RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಕೊರೋನಾ ಸೋಂಕನ್ನು ತಡೆಗಟ್ಟಲು ಮುಂಜಾಗೃತ ಕ್ರಮ ಕೈಗೋಳುವದು ಅತ್ಯಂತ ಅವಶ್ಯಕವಾಗಿದೆ : ಪ್ರಕಾಶ ಹೊಳೆಪ್ಪಗೋಳ

ಗೋಕಾಕ:ಕೊರೋನಾ ಸೋಂಕನ್ನು ತಡೆಗಟ್ಟಲು ಮುಂಜಾಗೃತ ಕ್ರಮ ಕೈಗೋಳುವದು ಅತ್ಯಂತ ಅವಶ್ಯಕವಾಗಿದೆ : ಪ್ರಕಾಶ ಹೊಳೆಪ್ಪಗೋಳ 

ಕೊರೋನಾ ಸೋಂಕನ್ನು ತಡೆಗಟ್ಟಲು ಮುಂಜಾಗೃತ ಕ್ರಮ ಕೈಗೋಳುವದು ಅತ್ಯಂತ ಅವಶ್ಯಕವಾಗಿದೆ : ಪ್ರಕಾಶ  ಹೊಳೆಪ್ಪಗೋಳ

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 18 :

  ವಿಶ್ವದಾದ್ಯಂತ ಹರಿಡಿರುವ ಕೊರೋನಾ ಸೋಂಕನ್ನು ತಡೆಗಟ್ಟಲು ಪ್ರತಿಯೊಬ್ಬರೂ ಮುಂಜಾಗೃತ ಕ್ರಮ ಕೈಗೋಳುವದು ಅತ್ಯಂತ ಅವಶ್ಯಕವಾಗಿದೆ ಎಂದು ಎಂದು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಹೇಳಿದರು

ಬುಧವಾರದಂದು ನಗರದ ತಾ.ಪಂ ಸಭಾಂಗಣದಲ್ಲಿ  ಕೊರೋನಾ ಸೋಂಕು ಕುರಿತು ಮುಂಜಾಗೃತ ಕೈಗೋಳಲು ನಡೆದ   ಗೋಕಾಕ ಮತ್ತು ಮೂಡಲಗಿ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು

ಈಗಾಗಲೇ ವಿಶ್ವದ 172 ರಾಷ್ಟ್ರಗಳಲ್ಲಿ ಈ ಸೋಂಕು ಹರಡಿದ್ದು , 2 ಲಕ್ಷ ಜನ  ಸೋಂಕಿತರೆಂದು ಗುರುತಿಸಲಾಗಿದೆ.  8 ಸಾವಿರ ಜನ ಈ ಸೋಂಕಿನಿಂದ ಮರಣ ಹೊಂದಿದಾರಲ್ಲದೆ  84 ಸಾವಿರ ಜನ ಇಲ್ಲಿಯವರೆಗೆ  ಗುಣಮುಖರಾಗಿದ್ದಾರೆ. ಇದರಿಂದ ಯಾರು ಆತಂಕ ಪಡೆದೆ ಮುಂಜಾಗೃತ ಕ್ರಮ ಕೈಗೋಳ್ಳಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಕಾರ್ಯ ಪ್ರವೃತ್ತವಾಗಬೇಕು. ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು  ಸರಕಾರ ಮತ್ತು ಜಿಲ್ಲಾಧಿಕಾರಿ  ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು. ಹೊರ ದೇಶದಿಂದ ಬಂದ ಜನರಿಗೆ 14 ದಿನಗಳಕಾಲ ಐಸೋಲೇಶನ ವಾರ್ಡ್ ನಲ್ಲಿ ಕಡ್ಡಾಯವಾಗಿ ಇಡಬೇಕು. ಕ್ರೀಡೆಗಳು ,ಕ್ರೀಡಾಂಗಣ ಮತ್ತು ಮಾಲ್, ಚಲನಚಿತ್ರ ಮಂದಿರ , ಬೇಸಿಗೆ ಶಿಬಿರಗಳು, ಜೀಮ್, ಒಳಾಂಗಣ ಕ್ರೀಡೆಗಳನ್ನು ಸಂಪೂರ್ಣವಾಗಿ ಸ್ಥಗಿತಗೋಳಿಸಬೇಕು.
ಖಾಸಗಿ ಆಸ್ಪತ್ರೆಯಲ್ಲಿ ಇಂತಹ ಯಾವದೇ ಪ್ರಕರಣಗಳು ಕಂಡು ಬಂದರೆ ಖಾಸಗಿ ವೈದ್ಯರು ತಕ್ಷಣ ಜಿಲ್ಲಾ ವೈದ್ಯಾಧಿಕಾರಿ ಮತ್ತು ತಾಲೂಕಾ ವೈದ್ಯಾಧಿಕಾರಿಗಳಿಗೆ ತಿಳಸಬೇಕು ಎಂದ ಪ್ರಕಾಶ ಹೊಳೆಪ್ಪಗೋಳ   ಸರಕಾರಿ ಕಛೇರಿ  ಮತ್ತು ಪರೀಕ್ಷೆಗಳನ್ನು ಎಂದಿನಂತೆ ನಡೆಸಬೇಕು.
ಗೋಕಾಕ ಮತ್ತು ಮೂಡಲಗಿ ತಾಲೂಕಿನಾದ್ಯಂತ ಜರುಗುವ ಸಂತೆಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಕೇವಲ 2 ಘಂಟೆಗಳ ಕಾಲ ನಡೆಸಲು ಅನುವು ಮಾಡಿ ಕೋಡಲಾಗಿದ್ದು , ಸಾರ್ವಜನಿಕರು ವಿನಾಕಾರಣ ಸಂತೆಗೆ ಬಾರದೆ  ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಮಾತ್ರ ಸಂತೆಗೆ ಬಂದು ಅವಶ್ಯಕ ವಸ್ತುಗಳನ್ನು ಖರೀದಿಸಬೇಕು

ಏ 18 ವರೆಗೆ  ಜಾತ್ರೆಗಳಿಗೆ  ನಿಷೇಧ :
ಕೊರೋನಾ ಸೋಂಕು ತಡೆಗೆ ಮುಂಜಾಗೃತ ಕ್ರಮವಾಗಿ ಗೋಕಾಕ ಮತ್ತು ಮೂಡಲಗಿ ತಾಲೂಕಿನಾದ್ಯಂತ ಏಪ್ರಿಲ್ 18 ವರೆಗೆ ಜರಗುವ  ಜಾತ್ರೆಗಳನ್ನು ನಿಷೇಧಿಲಾಗಿದ್ದು, ಕೇವಲ ಐವತ್ತು ಆರವತ್ತು ಜನರು ಸೇರಿ ಜಾತ್ರೆಯ ವಿಧಿ ವಿಧಾನಗಳನ್ನು ನಡೆಸ ಬಹುದು ಇದಕ್ಕೆ ಯಾವುದೆ ನಿರ್ಬಂಧವಿಲ್ಲ  ಮಾತ್ರವಲ್ಲ ಪ್ರತಿ ದಿನ  ದೇವಸ್ಥಾನದಲ್ಲಿ ನಡೆಯುವ ಪೂಜೆ ಪುನಸ್ಕಾರಗಳಿಗೆ ಯಾವುದೆ ನಿರ್ಬಂಧ ಹೇರಲಾಗಿಲ್ಲ ಆದರೆ ನೂರಕ್ಕಿಂತ ಹೆಚ್ಚು ಜನರು ಸೇರುವದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತಹಶೀಲ್ದಾರ್ ಪ್ರಕಾಶ ಹೇಳಿದರು

ಜಾಗೃತಿ ಕಾರ್ಯಕ್ರಮ ಹಮ್ಮಿಕೋಳ್ಳಿ : ಕೊರೋನಾ ಸೋಂಕು ತಡೆ ಗಟ್ಟುವಲ್ಲಿ ಗ್ರಾಮ ಮಟ್ಟದ ಅಧಿಕಾರಿಗಳ ಪಾತ್ರ ಅತ್ಯಂತ ಮಹತ್ವದಾಗಿದ್ದು, ಪ್ರತಿಯೊಬ್ಬ ಅಧಿಕಾರಿ ಗ್ರಾಮದ ಪ್ರಮುಖರನ್ನು ಒಂದು ಕಡೆ ಸೇರಿಸಿ ಸಾರ್ವಜನಿಕರು ಕೇಗೋಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ತಿಳಿಸಬೇಕು ಮತ್ತು ಹೆಚ್ಚು ಹೆಚ್ಚು ಜನರಿಗೆ ತಲುಪಿಸಲು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು  ಪಂಚಾಯಿತಿ ಮಟ್ಟದಲ್ಲಿ  ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮುಂಜಾಗೃತ ಕ್ರಮವಾಗಿ ಮಟನ್ ಚಿಕ್ಕನ , ಪಾಸ್ಟ್ ಪೂಡ ಅಂಗಡಿಗಳ ಸ್ವಚ್ಛತೆ ಬಗ್ಗೆ ನಗರಸಭೆ , ಪಂಚಾಯಿತಿ  ಆರೋಗ್ಯ ವಿಭಾಗದ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು.

ಅಧಿಕಾರಿಗಳ ರಜೆಗಳಿಗೆ ಬ್ರೇಕ್ :  ಕೊರೋನಾ ಸೋಂಕು ನಿವಾರಣೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಗಿಸುವದು ಅತ್ಯಂತ ಅವಶ್ಯಕವಾಗಿದ್ದು , ಯಾವುದೇ ತಾಲೂಕಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ರಜೆ ಹಾಕುವಂತಿಲ್ಲ ಎಲ್ಲರು ಕಡ್ಡಾಯವಾಗಿ ಸರಕಾರದ ಮತ್ತು ಉನ್ನತಾಧಿಕಾರಿಗಳ ಆದೇಶವನ್ನು ಪಾಲಿಸಿ ಕರೋನಾ ಸೋಂಕು ಹರಡದಂತೆ ಜನರಲ್ಲಿ ಜಾಗೃತಿ ಮೂಡಿಸ ಬೇಕಾಗಿದೆ ಸಾರ್ವಜನಿಕರನ್ನು ವಿಶ್ವಾಸಕ್ಕೆ ತಗೆದು ಈ ಕಾರ್ಯ ಮಾಡಬೇಕು ಸಾರ್ವಜನಿಕರು ಮತ್ತು ಅಧಿಕಾರಿಗಳು ಕೂಡಿ ಒಮ್ಮತದಿಂದ ಈ ಕೊರೋನಾ ಸೋಂಕು ನ್ನು ತಡೆಗಟ್ಟಲು ಸಹಕರಿಸಬೇಕಾಗಿದೆ.

ತಾಲೂಕಾ ಆರೋಗ್ಯ ಅಧಿಕಾರಿ ಡಾ.ರವೀಂದ್ರ ಆಂಟಿನ ಮಾತನಾಡಿ ಸಾರ್ವಜನಿಕರು ಅನುಸರಿಸಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ವಿವರಿಸಿದಲ್ಲದೆ   ಮಾಸ್ಕಗಳನ್ನು ಎಲ್ಲರು  ಧರಿಸುವ ಅವಶ್ಯಕತೆ ಇಲ್ಲ  ನೆಗಡಿ ಮತ್ತು ಕೆಮ್ಮು ಇದ್ದವರು ಮಾತ್ರ ಮಾಸ್ಕಗಳನ್ನು ಧರಿಸಬೇಕು ಉಳಿದವರಿಗೆ ಇದರ ಅವಶ್ಯಕತೆ ಇಲ್ಲ  ತಾಲೂಕಿನ ಯಾವುದೆ ಔಷಧ ಅಂಗಡಿಯವರು ಮಾಸ್ಕಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ತಕ್ಷಣ ಆರೋಗ್ಯ ಇಲಾಖೆ ಗಮನಕ್ಕೆ ತರಬೇಕು ಅತಂವರನ್ನು ಗುರಿತಿಸಿ ಶಿಕ್ಷಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು

ಅಸ್ಪೃಶ್ಯತೆಯ ಹೊಗಲಾಡಿಸಲು ಕ್ರಮ : ಸಮಾಜ ಕಲ್ಯಾಣ ಅಧಿಕಾರಿ ಎಸ್.ವಿ ಕಲ್ಲಪ್ಪನವರ ಮಾತನಾಡಿ ಮೂಡಲಗಿ ತಾಲೂಕಿನ ವ್ಯಾಪ್ತಿಯಲ್ಲಿ ಅಸ್ಪೃಶ್ಯತೆಯ ಪ್ರಕರಣ ಬೆಳಕಿಗೆ ಬಂದಿತ್ತು ತಕ್ಷಣದಲ್ಲಿ ಅಂತಹ ಪ್ರದೇಶಗಳಿಗೆ ಬೇಟಿ ನೀಡಿ ಕಠಿಣ ಕ್ರಮಗಳನ್ನು ಕೈಗೋಳ್ಳಬೇಕೆಂದು ಹೇಳಿದರು

ಸಭೆಯಲ್ಲಿ ಮೂಡಲಗಿ ತಹಶೀಲ್ದಾರ್ ಡಿ.ಜಿ.ಮಹಾಂತ ,  ತಾ.ಪಂ ಅಧಿಕಾರಿ ಬಸವರಾಜ ಹೆಗ್ಗನವರ , ನಗರಸಭೆ ಪೌರಾಯುಕ್ತ ಎಸ್.ಎಂ ಹಿರೇಮಠ, ಸಮಾಜ ಕಲ್ಯಾಣ ಅಧಿಕಾರಿ ಎಸ್.ವಿ ಕಲ್ಲಪ್ಪನವರ ಸೇರಿದಂತೆ ಮೂಡಲಗಿ ಮತ್ತು ಗೋಕಾಕ ತಾಲಕಿನ ಪಿ.ಡಿ.ಓ , ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.

Related posts: