RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಕೊರೋನಾ ಹಿನ್ನೆಲೆ: ಸರಕಾರದಿಂದ ಸಂಚಾರಿ ಅಸ್ಪತ್ರೆ ಪ್ರಾರಂಭಿಸಿ : ಜೆಡಿಎಸ್ ಮುಖಂಡ ಪೂಜಾರಿ ಮನವಿ

ಗೋಕಾಕ:ಕೊರೋನಾ ಹಿನ್ನೆಲೆ: ಸರಕಾರದಿಂದ ಸಂಚಾರಿ ಅಸ್ಪತ್ರೆ ಪ್ರಾರಂಭಿಸಿ : ಜೆಡಿಎಸ್ ಮುಖಂಡ ಪೂಜಾರಿ ಮನವಿ 

ಕೊರೋನಾ ಹಿನ್ನೆಲೆ: ಸರಕಾರದಿಂದ ಸಂಚಾರಿ ಅಸ್ಪತ್ರೆ ಪ್ರಾರಂಭಿಸಿ : ಜೆಡಿಎಸ್ ಮುಖಂಡ ಪೂಜಾರಿ ಮನವಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 19 :

 

 

ಕರೋನಾ ವೈರಸ್ ಸೊಂಕನ್ನು ತಡೆಗಟ್ಟಲು ಒಂದೇ ಸ್ಥಳದಲ್ಲಿ ಹೆಚ್ಚು ಜನದಟ್ಟಣೆ ಆಗದಂತೆ ನೋಡಿಕೊಳ್ಳುವ ಮುಖಾಂತರ ಸರಳ ಉಪಾಯ ಕಂಡುಕೊಂಡಿರುವ ಈ ಸಂದರ್ಭದಲ್ಲಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿಯೂ ಸಹ ಇದೇ ಉಪಾಯವನ್ನು ಅನುಸರಿಸಬೇಕಾದ ಅನಿವಾರ್ಯತೆ ಇದೆ. ಆದರೆ ಬಡ ಮತ್ತು ಸಾಮಾನ್ಯ ವರ್ಗದ ಜನರು ಆರೋಗ್ಯ ಉಪಚಾರಕ್ಕಾಗಿ ಸರಕಾರಿ ಆಸ್ಪತ್ರೆಗಳಿಗೆ ಹೋಗುವ ಅವಶ್ಯಕತೆ ಇದ್ದು, ಈ ಸಂದರ್ಭದಲ್ಲಿ ಉಂಟಾಗುವ ಜನದಟ್ಟನೆಯನ್ನು ತಡೆಯಲು ನಗರದಲ್ಲಿ ಸರಕಾರದಿಂದ ಸಂಚಾರಿ ಅಸ್ಪತ್ರೆ(ಮೋಬೈಲ್ ಯುನಿಟ್) ವಾಹನಗಳನ್ನು ವೈದ್ಯರು ಮತ್ತು ಸಿಬ್ಬಂದಿಯ ಜೊತೆಗೆ ಪ್ರಾರಂಭಿಸುವ ಮೂಲಕ ಮನೆ ಬಾಗಿಲಲ್ಲಿಯೇ ವೈಧ್ಯಕೀಯ ಸೌಲಭ್ಯ ದೊರೆಯುವಂತೆ ಮಾಡಬೇಕೆಂದು ಜೆ.ಡಿ.ಎಸ್. ಮುಖಂಡ ಅಶೋಕ ಪೂಜಾರಿ ಸರಕಾರವನ್ನು ಒತ್ತಾಯಿಸಿದ್ದಾರೆ.
ನಗರದಲ್ಲಿ ಇಂದು ಪ್ರಮುಖರ ನಿಯೋಗದೊಂದಿಗೆ ಸರಕಾರಿ ಆಸ್ಪತ್ರೆಯ ಮುಖ್ಯವೈಧ್ಯಾಧಿಕಾರಿಗಳು ಹಾಗೂ ವೈಧ್ಯರನ್ನು ಬೇಟಿಯಾಗಿ ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ವಿಸ್ತøತವಾಗಿ ಚರ್ಚಿಸಿದ ಅವರು ಅನೇಕ ರಚನಾತ್ಮಕ ಸಲಹೆಗಳ ಜೊತೆಗೆ ಮೋಬೈಲ್ ಯುನಿಟ್ ಪ್ರಾರಂಭಿಸುವ ಕುರಿತು ಪ್ರಸ್ತಾಪಿಸಿ ಅದರಿಂದ ಆಗುವ ಪ್ರಯೋಜನಗಳನ್ನು ವೈಧ್ಯಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು. ನಗರದ ಪ್ರತಿ ಓಣಿಗಳಲ್ಲಿ ನಿರ್ದಿಷ್ಠ ಪಡಿಸಿದ ಅವಧಿಯಲ್ಲಿ ಆ ಪ್ರದೇಶದ ಜನರು ಅವಶ್ಯಕ ಸರಕಾರಿ ವೈಧ್ಯಕೀಯ ಸೌಲಭ್ಯ ಪಡೆಯುವಂತಾಗುವುದರ ಜೊತೆಗೆ ಸರಕಾರಿ ಆಸ್ಪತ್ರೆಯಲ್ಲಿ ಆಗುವ ಜನಸಂಧನೆಯನ್ನು ಕಡಿಮೆ ಮಾಡಲು ಸಹಕಾರವಾಗುತ್ತದೆ ಎಂದು ಹೇಳಿದರು. ಕರೋನಾ ವೈರಸ್ ನಿಗ್ರಹ ಕುರಿತು ಸರಕಾರ ಮತ್ತು ವೈಧ್ಯಕೀಯ ಇಲಾಖೆ ನಡೆಸಿರುವ ಈ ಹೋರಾಟದಲ್ಲಿ ನಾಗರೀಕರು ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ನಾಗರೀಕರ ಪರವಾಗಿ ನೀಡಿದರು.
ಬೇಡಿಕೆಗೆ ಸ್ಪಂಧಿಸಿದ ಮುಖ್ಯವ್ಯಧ್ಯಾಕಾರಿ ಡಾ|| ಅಂಟಿನ ರವರು ಸಂಚಾರಿ ಆಸ್ಪತ್ರೆ ಪ್ರಾರಂಭಿಸುವ ಪ್ರಸ್ತಾಪ ಇಹೊತ್ತಿನ ಸನ್ನಿವೇಶದಲ್ಲಿ ಅತ್ಯಂತ ಅವಶ್ಯಕ ಮತ್ತು ರಚನಾತ್ಮವಿದ್ದು, ಇದಕ್ಕೆ ಪೂರಕವಾದ ಕ್ರಮವನ್ನು ಕೂಡಲೇ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ವೈಧ್ಯಾಧಿಕಾರಿ ಡಾ|| ಕೋಣಿ, ನಗರದ ಪ್ರಮುಖರಾದ ಸುನೀಲ ಮುರ್ಕಿಭಾಂವಿ, ರಾಜು ಜಾಧವ, ನ್ಯಾಯವಾದಿ ಸಿಕಂದರ ತಿಗಡಿ, ಬಸವರಾಜ ಪಡತರಿ, ಮಹೇಶ ಕರೋಶಿ, ಹಣಮಂತ ಗುಡ್ಡದಮನಿ, ಪ್ರಸಾದ ಬಡಿಗೇರ, ನಿಂಗಪ್ಪ ಅಮ್ಮಿನಭಾಂವಿ, ಸಿದ್ದಪ್ಪ ಶಿರಸಂಗಿ, ಮುತ್ತೆಪ್ಪ ಕಾಗಲ್ ಮುಂತಾದವರು ಉಪಸ್ಥಿತರಿದ್ದರು.

Related posts: