ಗೋಕಾಕ:ದಿ 24ರಂದು ನಡೆಯ ಬೇಕಿದ್ದ ತಾಲೂಕಿನ ಉದಗಟ್ಟಿ ಗ್ರಾಮದ ಉದ್ದಮ್ಮ ದೇವಿಯ ಜಾತ್ರೆ ರದ್ದು
ದಿ 24ರಂದು ನಡೆಯ ಬೇಕಿದ್ದ ತಾಲೂಕಿನ ಉದಗಟ್ಟಿ ಗ್ರಾಮದ ಉದ್ದಮ್ಮ ದೇವಿಯ ಜಾತ್ರೆ ರದ್ದು
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 19 :
ಕೋರೊನಾ ವೈರಸ್ ಸೋಂಕು ಜಾತ್ರೆಗೂ ತಗಲಿದ್ದು, ಇದೆ ದಿ.24ರಂದು ನಡೆಯ ಬೇಕಿದ್ದ ತಾಲೂಕಿನ ಉದಗಟ್ಟಿ ಗ್ರಾಮದ ಉದ್ದಮ್ಮ ದೇವಿಯ ಜಾತ್ರಾಮಹೋತ್ಸವವನ್ನು ರದ್ದುಗೊಳಿಸಲಾಗಿದೆ.
ಪ್ರತಿ ವರ್ಷ ಯುಗಾದಿ ಹಬ್ಬದಂದು ನಡೆಯುತ್ತಿರುವ ಉದಗಟ್ಟಿ ಉದ್ದಮ್ಮದೇವಿ ಜಾತ್ರೆಯನ್ನು ಮಾರ್ಚ 24ರಿಂದ 29ರ ವರೆಗೆ ನಡೆಸಲು ಗ್ರಾಮಸ್ಥರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕೋರೊನಾ ವೈರಸ್ ಭೀತಿಯಿಂದ ಸಾರ್ವಜನಿಕ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ಜಾತ್ರೆಯನ್ನು ರದ್ಧುಪಡಿಸಲಾಗಿದೆ ಎಂದು ಜಾತ್ರಾ ಮಹೋತ್ಸವ ಕಮೀಟಿಯ ಮುಖಂಡರಾದ ಭೂತಪ್ಪ ಗೋಡೇರ ಹಾಗೂ ಹನಮಂತ ಕೊಪ್ಪದ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.