ಅಂಕಲಗಿ :ಮದವಾಲದಲ್ಲಿ ಹಸಿರು ಗೋಕಾಕಗಾಗಿ ಒಂದು ಕಾರ್ಯಕ್ರಮದ ನಿಮಿತ್ಯ ಸಸಿ ನೆಟ್ಟು ಸಂಭ್ರಮ ಆಚರಣೆ
ಮದವಾಲದಲ್ಲಿ ಹಸಿರು ಗೋಕಾಕಗಾಗಿ ಒಂದು ಕಾರ್ಯಕ್ರಮದ ನಿಮಿತ್ಯ ಸಸಿ ನೆಟ್ಟು ಸಂಭ್ರಮ ಆಚರಣೆ
ಅಂಕಲಗಿ ಅ 13: ಕರ್ನಾಟಕ ರಕ್ಷಣಾ ವೇದಿಕೆ,ಮಠಾಧೀಶರ ವೇದಿಕೆ ಆಶ್ರಯದಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಮತ್ತು ವಿವಿದ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಸಿರು ಗೋಕಾಕಗಾಗಿ ಒಂದು ದಿನ ನಿಮಿತ್ಯ ಏಕ ಕಾಲಕ್ಕೆ ಸುಮಾರು 25 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತ ಪಡಿಸಿ ಕರವೇ ಕುಂದರಗಿ ಘಟಕ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಗ್ರಾ.ಪಂ, ಶಿಶು ಅಭಿವೃದ್ದಿ ಇಲಾಖೆ ನೇತೃತ್ವದಲ್ಲಿ ಮದವಾಲ ಗ್ರಾಮದ ಶಾಲಾ ಆವರಣದಲ್ಲಿ ಮತ್ತು ಪಂಚಾಯತಿ ವ್ಯಾಪ್ತಿಯಲ್ಲಿ ಮುಂಜಾನೆ ಸರಿಯಾಗಿ 11 ಗಂಟೆಗೆ ಏಕಕಾಲಕ್ಕೆ ಸುಮಾರು 2000 ಸಸಿಗಳನ್ನು ನೆಡಲಾಯಿತು
ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಶ್ರೀಮತಿ ಅನ್ನಪೂರ್ಣಾ ನಿರ್ವಾಣಿ, ಶಿಕ್ಷಕರಾದ ಕರಡಿ, ಅರಣ್ಯಾಧಿಕಾರಿಗಳಾದ ಸಂಪತ್ತ ಶಿಂಪಿ, ವೈ.ಎಸ್.ಕೆಂಪಣ್ಣವರ, ಕರವೇ ಪದಾಧಿಕಾರಿಗಳಾದ ಶಾನೂಲ ದೇಸಾಯಿ, ಶಂಕರ ಮಲ್ಲನವರ, ನಿಂಗಪ್ಪ ಜರಳಿ, ಮಲಿಕಜಾನ ದೇಸಾಯಿ, ಸೇರಿದಂತೆ ಶಾಲಾ ವಿಧ್ಯಾರ್ಥಿಗಳು ಭಾಗವಹಿಸಿ ಸಸಿ ನೆಟ್ಟು ಸಂಭ್ರಮಪಟ್ಟರು.