ಬೆಟಗೇರಿ:ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು: ಪಿ ಎಸ್ ಐ ನರಳೆ
ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು: ಪಿ ಎಸ್ ಐ ನರಳೆ
ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಮಾ 22 :
ಜಗತ್ತಿನಾಧ್ಯಂತ ಕರೋನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕರೋನಾ ಮಹಾಮಾರಿಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕುಲಗೋಡ ಪೊಲೀಸ್ ಠಾಣೆಯ ಪಿಎಸ್‍ಐ ಹನಮಂತ ನರಳೆ ಹೇಳಿದರು.
ಕರೋನಾ ವೈರಸ್ ಹರಡುವ ಭೀತಿ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಅವರ ಆದೇಶದ ಮೇರೆಗೆ ಕುಲಗೋಡ ಪೊಲೀಸ್ ಠಾಣೆಯ ವ್ಯಾಪ್ತಿಯ ಬೆಟಗೇರಿ ಗ್ರಾಮಕ್ಕೆ ಸೋಮವಾರ ಮಾ.23ರಂದು ಭೇಟಿ ನೀಡಿದ ಅವರು, ಗ್ರಾಮದಲ್ಲಿ ಮಾರ್ಚ್.23ರಿಂದ ಮಾರ್ಚ್.31ರ ಮಧ್ಯರಾತ್ರಿವರೆಗೆ ಕೇವಲ ಆಸ್ಪತ್ರೆ, ಔಷಧ ಮಳಿಗೆಗಳ ಬಾಗಿಲು ಮಾತ್ರ ತೆರೆಯುಬೇಕು. ಗ್ರಾಮದ ಎಲ್ಲಡೆ ಅಂಗಡಿ-ಮುಂಗಟ್ಟುಗಳನ್ನು ಬಾಗಿಲು ತೆರೆಯದೇ ಬಂದ್ ಮಾಡುವಂತೆ, ಮೂರ್ನಾಲ್ಕು ಜನರು ಗುಂಪಾಗಿ ಕೂಡ್ರುವುದು, ತಿರುಗಾಡುವದನ್ನು ನಿಷೇದಿಸಲಾಗಿದೆ ಎಂದು ತಿಳಿಸಿದರು.
ಕುಲಗೋಡ ಪೊಲೀಸ್ ಠಾಣೆಯ ಪಿಎಸ್‍ಐ ಹನಮಂತ ನರಳೆ, ಪೊಲೀಸ್ ಪೇದೆಗಳು ಗ್ರಾಮದ ಅಲ್ಲಲ್ಲಿ ಬಾಗಿಲು ತೆರೆದಿದ್ದ ಅಂಗಡಿ-ಮುಂಗಟ್ಟುದಾರರಿಗೆ ಬಾಗಿಲು ಹಾಕುವಂತೆ, ಸ್ಥಳೀಯ ಪ್ರಮುಖ ಸ್ಥಳ, ಅಂಗಡಿ ಮುಂಗಟ್ಟುಗಳ ಮುಂದೆ ಕುಳಿತ ಸ್ಥಳೀಯರಿಗೆ ಗುಂಪಾಗಿ ಕುಳಿತುಕೊಳ್ಳದಂತೆ, ತಿರುಗಾಡದಂತೆ ಖಡಕ್ ಸೂಚನೆ ನೀಡಿದರು.
ಕುಲಗೋಡ ಪೊಲೀಸ್ ಠಾಣೆಯ ಪೋಲೀಸ್ ಪೇದೆ ಎಲ್.ಎಮ್.ನಾಯ್ಕ, ಪೋಲೀಸ್ ಪೇದೆಗಳು, ಸ್ಥಳೀಯ ನಾಗರಿಕರು, ಅಂಗಡಿ-ಮುಂಗಟ್ಟು ಮಾಲೀಕರು, ಮತ್ತೀತರರು ಇದ್ದರು.