RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಕೊರೋನಾ ವೈರಸ್ ಮುಂಜಾಗೃತ ಕ್ರಮ : ಗೋಕಾಕ ಗ್ರಾಮ ದೇವತೆಯರ ಜಾತ್ರೆಯನ್ನು 2 ವರ್ಷಗಳಕಾಲ ಮುಂದೂಡಿಕೆ

ಗೋಕಾಕ:ಕೊರೋನಾ ವೈರಸ್ ಮುಂಜಾಗೃತ ಕ್ರಮ : ಗೋಕಾಕ ಗ್ರಾಮ ದೇವತೆಯರ ಜಾತ್ರೆಯನ್ನು 2 ವರ್ಷಗಳಕಾಲ ಮುಂದೂಡಿಕೆ 

ಕೊರೋನಾ ವೈರಸ್ ಮುಂಜಾಗೃತ ಕ್ರಮ : ಗೋಕಾಕ ಗ್ರಾಮ ದೇವತೆಯರ ಜಾತ್ರೆಯನ್ನು 2 ವರ್ಷಗಳಕಾಲ ಮುಂದೂಡಿಕೆ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 24 :

 

 

ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಬರುವ ಜೂನ ತಿಂಗಳಲ್ಲಿ ಜರುಗಲಿದ್ದ ಗೋಕಾಕ ಗ್ರಾಮ ದೇವತೆಯರ ಜಾತ್ರೆಯನ್ನು 2 ವರ್ಷಗಳಕಾಲ ಮುಂದೂಡಲಾಗಿದೆ ಎಂದು ಜಾತ್ರಾ ಕಮಿಟಿಯವರು ಪ್ರಕಟಿಸಿದ್ದಾರೆ.

ಮಂಗಳವಾರದಂದು ನಗರದ ಎನ್.ಎಸ್.ಎಫ್ ಅತಿಥಿ ಗೃಹದಲ್ಲಿ ಸೇರಿದ ಸಭೆಯಲ್ಲಿ ಕೊರೋನಾ ವೈರಸ್ ಬಗ್ಗೆ ಸುರ್ಧಿಘವಾಗಿ ಚರ್ಚಿಸಿ ಈ ನಿರ್ಧಾರ ತಗೆದು ಕೋಳ್ಳಲಾಗಿದೆ ಎಂದು ಜಾತ್ರಾ ಕಮಿಟಿಯ ಎಸ್.ಎ ಕೊತವಾಲ ಮತ್ತು ಸಿದ್ದಲಿಂಗ ದಳವಾಯಿ ತಿಳಿಸಿದರು.

ಪ್ರತಿ 5 ವರ್ಷಗಳಿಗೊಮ್ಮೆ ಜರುಗುವ ಗ್ರಾಮ ದೇವತೆಯರ ಜಾತ್ರೆ ಬರುವ ಜೂನ 22 ರಿಂದ 9 ದಿನಗಳವರೆಗೆ ನಡೆಯಬೇಕಾಗಿತ್ತು ಆದರೆ ಕೊರೋನಾ ವೈರಸ್ ಹಾವಳಿಯಿಂದ ಮತ್ತು ಸರಕಾರದ ನಿರ್ದೇಶನದ ಮೇರೆಗೆ 2022 ರ ವರೆಗೆ ಜಾತ್ರೆಯನ್ನು ಮುಂದುಡಲಾಗಿದೆ.
ಜಾರಕಿಹೊಳಿ ಸಹೋದರರ ಮಾರ್ಗದರ್ಶನದಂತೆ ನಗರದ ವ್ಯಾಪಾರಸ್ಥರು, ಮುಖಂಡರು , ನಗರಸಭಾ ಸದಸ್ಯರು ಸೇರಿದಂತೆ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಈ ನಿರ್ಧಾರ ಕೈಗೋಳಲಾಗಿದೆ ಎಂದು ಕಮಿಟಿಯವರು ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಪ್ರಭಾಕರ ಚವ್ಹಾಣ , ಅಶೋಕ ಪಾಟೀಲ, ಅಡಿವೆಪ್ಪಾ ಕಿತ್ತೂರ , ರಾಜು ಪವಾರ , ಅಶೋಕ ತಕ್ಕಾರ, ಅಶೋಕ ಹೆಗ್ಗನವರ, ಜ್ಯೋತಿಬಾ ಸುಭಂಜಿ, ಪ್ರಲ್ಹಾದ ಜೋಶಿ , ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ, ನಟರಾಜ ಮುತಾಲಿಕ್ ದೇಸಾಯಿ ಇದ್ದರು

Related posts: