RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ನಾಳೆಯಿಂದ ಪ್ರತಿದಿನ ಮುಂಜಾನೆ 7 ರಿಂದ 11 ಗಂಟೆಯವರೆಗೆ ಅಗತ್ಯ ವಸ್ತುಗಳ ಲಭ್ಯ : ಪ್ರಕಾಶ ಹೋಳೆಪ್ಪಗೋಳ

ಗೋಕಾಕ:ನಾಳೆಯಿಂದ ಪ್ರತಿದಿನ ಮುಂಜಾನೆ 7 ರಿಂದ 11 ಗಂಟೆಯವರೆಗೆ ಅಗತ್ಯ ವಸ್ತುಗಳ ಲಭ್ಯ : ಪ್ರಕಾಶ ಹೋಳೆಪ್ಪಗೋಳ 

ನಾಳೆಯಿಂದ ಪ್ರತಿದಿನ ಮುಂಜಾನೆ 7 ರಿಂದ 11 ಗಂಟೆಯವರೆಗೆ ಅಗತ್ಯ ವಸ್ತುಗಳ ಲಭ್ಯ : ಪ್ರಕಾಶ ಹೋಳೆಪ್ಪಗೋಳ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 25 :

 

 

ಕೊರೊನಾ ವೈರಸ್ ಬಿಕ್ಕಟಿನಿಂದ ಎಪ್ರೀಲ್-14 ರವರೆಗೆ ಭಾರತ ಲಾಕ್‍ಡೌನ್ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಪೂರೈಕೆಯ ಹಿನ್ನಲೆಯಲ್ಲಿ ದಿ. 26 ರಿಂದ ಪ್ರತಿದಿನ ಮುಂಜಾನೆ 7 ರಿಂದ 11 ಗಂಟೆಯವರೆಗೆ ಸಮಯವನ್ನು ನಿಗದಿಪಡಿಸಲಾಗಿದೆ ಎಂದು ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು ಸಾರ್ವಜನಿಕರಿಗೆ ಅಗತ್ಯ ವಸ್ತುಗಳು ಕೊರತೆಯಾಗಬಾರದು ಎಂಬ ದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದ್ದು. ಸಾರ್ವಜನಿಕರು ಶಿಸ್ತು ಬದ್ಧವಾಗಿ ಸರದಿ ಸಾಲಿನಲ್ಲಿ ನಿಂತು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಪಡೆದುಕೊಳ್ಳಬಹುದಾಗಿದೆ.
ಕಿರಾಣಿ ಸಾಮಗ್ರಿಗಳು, ತರಕಾರಿಗಳು ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ನಿಗದಿಪಡಿಸಿದ ಸಮಯದಲ್ಲಿಯೇ ಸಾರ್ವಜನಿಕರು ಪಡೆದುಕೊಳ್ಳಬೇಕು. ಹಾಗೂ ವ್ಯಾಪಾರಸ್ಥರು ಕೂಡಾ ನಿಗದಿಪಡಿಸಿದ ಸಮಯ ಮುಗಿದ ಮೇಲೆ ತಮ್ಮ ಅಂಗಡಿಗಳನ್ನು ಬಂದ ಮಾಡಬೇಕು ತಿಳಿಸಿದ ಅವರು ಈಗಾಗಲೇ ಇರುವ ನಗರದ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿಗಳು ಮಾರಾಟ ಮಾಡಬಹುದಾಗಿದ್ದು ಅಲ್ಲದೇ ರೈತಾಪಿ ಜನರಿಗಾಗಿ ತಾವು ಬೆಳೆದ ತರಕಾರಿಗಳ ಮಾರಾಟಕ್ಕಾಗಿ ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಮಾರಾಟ ಮಾಡಲು ಸ್ಥಳವನ್ನು ಗೊತ್ತುಪಡಿಸಲಾಗಿದೆ. ಗ್ರಾಹಕರಿಗೆ ಹಾಗೂ ವ್ಯಾಪಾಸ್ಥರಿಗೆ ಅಂತರವನ್ನು ಕಾಯ್ದುಕೊಂಡು ಹೆಚ್ಚಿಗೆ ಜನಗಳನ್ನು ಸೇರದಂತೆ ನೋಡಕೊಳ್ಳಬೇಕು. ಯಾವುದೇ ಅನಾಹುತಗಳಿಗೆ ಏಡೆ ಮಾಡಿಕೊಡದೇ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಬಾರದು ಎಂದು ತಿಳಿಸಿದ್ದಾರೆ.
ವ್ಯಾಪಾರ ವಹಿವಾಟು ಮುಗಿದ ನಂತರ ನಗರಸಭೆ ಹಾಗೂ ಆಗ್ನಿಶಾಮಕ ಇಲಾಖೆಯ ಸಹಕಾರದೊಂದಿಗೆ ಆ ಸ್ಥಳಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಲಾಗುವುದು ಆದ ಕಾರಣ ಸಾರ್ವಜನಿಕರು ತಾಲೂಕಾಡಳಿತದೊಂದಿಗೆ ಸಹಕರಿಸಬೇಕು. ನಿಗದಿ ಪಡಿಸಿದ ವೇಳೆ ಮುಗಿದ ಮೇಲೆ ಯಾರು ತಮ್ಮ-ತಮ್ಮ ಮನೆಗಳಿಂದ ಹೊರಗಡೆ ಬರಬಾರದು ಒಂದು ವೇಳೆ ಬಂದರೆ ಅಂತಹವರ ಮೇಲೆ ಕಾನೂನು ರೀತ್ಯಾ ಕ್ರಮಕೈಗೊಳ್ಳಲಾಗುವುದು ಎಂದು ತಹಶೀಲದಾರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

Related posts: