ಬೆಟಗೇರಿ:ಕಸ ಮುಕ್ತ ಗ್ರಾಮ ಕಾರ್ಯಕ್ರಮದ ಪ್ರಯುಕ್ತ ಕಸ ಗೂಡಿಸಿದ ಬೆಟಗೇರಿ ಪಿ.ಡಿ.ಓ
ಕಸ ಮುಕ್ತ ಗ್ರಾಮ ಕಾರ್ಯಕ್ರಮದ ಪ್ರಯುಕ್ತ ಕಸ ಗೂಡಿಸಿದ ಬೆಟಗೇರಿ ಪಿ.ಡಿ.ಓ
ಅಡಿವೇಶ ಮುಧೋಳ. ಬೆಟಗೇರಿ
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಕಸ ಮುಕ್ತ ಗ್ರಾಮ ಕಾರ್ಯಕ್ರಮದ ಪ್ರಯುಕ್ತ ಸ್ಥಳೀಯ ಅಂಬೇಡ್ಕರ್ ವೃತ್ತದ ಪಕ್ಕದಲ್ಲಿ ಸ್ಥಳೀಯರು ಎಸೆದ ತ್ಯಾಜ್ಯವನ್ನು ಬೆಟಗೇರಿ ಗ್ರಾಮ ಪಂಚಾಯಿತಿ ಪಿಡಿಒ ಎಚ್.ಎನ್.ಬಾವಿಕಟ್ಟಿ ಅವರು ಸೋಮವಾರದಂದು ಗ್ರಾಪಂ ಸಿಬ್ಬಂದಿ ಜೋತೆ ಕೈಯಲ್ಲಿ ಕಸಬರಿಗೆ ಹಿಡಿದು ಕಸ ಕೂಡುಹಾಕಿ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಗ್ರಾಮದ ಸಾರ್ವಜನಿಕರು ಸ್ವಚ್ಛತೆಗೆ ಮೊದಲು ಆದ್ಯತೆ ನೀಡಿ, ಉತ್ತಮ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಸ್ವಚ್ಛತೆ ಹಿತದೃಷ್ಠಿಯಿಂದ ಇಲ್ಲಿಯ ಅಂಗಡಿ ಮುಗ್ಗಟ್ಟುದಾರರು ಕಸ, ಪ್ಲಾಸ್ಟಿಕ್, ನಿರುಪಯುಕ್ತ ವಸ್ತುಗಳನ್ನು ಕಸದ ತೊಟ್ಟಿಗಳಲ್ಲಿ ಹಾಕಬೇಕು ಎಂದು ಸಲಹೆಗಳನ್ನು ತಿಳಿಸಿದ ಪಿಡಿಒ ಎಚ್.ಎನ್.ಬಾವಿಕಟ್ಟಿ ಅವರು, ಕಸ ಗೂಡಿಸುವ ಮೂಲಕ ಸ್ಥಳೀಯರಿಗೆ ಮನವರಿಕೆ ಮಾಡಿಕೊಟ್ಟರು.
ಸ್ಥಳೀಯರ ಶ್ಲಾಘನೆ: ಸ್ಥಳೀಯ ಗ್ರಾಪಂ ಸಹಯೋಗದಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿ ಇಂದು ಇಲ್ಲಿಯ ನಾಗರಿಕರ ಹಲವಾರು ಮೂಲಭೂತ ಸೌಲಭ್ಯಗಳು ಒದಗಿಸುತ್ತಿರುವ ಹಾಗೂ ರಾಜ್ಯದಲ್ಲಿಯೇ ಬೆಟಗೇರಿ ಮಾದರಿ ಗ್ರಾಮವನ್ನಾಗಿಸುವ ಕನಸು ಹೊತ್ತು ಕ್ರೀಯಾಶೀಲ ವ್ಯಕ್ತಿತ್ವದ ಮೂಲಕ ಪ್ರಯತ್ನಿಸುತ್ತಿರುವ ಗ್ರಾಮ ಪಂಚಾಯಿತಿ ಪ್ರಸಕ್ತ ಅಧ್ಯಕ್ಷ, ಸದಸ್ಯರು, ಮತ್ತು ಎಲ್ಲರಿಗೂ ಮಾದರಿಯಾಗಿ ಸೇವೆ ಸಲ್ಲಿಸುತ್ತಿರುವ ಪಿಡಿಒ ಬಾವಿಕಟ್ಟಿ, ಇವರ ಜೋತೆಯಾಗಿ ಕೈಜೋಡಿಸುತ್ತಿರುವ ಕಾರ್ಯದರ್ಶಿ, ಸಿಬ್ಬಂದಿ ಅವರ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.
ಸ್ಥಳೀಯ ಅಂಗಡಿ ಮುಗ್ಗಟ್ಟುದಾರರು ಕಸ, ಪ್ಲಾಸ್ಟಿಕ್, ನಿರುಪಯುಕ್ತ ವಸ್ತುಗಳನ್ನು ಕಸದ ತೊಟ್ಟಿಗಳಲ್ಲಿ ಹಾಕಬೇಕು. ಗ್ರಾಮದ ಅಲ್ಲಲ್ಲಿ ತ್ಯಾಜ್ಯ ಎಸೆಯುವವರ ಮೇಲೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಗ್ರಾಪಂ ಕಾರ್ಯದರ್ಶಿ ಪರಶುರಾಮ ಇಟಗೌಡ್ರ ಸ್ಥಳೀಯರಿಗೆ ಸೂಚನೆ ನೀಡಿದ್ದಾರೆ.
ಗ್ರೇಡ್-2 ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ, ಕರ ವಸೂಲಿಗಾರ ಸುರೇಶ ಬಾಣಸಿ, ಈರಣ್ಣ ದಂಡಿನ, ಶಿವಾನಂದ ಐದುಡ್ಡಿ, ಸಾಂವಕ್ಕಾ ಹರಿಜನ ಸೇರಿದಂತೆ ಸಿಬ್ಬಂದಿ, ಇದ್ದರು.
“ಬೆಟಗೇರಿ ಗ್ರಾಮದ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸ್ವಚ್ಛತೆಗೆ ಆದ್ಯತೆ ನೀಡಿ, ಗ್ರಾಮ ಪಂಚಾಯಿತಿದವರ ಜೋತೆ ಕೈಜೋಡಿಸಿ ಸಹಕರಿಸಿದರೆ ಕಸ ಮುಕ್ತ ಗ್ರಾಮವನ್ನಲ್ಲದೇ, ರಾಜ್ಯದಲ್ಲಿಯೇ ಮಾದರಿ ಗ್ರಾಮವನ್ನಾಗಿಸಲು ಪ್ರಯತ್ನಿಸುತ್ತಿರುವ ನಮ್ಮ ಮತ್ತು ನಿಮ್ಮೆಲ್ಲರ ಕನಸು ನನಸಾಗಲು ಸಾಧ್ಯ. ಎಚ್.ಎನ್.ಬಾವಿಕಟ್ಟಿ ಪಿಡಿಒ