ಬೆಟಗೇರಿ:ಜನತಾ ಕರ್ಫ್ಯೂ ಬೆಂಬಲಿಸಿ ಬೆಟಗೇರಿ ಗ್ರಾಮ ಬಂದ್
ಜನತಾ ಕರ್ಫ್ಯೂ ಬೆಂಬಲಿಸಿ ಬೆಟಗೇರಿ ಗ್ರಾಮ ಬಂದ್
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಮಾ 22 :
ವಿಶ್ವದಾದ್ಯಂತ ಹರಡಿರುವ ಕರೋನಾ ಮಹಾಮಾರಿಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ಕರೆ ನೀಡಿರುವ ಭಾನುವಾರದಂದು ಜನತಾ ಕರ್ಫ್ಯೂ ಹಿನ್ನಲೆಯಲ್ಲಿ ಗೋಕಾಕ ತಾಲೂಕಿನ ಬೆಟಗೇರಿ ಹಾಗೂ ಸುತ್ತಲಿನ ಹಳ್ಳಿಗಳ ಗ್ರಾಮಸ್ಥರು ಜನತಾ ಕಪ್ರ್ಯೂ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಯಶಸ್ವಿಗೊಳಿಸಿದರು.
ಬೆಳಗ್ಗೆಯಿಂದ ಗ್ರಾಮದ ಎಲ್ಲಡೆ ಅಂಗಡಿ-ಮುಂಗಟ್ಟುಗಳನ್ನು ಬಾಗಿಲು ತೆರೆಯದೇ ಬಂದ್ ಮಾಡಲಾಗಿತ್ತು. ಎಲ್ಲ ಬೀದಿಗಳು, ಜನದಟ್ಟನೆ ಪ್ರಮುಖ ಸ್ಥಳ, ರವಿವಾರ ಸಂತೆ ಸೇರುವ ಇಲ್ಲಿಯ ಮುಖ್ಯ ಸ್ಥಳಗಳು ಬೀಕೂ ಎನ್ನುತ್ತಿದ್ದವು. ಕೇವಲ ಆಸ್ಪತ್ರೆ, ಔಷಧ ಮಳಿಗೆಗಳು ಮಾತ್ರ ಬಾಗಿಲು ತೆರದಿದ್ದವು.ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ಯಾರೂ ಮನೆಯಿಂದ ಹೊರಗೆ ಬರದೇ ಮನೆಯ ಕಿಟಕಿ, ಬಾಲ್ಕನಿಯಿಂದಲೇ ಸಂಜೆ 5 ಗಂಟೆಗೆ ಎಲ್ಲ ಮನೆಗಳಲ್ಲಿ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಚಪ್ಪಾಳೆ ತಟ್ಟುವ ಮೂಲಕ ಪ್ರಾಧಾನಿ ಮೋದಿ ಅವರಿಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿ, ಖುಷಿಪಟ್ಟರು.
ಭಾನುವಾರ ಸಂತೆ ಸಂಪೂರ್ಣ ನಡೆಯಲಿಲ್ಲ: ಬೆಟಗೇರಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ, ಪಿಡಿಒ ಎಚ್.ಎನ್.ಬಾವಿಕಟ್ಟಿ, ಗ್ರಾಪಂ ಸದಸ್ಯರು, ಹಿರಿಯ ನಾಗರಿಕರ ನೇತೃತ್ವದಲ್ಲಿ ಗ್ರಾಮದಲ್ಲಿ ಪ್ರತಿ ರವಿವಾರ ನಡೆಯುತ್ತಿದ್ದ ಈ ಭಾನುವಾರದ ಸಂತೆ ಮಾ.22ರಂದು ನಡೆಯುವುದಿಲ್ಲಾ ಅಂತಾ ಪತ್ರಿಕಾ ಪ್ರಕಟನೆ ಮೂಲಕ ತಿಳಿಸಲಾಗಿತ್ತು. ಗ್ರಾಮದ ಹಾಗೂ ಸುತ್ತಲಿನ ಹತ್ತೂರಿನ ನಾಗರಿಕರು, ರೈತರು, ಅಂಗಡಿ-ಮುಂಗಟ್ಟು ವ್ಯಾಪಾರಸ್ಥರು ಯಾರೂ ರದ್ದುಗೊಳಿಸಲಾದ ರವಿವಾರ ಸಂತೆಗೆ ಬರದೇ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಸಹಕರಿಸಿದರು.
ಸ್ಥಳೀಯ ರವಿವಾರದÀ ಸಂತೆಗೆ ಜನ ಸೇರದಂತೆ ಕರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಬಗ್ಗೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಕರೋನಾ ವೈರಸ್ ಬಗ್ಗೆ ಭಯಬೇಡ ಎಚ್ಚರಿಕೆ ಇರಲಿ ಎಂದು ಸ್ಥಳೀಯರಲ್ಲಿ ಮನದಟ್ಟು ಮಾಡುವಲ್ಲಿ ಇಲ್ಲಿಯ ಗ್ರಾಪಂ ಅಧ್ಯಕ್ಷ-ಸದಸ್ಯರು, ಪಿಡಿಒ-ಕಾರ್ಯದರ್ಶಿ, ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಹಿರಿಯ ನಾಗರಿಕರು ಯಶಸ್ವಿಯಾದರು.