್ಷಾಚರಣೆ ಆಚರಣೆ

ಘಟಪ್ರಭಾ:ಮರಡಿ ತೋಟದಲ್ಲಿ ಉಪ್ಪಿನ ಸತ್ಯಾಗ್ರಹದ 90 ನೇ ವರ್ಷಾಚರಣೆ ಆಚರಣೆ 

ಮರಡಿ ತೋಟದಲ್ಲಿ ಉಪ್ಪಿನ ಸತ್ಯಾಗ್ರಹದ 90 ನೇ ವರ್ಷಾಚರಣೆ ಆಚರಣೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಮಾ 15 :

 

 

ಉಪ್ಪಿನ ಸತ್ಯಾಗ್ರಹದ ಗೌರವ ಉಪ್ಪಾರರಿಗೆ ದೊರಕ ಬೇಕಾಗಿದ್ದು, ಈ ಹೋರಾಟವನ್ನು ಮಹಾತ್ಮಾ ಗಾಂಧಿಕ್ಕಿಂತ ಮೊದಲು ಗುಜರಾತಿ ಉಪ್ಪಾರರು ಆರಂಬಿಸಿದರು ಎಂದು ರಾಜ್ಯ ಉಪ್ಪಾರ ಯುವಕರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಮಲ್ಲಿಕಾರ್ಜುನ ಚೌಕಶಿ ಹೇಳಿದರು.
ಕರ್ನಾಟಕ ರಾಜ್ಯ ಉಪ್ಪಾರ ಯುವಕರ ಸಂಘ ಹಾಗೂ ಭಗೀರಥ ಗ್ರಾಮ ವಿಕಾಸ ಯುವಕ ಸಂಘ ಅರಭಾವಿ ಇವರ ಸಂಯುಕ್ತ ಆಶ್ರಯದಲ್ಲಿ ಫಾರಂ ಮರಡಿ ತೋಟದಲ್ಲಿ ಉಪ್ಪಿನ ಸತ್ಯಾಗ್ರಹದ 90 ನೇ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿ ಮಾತನಾಡುತ್ತ,
ಉಪ್ಪಿನ ಸತ್ಯಾಗ್ರಹದ ಪಾದಯಾತ್ರೆಯ ಮೊದಲ ಗೌರವ ದೊರಕ ಬೇಕಾದದ್ದು ಉಪ್ಪಾರರಿಗೆ. ಈ ಹೋರಾಟ ಮಹಾತ್ಮಾ ಗಾಂಧಿ ಆರಂಭಿಸಿದ್ದಲ್ಲ ಆದರೆ ಆ ಹೋರಾಟಕ್ಕೆ ಗಾಂಧಿ ಅವರಿಂದ ಬಲ ಬಂದಿದ್ದಂತು ಸತ್ಯ, ಈ ಕಾರಣಕ್ಕೆ ಗಾಂಧಿ ಅವರನ್ನು ಗೌರವಿಸುತ್ತೇವೆ. ಇಂದು ಚಳವಳಿಯ 90ನೇ ವರ್ಷಾಚರಣೆ ಧಂಡಿ ಎನ್ನುವುದು ಗುಜರಾತ್‍ನ ಸಮುದ್ರ ತಟದಲ್ಲಿರುವ ಒಂದು ಗ್ರಾಮ. ಅಲ್ಲಿ ತಲೆತಲಾಂತರದಿಂದ ಉಪ್ಪುತಯಾರಿಕೆಯಲ್ಲಿ ತೊಡಗಿದ್ದ ಉಪ್ಪಾರರು ತಯಾರಿಸುತಿದ್ದ ಉಪ್ಪಿನ ಮೇಲೆ ಬ್ರಿಟೀಷ್‍ರು ತೆರಿಗೆ ವಿಧಿಸಿದಿರು.
ಇದರಿಂದ ಆರ್ಥಿಕವಾಗಿ ಜರ್ಜರಿತವಾದ ಉಪ್ಪಾರ ಸಮುದಾಯ ಸ್ಥಳೀಯ ತೆರಿಗೆ ಕಛೇರಿ ಎದುರು ಹೋರಾಟ ಆರಂಭಿಸಿದರು ಈ ವಿಷಯ ಗಾಂಧಿಜಿಯವರ ಕಿವಿಗೆ ಬಿದ್ದು ಅವರು ಬ್ರಿಟಿಷರು ವಿಧಿಸಿದ್ದ ಉಪ್ಪಿನ ಮೇಲಿನ ಕರವನ್ನು ಹಾಗೂ ಬ್ರಿಟಿಷರು 1882 ರಲ್ಲಿ ಜಾರಿಗೆ ತಂದ ಇಂಡಿಯನ್ ಸಾಲ್ಟ್ ಆಕ್ಟ್ ವಿರೋಧಿಸಿ ದಿನಾಂಕ 12 ಮಾರ್ಚ್ 1930 ರಂದು ಸಾಬರಮತಿ ಆಶ್ರಮದಿಂದ ಸಹಸ್ರಾರು ಜನರೊಂದಿಗೆ ಪಾದಯಾತ್ರೆಯ ಮೂಲಕ ಹೊರಟು 06 ಎಪ್ರಿಲ್ 1930 ರಂದು ಒಟ್ಟು 384 ಕಿ.ಮೀ ಉದ್ದದ ರಸ್ತೆಯನ್ನು ಕ್ರಮಿಸಿ ದಂಢಿಯನ್ನು ತಲುಪಿ ದಂಢಿ ಗ್ರಾಮದ ಉಪ್ಪಾರ ಹೋರಾಟಗಾರರೊಂದಿಗೆ ಸೇರಿ ತಾವೇ ಉಪ್ಪು ತಯಾರಿಸಿ ಬ್ರಿಟಿಷರಿಗೆ ಸೆಡ್ಡು ಹೊಡೆದಿದ್ದರು. ಗಾಂಧಿ ಧಂಡಿ ತಲುಪುವವರೆಗೆ ಬ್ರೀಟಿಷರ ಲಾಟಿ ಹಾಗೂ ಬೂಟಿನೇಟು ತಿನ್ನುತ್ತಾ ಧಂಡಿಯಲ್ಲಿ ಹೋರಾಟದ ಕಾವು ಉಳಿಸಿ ಕೊಂಡದ್ದು ಉಪ್ಪಾರರು. ಈ ಕಾರಣಕ್ಕಾಗಿ ಈ ಐತಿಹಾಸಿಕ ಚಳವಳಿಗೆ ಧಂಡಿ ಸತ್ಯಾಗ್ರಹ ಅಥವಾ ಉಪ್ಪಿನ ಸತ್ಯಾಗ್ರಹ ಎಂಬ ಹೆಸರು ಬಂದಿದೆ.
ಆದರೆ ಸಮಾಜದ ಹಿಂದಿನ ಹಿರಿಯರು ಉಪ್ಪಿನ ಮೇಲೆ ತೆರಿಗೆ ಹಾಕಿದ್ದನ್ನು ವಿರೋಧಿಸಿ ಹೋರಾಟ ಮಾಡಿದ್ದರು ಕೂಡ ರಾಜಕೀಯ ಪಕ್ಷಗಳು ಇದು ತಮ್ಮ ಹೋರಾಟ ಎನ್ನುತ್ತಾರೆ. ಆದರೆ ಯಾಯೊಬ್ಬರು ಈ ಸಮಯದಲ್ಲಿ ಈ ಕಾರ್ಯಕ್ರಮಕ್ಕೆ ಉಪ್ಪಾರ ಸಮಾಜದ ಗುರುಗಳನ್ನು ಹಾಗೂ ನಾಯಕರನ್ನು ಆಹ್ವಾನಿಸುವುದಿಲ್ಲ, ಕನಿಷ್ಠ ಪಕ್ಷ ಮೂಲ ಹೋರಾಟ ಆರಂಭಿಸಿದ ಉಪ್ಪಾರರನ್ನು ನೆನೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಯುವಕ ಸಂಘದ ಅಧ್ಯಕ್ಷ ನಿಂಗಪ್ಪ ಹುರಮದಿ, ನಾಗನೂರ ಯುವ ಮುಖಂಡ ಉದಯ ಗುಡೆನ್ನವರ, ಫಕೀರಪ್ಪಾ ಮಕ್ಕಳಗೇರಿ, ಗಜಾನನ ಬಳೂನಕಿ, ಸುರೇಶ ವಗ್ಗನವರ, ಮಾರುತಿ ಕಡಕೋಳ, ರಮೇಶ ಮಾಳೆದ, ಭಿಮಶಿ ಹುರಮದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: