ಗೋಕಾಕ:ಜನತಾ ಕರ್ಫ್ಯೂಗೆ ಗೋಕಾಕ ಸ್ತಬ್ದ : ಬೆಳ್ಳೆಗೆಯಿಂದ ಹೊರ ಬರದೆ ಬಾಲ್ಕನಿಯಿಂದ ಚಪ್ಪಾಳೆ ತಟ್ಟಿ ಬೆಂಬಲ ಸೂಚಿಸಿದ ಸಾರ್ವಜನಿಕರು
ಜನತಾ ಕರ್ಫ್ಯೂಗೆ ಗೋಕಾಕ ಸ್ತಬ್ದ : ಬೆಳ್ಳೆಗೆಯಿಂದ ಹೊರ ಬರದೆ ಬಾಲ್ಕನಿಯಿಂದ ಚಪ್ಪಾಳೆ ತಟ್ಟಿ ಬೆಂಬಲ ಸೂಚಿಸಿದ ಸಾರ್ವಜನಿಕರು
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 22 :
ವಿಶ್ವದಾದ್ಯಂತ ಹರಡಿರುವ ಕೊರೋನಾ ವೈರಸ್ ( ಸೋಂಕು) ತಡೆಗಟ್ಟಲು ಮುಂಜಾಗೃತ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಕರೆನೀಡಿದ್ದ ಜನತಾ ಕರ್ಫ್ಯೂಗೆ ಗೋಕಾಕದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿ ಯಶಸ್ವಿ ಗೊಂಡಿತು
ರವಿವಾರ ಮುಂಜಾನೆಯಿಂದಲೇ ಜನರು ಸ್ವಯಂ ಪ್ರೇರಿತರಾಗಿ ಮನೆಯಲ್ಲೇ ಉಳಿದುಕೊಂಡು ತಮ್ಮ ಬೆಂಬಲವನ್ನು ಸೂಚಿಸಿದರು. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ನಗರದ ಬಸವೇಶ್ವರ ವೃತ್ತ , ಸಂಗೋಳ್ಳಿ ರಾಯಣ್ಣ ವೃತ್ತ, ಭಾಪನಾ ಕೂಟ್, ತಂಬಾಕ ಕೂಟ್ , ನಾಕಾ ನಂ 1 ರ ಚನ್ನಮ್ಮ ವೃತ್ತ ಸೇರಿದಂತೆ ಇತರ ಕಡೆಗಳಲ್ಲಿ ಜನರಿಲ್ಲದೆ ಪರಿಣಾಮ ರಸ್ತೆಗಳು ಬಿಕ್ಕೋ ಎನ್ನುತ್ತಿದ್ದವು , ಅಗತ್ಯ ವಸ್ತುಗಳು ಲಭ್ಯವಿರಲಿ ಎಂದು ಔಷಧ, ಪೆಟ್ರೋಲ್ ಬಂಕ್ ಗಳು ತೆರೆದಿದ್ದರು ಸಹ ಜನರು ಹೆಚ್ಚಾಗಿ ಅತ್ತಕಡೆ ಸುಳಿಲಿಲ್ಲ .ಕೆ ಎಸ್ ಆರ್ ಟಿ ಸಿ ಬಸ್ಸಗಳು , ಖಾಸಗಿ ಬಸ್ಸುಗಳು ( ಮ್ಯಾಕ್ಸಿಕ್ಯಾಬ್ ) , ಆಟೋಗಳು ರಸ್ತೆಗಳಿಗೆ ಇಳಿಯಲೆ ಇಲ್ಲ
ನಿಲ್ದಾಣ ಸ್ವಚ್ಚಗೋಳಿಸಿದ ಸಿಬ್ಬಂದಿಗಳು : ಕೊರೋನಾ ಸೋಂಕು ಮುಂಜಾಗೃತ ಕ್ರಮವಾಗಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದ ಸಾರಿಗೆ ಇಲಾಖೆಯವರು ಬಸ್ಸ ಸೇವೆಗಳನ್ನು ಸಂಪೂರ್ಣ ಬಂದಗೋಳಿಸಿ ಬೆಂಬಲ ನೀಡಿದರು . ಘಟಕ ವ್ಯವಸ್ಥಾಪಕ ಮಡಿವಾರ ಸಿಬ್ಬಂದಿಗಳ ಸಹಾಯದಿಂದ ಸಂಪೂರ್ಣ ನಿಲ್ದಾಣವನ್ನು ತೊಳೆದು ಸ್ವಚ್ಚಗೋಳಿಸುವದರ ಜೊತೆಗೆ ನಿರ್ವಾಹಕ , ಚಾಲಕ ಸೇರಿದಂತೆ ಇತರ ಸಿಬ್ಬಂದಿಗಳಿಗೆ ಇಲಾಖೆಯಿಂದ ಕೊಡಮಾಡಿದ್ದ ಮಾಸ್ಕ್ ಗಳನ್ನು ವಿತರಿಸಿದರು.
ಬಾಲ್ಕನಿಯಲ್ಲಿ ಬಂದು ಚಪ್ಪಾಳೆ ತಟ್ಟಿದ ಜನತೆ : ಜನತಾ ಕರ್ಫ್ಯೂಗೆ ಬೆಂಬಲ ನೀಡಿದ ಗೋಕಾಕ ಜನತೆ ಸಾಯಂಕಾಲ 5 ಘಂಟೆಗೆ ತಮ್ಮ ತಮ್ಮ ಮನೆಗಳ ಬಾಲ್ಕನಿಗಳಲ್ಲಿ ಬಂದು ಚಪ್ಪಾಳೆ ತಟ್ಟವ ಮುಖೇನ ಪ್ರಧಾನಿ ಅವರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ ಖುಷಿಪಟ್ಟರು
ಗೋಕಾಕ ಇತಿಹಾಸದಲ್ಲಿಯೇ ಪ್ರಥಮ : ವಿವಿಧ ಬೇಡಿಕೆಗಳಿಗೆ, ಸ್ಥಳೀಯ ಬೇಡಿಕೆಗಳಿಗೆ ಹಾಗೂ ರಾಜ್ಯದ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ಸಾಕಷ್ಟು ಬಂದಗಳು ನಡೆದು ಹೋಗಿವೆ ಆದರೆ ರವಿವಾರ ನಡೆದ ಜನತಾ ಕರ್ಫ್ಯೂಗೆ ಸಿಕ್ಕ ಬೆಂಬಲ ಇತಿಹಾಸದ ಪುಟಗಳಲ್ಲಿ ಸೇರುವಂತಹದಾಗಿತ್ತು, ಎಂತಹ ಬಂದಗಳು ನಡೆದರೂ ಕೂಡಾ ನಗರದ ಕೆಲವೊಂದು ಕಡೆಗಳಲ್ಲಿ ಹೋಟೆಲಗಳು , ಪಾನ ಅಂಗಡಿಗಳು, ಕಿರಾಣಿ ಅಂಗಡಿಗಳು, ಬೇಕರಿಗಳು ಸೇರಿದಂತೆ ಹಲವಾರು ಅಂಗಡಿಗಳು ಯಾವುದೆ ಸದ್ದಿಲ್ಲದೆ ತೆರೆದಿರುತ್ತಿದ್ದವು ಆದರೆ ಜನತಾ ಕರ್ಫ್ಯೂವನ್ನು ಬೆಂಬಲಿಸಿ ನಗರದ ಎಲ್ಲ ಮಾಲೀಕರು ಸಭೆ ಸೇರಿ ಯಾರು ಹೊಟೇಲನ್ನು ತರೆಯುವಂತಿಲ್ಲ ಎಂದು ನಿರ್ಧರಿಸಿದ್ದರು ಇದರ ಪರಿಣಾಮ ನಗರದ ಯಾವುದೆ ಮೂಲೆಯಲ್ಲಿ ಒಂದೇ ಒಂದು ಹೊಟೇಲ ಸಹ ಕಾರ್ಯನಿರ್ವಹಿಸಲ್ಲ ಅಷ್ಟೆ ಅಲ್ಲದೆ ಪಾನ ಅಂಗಡಿ, ಕಿರಾಣಿ ಅಂಗಡಿಗಳು ಸಹ ಅಂಗಡಿ ತರೆಯುವ ಗೋಜಿಗೆ ಹೋಗದೆ ಜನತಾ ಕರ್ಫ್ಯೂವನ್ನು ಬೆಂಬಲಿಸಿ ಇತಿಹಾಸ ಸೃಷ್ಟಿಸಿದರು
ಎಂದಿನಂತೆ ಕಾರ್ಯ ನಿರ್ವಹಿಸಿದ ಆಸ್ಪತ್ರೆಗಗಳು : ಕೊರೋನಾ ವೈರಸ್ ತಡೆಗೆ ಸಂಪೂರ್ಣ ಗೋಕಾಕ ಸ್ತಬ್ದವಾಗಿದ್ದರೆ ಅಗತ್ಯ ಸೇವೆಗಳಲ್ಲಿ ಒಂದಾದ ಆರೋಗ್ಯ ಸೇವೆ ನಗರದಲ್ಲಿ ದಾರಾಳವಾಗಿ ಸಿಗುವಂತಿತ್ತು , ನಗರದ ಸರಕಾರಿ ಆಸ್ಪತ್ರೆ ಸೇರಿ ಖಾಸಗಿ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದರೂ ಕೂಡಾ ಅಷ್ಟೊಂದು ಪ್ರಮಾಣದಲ್ಲಿ ಜನರು ಆಸ್ಪತ್ರೆಗತ್ತ ಸುಳಿಯಲಿಲ್ಲ ಕಾರ್ಯ ನಿರ್ವಹಿಸಿದ ಆಸ್ಪತ್ರೆಗಗಳು ಒಳರೋಗಿಗಳ ಚಿಕಿತ್ಸೆಗಳಿಗೆ ಮಾತ್ರ ಸೀಮಿತವಾದವು .
ಒಟ್ಟಾರೆ ಇಡೀ ವಿಶ್ವವನ್ನು ಕಂಗೆಡಿಸಿರುವ ಮಹಾಮಾರಿ ಕೊರೋನಾವನ್ನು ಹೊಡೆದೋಡಿಸಲು ಗೋಕಾಕ ನಗರದ ಜನತೆ ಎಲ್ಲರೂ ಒಂದಾಗಿ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ ಸೂಚಿಸಿ ಕೊರೋನಾ ತಡೆಗಟ್ಟಲು ಸಹಕಾರ ನೀಡಿದರು .