RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ಸಾರ್ವಜನಿಕ ಹಿತದೃಷ್ಟಿಯಿಂದ ಲೌಕಡೌನ್ ನಡುವೆಯೂ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುವು

ಗೋಕಾಕ:ಸಾರ್ವಜನಿಕ ಹಿತದೃಷ್ಟಿಯಿಂದ ಲೌಕಡೌನ್ ನಡುವೆಯೂ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುವು 

ಸಾರ್ವಜನಿಕ ಹಿತದೃಷ್ಟಿಯಿಂದ ಲೌಕಡೌನ್ ನಡುವೆಯೂ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುವು

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 26 :

 

 

ಸಾರ್ವಜನಿಕರಿಗೆ ಅನುಕೂಲ ವಾಗುವ ಹಿತದೃಷ್ಟಿಯಿಂದ ಲೌಕಡೌನ್ ನಡುವೆಯೂ ಮುಂಜಾನೆ 7 ರಿಂದ 11 ಘಂಟೆಯವರೆಗೆ ಕಾಯಿಪಲ್ಲೆ ಸೇರಿದಂತೆ ದಿನನಿತ್ಯದ ದಿನಿಸುಗಳನ್ನು ಒಂದೆಡೆ ಸೇರಿಸಿ ಮಾರಟ ಮಾಡಲು ಮತ್ತು ಖರೀದಿಸಲು ಅನುಕೂಲ ಮಾಡಿಕೊಡಲಾಯಿತು

ಗುರುವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಜರುಗಿದ ಸಂತೆಯಲ್ಲಿ ಜನರು ಭಾಗವಹಿಸಿ ಸಮಾಧಾನದಿಂದ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಪಡೆದುಕೊಂಡರು. ಕೆಲವು ಕಡೆ ಗದ್ದಲು ಉಂಟಾದರೂ ಸಹ ಪೊಲೀಸ ಸಿಬ್ಬಂದಿ ಮತ್ತು ನಗರಸಭೆ ಅಧಿಕಾರಿಗಳ ಸಹಕಾರದಿಂದ ಎಲ್ಲವು ಸುಸೂತ್ರವಾಗಿ ನಿಗದಿತ ಸಮಯದಂತೆ 11 ಘಂಟೆಗೆ ಮುಕ್ತಾಯಗೊಂಡಿತ್ತು.
ನಂತರ ಪೊಲೀಸರು ನಗರಾದ್ಯಂತ ಪೆಟ್ರೋಲಿಯಂ ಮಾಡಿ ಜನರನ್ನು ಮನೆಗಳಿಗೆ ಕಳುಹಿಸಿದರು . ಕೊರೋನ ಮುಂಜಾಗೃತ ಕ್ರಮವಾಗಿ ನಗರದಲ್ಲಿ ಜಾರಿ ಇರುವ ಲಾಕಡೌನಗೆ ಸಾರ್ವಜನಿಕರು ಸ್ವಂದಿಸುತ್ತಿದ್ದು, ಅವಶ್ಯಕ ವಸ್ತುಗಳನ್ನು ಖರೀದಿಸಲು ಮಾತ್ರ ಹೊರಗಡೆ ಬರುತ್ತಿದ್ದು, ಮತ್ತೆ ಮನೆಯೊಳಗೆ ಸೇರುತ್ತಿದ್ದಾರೆ.

ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ : ಸತತ ಒಂದು ವಾರದಿಂದ ಕೊರೋನಾ ಮುಂಜಾಗೃತ ಕ್ರಮವಾಗಿ ನಗರದಲ್ಲಿ ಜಾರಿಯಲ್ಲಿರುವ ಲಾಕಡೌನ ನಿಯಂತ್ರಿಸಲು ಪೊಲೀಸರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ . ಊಟಾ ತಿಂಡಿ ಇಲ್ಲದೆ ದಿನದ 24 ಘಂಟೆಗಳ ಕಾಲ ಸಾರ್ವಜನಿಕರ ಸೇವೆ ಗೈಯುತ್ತಿದ್ದಾರೆ
ಪೊಲೀಸರ ಕಾರ್ಯವನ್ನು ಮೆಚ್ಚಿ ಸ್ಥಳೀಯ ರಿಲಾಯನ್ಸ ಮಾಲನವರು ಕರ್ತವ್ಯ ನಿರತ ಪೊಲೀಸ ಸಿಬ್ಬಂದಿಗಳಿಗೆ ನೀರಿನ ಬಾಟಲಿ ಮತ್ತು ಬಿಸ್ಕತ್ ಗಳನ್ನು ವಿತರಿಸಿದರೆ. ಜೆ.ಸಿ.ಐ ಸಂಸ್ಥೆಯವರು ನಗರದಲ್ಲಿ ಕರ್ತವ್ಯ ನಿರತ ಪೊಲೀಸರಿಗೆ ಮಾಧ್ಯಹ್ನದ ಊಟವನ್ನು ತಲುಪಿಸಿದ್ದಾರೆ

ಸಂತೆಗೆ ಪರ ವಿರೋಧ ಅಭಿಪ್ರಾಯಗಳು : ಲಾಕಡೌನ ಸಡಿಲಿಸಿ 4 ಘಂಟೆಗಳ ಕಾಲ ಅಗತ್ಯ ವಸ್ತುಗಳನ್ನು ಕೋಳ್ಳಲು ಅವಕಾಶ ಮಾಡಿಕೊಟ್ಟ ತಾಲೂಕಾ ಆಡಳಿತದ ಕ್ರಮವನ್ನು ಕೆಲವರು ಸ್ವಾಗತಿಸಿದರೆ ಕೆಲವರು ವಿರೋಧಿಸಿದ್ದಾರೆ . ತಹಶೀಲ್ದಾರ ದೂರವಾಣಿ ಮೂಲಕ ಅವರಿಗೆ ಕೆಲವರು ಈ ಕ್ರಮವನ್ನು ಸ್ವಾಗತಿಸಿದರೆ , ಕೆಲವರು ವಿರೋಧಿಸಿದ್ದಾರೆಂದು ತಿಳಿದು ಬಂದಿದೆ .

ಗಗನಕ್ಕೆ ಏರಿದ ತರಕಾರಿ ಬೆಲೆ : ಲಾಕಡೌನ ಮಧ್ಯ ಇಂದು ಕೆಲ ಘಂಟೆಗಳ ಕಾಲ ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಅವಕಾಶ ಮಾಡಿ ಕೊಟ್ಟ ಬೆನ್ನಲ್ಲೇ ತರಕಾರಿ ಬೆಲೆ ಗಗನಕ್ಕೆ ಏರಿದೆ ನಿನ್ನೆಯಷ್ಟೇ 20 ರೂ ಕೆ.ಜಿ ಇದ್ದ ಉಳ್ಳಾಗಡ್ಡಿ ಬೆಲೆ ಇಂದು 50 ರೂ ಗೆ ಮಾರಲಾಯಿತು ಎಂದು ಖರೀದಿದಾರರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ .ನಗರಸಭೆ ಮತ್ತು ಪೊಲೀಸ ಅಧಿಕಾರಿಗಳು ಮಾರಾಟಗಾರರಿಗೆ ಹೆಚ್ಚಿನ ದರ ತಗೆದುಕೋಳ್ಳದೆ ಕಡ್ಡಾಯವಾಗಿ ಮಾರುಕಟ್ಟೆ ದರದಂತೆ ಮಾರಾಟ ಮಾಡಬೇಕು ಎಂದು ಎಚ್ಚಿರಿಸಿದರೂ ಸಹ ಕೆಲವು ಕಡೆ ಹೆಚ್ಚಿಗೆ ಬೆಲೆ ಪಡೆದ ಪ್ರಕರಣಗಳು ಕಂಡು ಬಂದವು ನಂತರ ನಗರಸಭೆ ಸಿಬ್ಬಂದಿಗಳು ವಾಲ್ಮೀಕಿ ಕ್ರೀಡಾಂಗಣವನ್ನು ಸಂಪೂರ್ಣ ಸ್ವಚ್ಚಗೋಳಿಸಿದರು
ಒಟ್ಟಾರೆ ಸಾರ್ವಜನಿಕರ ಹಿತದೃಷ್ಟಿಯಿಂದ ಲಾಕಡೌನ ಮಧ್ಯವು ಸಹ ಕೆಲ ಘಂಟೆಗಳ ಕಾಲ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಅನಾವಶ್ಯಕವಾಗಿ ಸಂತೆಯಲ್ಲಿ ಸೇರುವದಾಗಲಿ ಹೊರಗಡೆ ತಿರುಗಾಡುವದಾಗಲಿ ಮಾಡದೆ ಸಹಕರಿಸಬೇಕೆಂದು ತಹಶೀಲ್ದಾರ ವಿನಂತಿಸಿದ್ದಾರೆ

Related posts: