ಮೂಡಲಗಿ:ನಿಷೇಧಾಜ್ಞೆ ಉಲ್ಲಂಘಿಸಿದವರ ವಿರುದ್ದ ಪ್ರಕರಣ ದಾಖಲು
ನಿಷೇಧಾಜ್ಞೆ ಉಲ್ಲಂಘಿಸಿದವರ ವಿರುದ್ದ ಪ್ರಕರಣ ದಾಖಲು
ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಮಾ 28 :
ದೇಶದಲ್ಲಿ ಆತಂಕ ಸೃಷ್ಠಿಸಿರುವ ಮಹಾಮಾರಿ ಕೊರೋನ ವೈರಸ್ ತಡೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 21ದಿನ ದೇಶಾಧ್ಯಂತ ಲಾಕ್‍ಡೌನ್ ಆದೇಶ ಹೊರಡಿಸಿದ್ದು ಏ.14ವರೆಗೆ ಜಿಲ್ಲೆಯಾದ್ಯಂತ ನಿಷೇದಾಜ್ಞೆ ಜಾರಿಯಲ್ಲಿದ್ದರೂ ಪಟ್ಟಣದ ಕೆಲ ಕಿರಾಣಿ ಅಂಗಡಿ ಮಾಲಿಕರು ಆದೇಶ ಉಲ್ಲಂಘನೆ ಮಾಡಿ ಅನಧೀಕೃತವಾಗಿ ಅಂಗಡಿಗಳನ್ನು ತೆರೆದು ಹೆಚ್ಚಿನ ಜನರನ್ನು ಅಂಗಡಿಯ ಮುಂದೆ ನಿಲ್ಲಿಸಿಕೊಂಡು ಅವಶ್ಯಕ ವಸ್ತುಗಳನ್ನು ಹೊರತುಪಡಿಸಿ ಬೇರೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಹಾಗೂ ನಿಷೇಧಾಜ್ಞೆ ಉಲ್ಲಂಘಿಸಿ ಅಧಿಕ ಜನ ಸೇರಿಕೊಂಡು ತಿರುಗಾಟ ಮಾಡುತ್ತಿದ್ದವರ ಮೇಲೆ ಮೂಡಲಗಿ ವೃತ್ತನಿರೀಕ್ಷಕರಾದ ವೆಂಕಟೇಶ ಮುರನಾಳ ಅವರು ನೇತೃತ್ವದಲ್ಲಿ ಐಪಿಸಿ ಸೆಕ್ಸನ್ 188ರ ಅಡಿ ಪ್ರಕರಣ ದಾಖಲಿಸಲಾಗಿದೆ.
ಪಟ್ಟಣದ ಪ್ರಕಾಶ ಕೆಂಪನ್ನಾ ತೇರದಾಳ, ಯಲ್ಲಪ್ಪ ದುಂಡಪ್ಪ ಬೆಳ್ಳಕ್ಕಿ, ವಹೀದಲಿ ಮಹ್ಮದಲಿ ಬಾಗವಾನ್, ನಾಗನೂರಿನ ಮಹಾದೇವ ಕರಬನ್ನವರ, ಘಟಪ್ರಭಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ನಲ್ಲನಟ್ಟಿಯ ಭೀಮಪ್ಪ ಗಂಗಪ್ಪ ಪೂಜೇರಿ, ಮಲ್ಲಪೂರದ ಮೀರಾಸಾಬ ಬಾಗವಾನ್, ಶಿಂದಿಕುರಬೆಟ್ಟದ ಶಾರೂಖ್ ಬಾದಷಾಹ ಮುಮ್ಮತಾನಿ ಹಾಗೂ ಕುಲಗೋಡ ಠಾಣಾ ವ್ಯಾಪ್ತಿಗೆ ಬರುವ ಕಪ್ಪರಟ್ಟಿ ಪಾಂಡು ಮಾರುತಿ ಖಾನಟ್ಟಿ, ಕಲಾರಕೊಪ್ಪದ ಗ್ರಾಮದ ಮುದಕಪ್ಪ ಸತ್ಯಪ್ಪ ಗೌಡಪ್ಪನವರ, ಕಂಡರಟ್ಟಿ ಗ್ರಾಮದ ಕೆಂಚಪ್ಪ ದೇವೆಂದ್ರಪ್ಪ ಹುಕ್ಕೇರಿ, ದುಂಡಪ್ಪ ಫಕೀರಪ್ಪ ಪಾಟೀಲ ಇವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ಮೂಡಲಗಿ ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ ತಿಳಿಸಿದರು.