ಗೋಕಾಕ:ಶ್ರೀ ಶಿವಶಕ್ತಿ ನಗರದ ಜಗದ್ಗುರು ಶ್ರೀ ಸಿದ್ಧಾರೂಢರ 9ನೇಯ ಜಾತ್ರಾ ಮಹೋತ್ಸವ
ಶ್ರೀ ಶಿವಶಕ್ತಿ ನಗರದ ಜಗದ್ಗುರು ಶ್ರೀ ಸಿದ್ಧಾರೂಢರ 9ನೇಯ ಜಾತ್ರಾ ಮಹೋತ್ಸವ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 15 :
ತಾಲೂಕಿನ ಮಮದಾಪೂರ ಗ್ರಾಮದ ಶ್ರೀ ಶಿವಶಕ್ತಿ ನಗರದ ಜಗದ್ಗುರು ಶ್ರೀ ಸಿದ್ಧಾರೂಢರ 9ನೇಯ ಜಾತ್ರಾ ಮಹೋತ್ಸವ ಇದೆ ದಿ.18ರಂದು ಜರುಗಲಿದೆ.
ಬುಧವಾರ ದಿ.18 ರಂದು ಮುಂಜಾನೆ 8ಗಂಟೆಗೆ ಪ್ರಣವ ಧ್ವಜಾರೋಹಣ, ಮಹಿಮ್ನ ಸ್ತೋತ್ರ ಗೀತಾ ಪರಾಯಣ ಅವಧೂತ ಶ್ರೀ ಸಿದ್ಧಾರೂಢರ ಮೂರ್ತಿಗೆ ಮಹಾರುದ್ರಾಭಿಷೇP,À ಬಿಲ್ವಾರ್ಚನೆ ಹಾಗೂ ಮಹಾಮಂಗಳಾರುತಿ. ಮುಂಜಾನೆ 9ಗಂಟೆಗೆ ಗ್ರಾಮದೇವತೆ ದುರ್ಗಾದೇವಿ ಮಂದಿರದಿಂದ ಸಕಲವಾದ್ಯಮೇಳದೊಂದಿಗೆ ಹಾಗೂ ಸುಮಂಗಲಿಯರ ಕಳಸಾರುತಿಯೊಂದಿಗೆ ಸದ್ಗುರು ಶ್ರೀ ಸಿದ್ಧಾರೂಢರ ಭವ್ಯ ಭಾವಚಿತ್ರ ಮೆರವಣಿ ಮೂಲಕ ಶ್ರೀ ಸಿದ್ಧಾರೂಢರ ಮಂದಿರ ತಲುಪುವದು.
ಸಾಯಂಕಾಲ 4ಗಂಟೆಗೆ ಶಿವಶಕ್ತಿ ನಗರದ ಸುಭಾಸ ಬಸವಪ್ರಭು ನಾಗನೂರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಮನರಂಜನೆ ಕಾರ್ಯಕ್ರಮ, ಮುಖ್ಯತಿಥಿಗಳಿಗೆ ಮತ್ತು ಅನ್ನದಾನಿಗಳಿಗೆ ಹಾಗೂ ನಿರಂತರ ಸೇವೆ ಸಲ್ಲಿಸಿದ ಭಕ್ತಾಧಿಗಳಿಗೆ ಸನ್ಮಾನ ಸಮಾರಂಭ. ರಾತ್ರಿ 8ಗಂಟೆಗೆ ಮಮದಾಪೂರ, ಮರಡಿ ಶಿವಾಪೂರ, ಚಿಕ್ಕನಂದಿ, ಪಂಚನಾಯ್ಕನಹಟ್ಟಿ, ದುಂಡಾನಟ್ಟಿ ಭಜನಾ ತಂಡದವರಿಂದ ರಾತ್ರಿಯೂದ್ಧಕ್ಕೂ ಭಜನಾ ಸೇವೆ ಜರುಗಲಿದೆ.
ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ವೇದಮೂರ್ತಿ ಶ್ರೀ ಚರಮೂರ್ತಿಶ್ವರ ಸ್ವಾಮಿಜಿ ವಹಿಸುವರು. ಮುಖ್ಯತಿಥಿಗಳಾಗಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಭಾಗವಹಿಸಲಿದ್ದಾರೆಂದು ಜಗದ್ಗುರು ಶ್ರೀ ಸಿದ್ಧಾರೂಢರ ಭಕ್ತ ಮಂಡಳಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.