ಗೋಕಾಕ:ಸುಳ್ಳು ಪ್ರಮಾಣಪತ್ರ ನೀಡಿ ರಿಯಾಯತಿ ಬಸ್ ಪಾಸ್ ಪಡೆದು ಮೋಸ : ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು
ಸುಳ್ಳು ಪ್ರಮಾಣಪತ್ರ ನೀಡಿ ರಿಯಾಯತಿ ಬಸ್ ಪಾಸ್ ಪಡೆದು ಮೋಸ : ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ.24-
ಐಟಿಐ ಕಾಲೇಜ ವಿದ್ಯಾರ್ಥಿಗಳೆಂದು ಸುಳ್ಳು ಪ್ರಮಾಣಪತ್ರ ನೀಡಿ ರಿಯಾಯತಿ ಬಸ್ ಪಾಸ್ ಪಡೆದು ಮೋಸ ಮಾಡಲಾಗಿದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗೀಯ ಭದ್ರತಾ ನಿರೀಕ್ಷಕ ಅಜೀತ ಹೊಸಟ್ಟಿ ಗೋಕಾಕ ಗ್ರಾಮೀಣ ಪೋಲೀಸ ಠಾಣೆಗೆ ದೂರು ನೀಡಿದ ಘಟನೆ ಜರುಗಿದೆ.
ಸವದತ್ತಿ ತಾಲೂಕಿನ ಯರಗಟ್ಟಿಯ ಶ್ರೀ ರೇಣುಕಾ ರೂರಲ್ ಪ್ರೈ. ಐಟಿಐ ಕಾಲೇಜ ಪ್ರಾಚಾರ್ಯ ಗುರುರಾಜ ಪಾಟೀಲ, ಗೋಕಾಕದ ಆರಾಧನಾ ಕಂಪ್ಯೂಟರ ಸೆಂಟರ ಮಾಲೀಕ ಸೇರಿ ಕಾಲೇಜ ವಿದ್ಯಾರ್ಥಿಗಳಲ್ಲದ 40 ಜನರಿಗೆ ಐಟಿಐ ಕಾಲೇಜ ವಿದ್ಯಾರ್ಥಿಗಳೆಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಬಸ್ ರಿಯಾಯತಿ ಪಾಸ್ ಕೊಡಿಸಿ 9.57 ಲಕ್ಷ ರೂ. ಹಾನಿ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಸಂಸ್ಥೆಯ ಭದ್ರತಾ ಅಧಿಕಾರಿಗಳು ಐಟಿಐ ಕಾಲೇಜಕ್ಕೆ ಭೇಟಿ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ ನಡೆಸಿದಾಗ ವಿದ್ಯಾರ್ಥಿಗಳಲ್ಲದ ವ್ಯಕ್ತಿಗಳಿಗೆ ಖೊಟ್ಟಿ ದಾಖಲಾತಿಗಳ ಸೃಷ್ಟಿಸಿ ವಿದ್ಯಾರ್ಥಿಗಳಲ್ಲದ ವ್ಯಕ್ತಿಗಳಿಗೆ ಅಕ್ರಮವಾಗಿ ಹಣ ಪಡೆದು ರಿಯಾಯತಿ ಬಸ್ ಪಾಸ್ ಮಾಡಿಸಿದ್ದು ಕಂಡು ಬಂದಿದೆ.
ಐಟಿಐ ಪ್ರಾಚಾರ್ಯ ಗುರುರಾಜ ಪಾಟೀಲ, ಆರಾಧನಾ ಕಂಪ್ಯೂಟರ್ ಸೆಂಟರ ಮಾಲೀಕ ಹಾಗೂ ರಿಯಾಯತಿ ಬಸ್ ಪಾಸ್ ಪಡೆದ ವಿದ್ಯಾರ್ಥಿಗಳಲ್ಲದ 40 ಜನರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಕೊಳ್ಳುವಂತೆ ಮನವಿ ಮಾಡಲಾಗಿದೆ.
ಈ ಬಗ್ಗೆ ಗೋಕಾಕ ಗ್ರಾಮೀಣ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.