ಘಟಪ್ರಭಾ:ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಯಿಂದ ನೋವೆಲ್ ಕರೋನಾ ವೈರಸ್ ಬಗ್ಗೆ ಜಾಗೃತಿ ಜಾಥಾ
ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಯಿಂದ ನೋವೆಲ್ ಕರೋನಾ ವೈರಸ್ ಬಗ್ಗೆ ಜಾಗೃತಿ ಜಾಥಾ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಮಾ 19 :
ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಯಿಂದ ನೋವೆಲ್ ಕರೋನಾ ವೈರಸ್ ಭಯ ಬೇಡ, ಎಚ್ಚರವರಲಿ ಎಂದು ಜನರಲ್ಲಿ ಜಾಗೃತಿ ಮೂಡಿಸುವ ಜಾಥಾ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಪ.ಪಂ ಸದಸ್ಯರು, ಸಿಬ್ಬಂದಿ ವರ್ಗದವರು ಹಾಗೂ ನೌಕರರು ಆರೋಗ್ಯ ಇಲಾಖೆ ನೌಕರರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಜಾಥಾದಲ್ಲಿ ಪಾಲ್ಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕರೋನಾ ವೈರಸ್ ಬಗ್ಗೆ ಭಯ ಬೇಡ, ಎಚ್ಚರವಿರಲಿ ಸ್ವಚ್ಛತೆಯಿಂದ ಮಾರಕ ಕರೋನಾ ವೈರಸವನ್ನು ತಡೆಯ ಬಹುದು ಎಂಬ ಸಂದೇಶವನ್ನು ರವಾಣಿಸಿದರು.
ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ಸಲೀಮ ಕಬ್ಬೂರ, ಮಾರುತಿ ಹುಕ್ಕೇರಿ, ಇಮ್ರಾನ ಬಟಕುರ್ಕಿ, ಹಿರಿಯರಾದ ಕೆಂಪಣ್ಣ ಚೌಕಶಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಪ.ಪಂ ಸಿಬ್ಬಂದಿಗಳಾದ ಅನಿಲ ಕಾಂಬಳೆ, ಲಕ್ಷ್ಮಣ ಹುಣಶ್ಯಾಳ, ರಾಜು ಸದಲಗಿ, ರಮೇಶ ತಂಗೆವ್ವಗೋಳ, ಆನಂದ ಬಡಾಯಿ, ಅಕ್ಷಯ ಮಾನಗಾಂವಿ, ರಾಮ ಬೆಲ್ಲದ. ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಇದ್ದರು,