ಘಟಪ್ರಭಾ:ಹುಣಶ್ಯಾಳದಲ್ಲಿ ಹಸಿರು ಗೋಕಾಕಗಾಗಿ ಒಂದು ಕಾರ್ಯಕ್ರಮ ಆಚರಣೆ
ಹುಣಶ್ಯಾಳದಲ್ಲಿ ಹಸಿರು ಗೋಕಾಕಗಾಗಿ ಒಂದು ಕಾರ್ಯಕ್ರಮ ಆಚರಣೆ
ಘಟಪ್ರಭಾ: ಗೋಕಾಕ ಕರ್ನಾಟಕ ರಕ್ಷಣಾ ವೇದಿಕೆ,ಮಠಾಧೀಶರ ವೇದಿಕೆ ಆಶ್ರಯದಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಮತ್ತು ವಿವಿದ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಸಿರು ಗೋಕಾಕಗಾಗಿ ಒಂದು ದಿನ ನಿಮಿತ್ಯ ಏಕ ಕಾಲಕ್ಕೆ ಸುಮಾರು 25 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತ ಪಡಿಸಿ ಕರವೇ ಹುಣಶ್ಯಾಳ ಪಿ.ಜಿ ಘಟಕ, ಅರಣ್ಯ ಇಲಾಖೆ, ಗ್ರಾ.ಮ ಪಂಚಾಯತಿ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಹುಣಶ್ಯಾಳ ಪಿ.ಜಿ ಗ್ರಾಮದ ಸರಕಾರಿ ಶಾಲಾ ಆವರಣ ಹಾಗೂ ಪಂಚಾಯತಿ ವ್ಯಾಪ್ತಿಯಲ್ಲಿ ಮುಂಜಾನೆ ಸರಿಯಾಗಿ 11 ಗಂಟೆಗೆ ಏಕಕಾಲಕ್ಕೆ ಸುಮಾರು 2000 ಸಸಿಗಳನ್ನು ನೆಡಲಾಯಿತು
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ರಾಮಣ್ಣಾ ನಾಯ್ಕ, ಉಪಾಧ್ಯಕರಾದ ಜಗದೀಶ ಹುಕ್ಕೇರಿ, ಸದಸ್ಯರಾದ ಅವ್ವಣ್ಣ ಡಬನ್ನವರ, ಸಂಜು ಮ್ಯಾಗಡಿ, ಶಿಕ್ಷಕ ಬಾಲಪ್ಪ ನಾಯಿಕ, ಅರಣ್ಯ ಇಲಾಖೆ ಅಧಿಕಾರಿ ಡಿ.ಶಿವಕುಮಾರ, ಗ್ರಾಮಸ್ಥರಾದ ಬಾಳಪ್ಪ ನೇಸರಿ, ಶಭೀರ ತಾಬೀಟಗಾರ, ಕರವೇ ಅರಭಾಂವಿ ಬ್ಲಾಕ್ ಅಧ್ಯಕ್ಷರಾದ ನಿಜಾಮ ನಧಾಫ, ಅಧ್ಯಕ್ಷರು ರಾಮಗೌಡ ಪಾಟೀಲ, ಪದಾಧಿಕಾರಿಗಳಾದ ಪರಪ್ಪಾ ಕೌಜಲಗಿ, ಮಹಾವೀರ ವನಕುದರಿ ಸೇರಿದಂತೆ ಇನ್ನು ಹಲವರು ಉಪಸ್ಥಿತರಿದ್ದರು