RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ಕೊರೋನಾ ವೈರಸ್ ತಡೆಗಟ್ಟಲು ಅಧಿಕಾರಿಗಳು , ಜನಪ್ರತಿನಿಧಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ: ಸಚಿವ ರಮೇಶ ಸೂಚನೆ

ಗೋಕಾಕ:ಕೊರೋನಾ ವೈರಸ್ ತಡೆಗಟ್ಟಲು ಅಧಿಕಾರಿಗಳು , ಜನಪ್ರತಿನಿಧಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ: ಸಚಿವ ರಮೇಶ ಸೂಚನೆ 

ಕೊರೋನಾ ವೈರಸ್  ತಡೆಗಟ್ಟಲು ಅಧಿಕಾರಿಗಳು , ಜನಪ್ರತಿನಿಧಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ:  ಸಚಿವ ರಮೇಶ ಸೂಚನೆ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 29 :

ಕೊರೋನಾ ವೈರಸ್ ಹರಡದಂತೆ ತಡೆಗಟ್ಟಲು ಅಧಿಕಾರಿಗಳು , ಜನಪ್ರತಿನಿಧಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು

ರವಿವಾರದಂದು ನರಗದ ತಮ್ಮ ಕಾರ್ಯಾಲಯದಲ್ಲಿ ಕೊರೋನಾ ಮುಂಜಾಗೃತ ಕ್ರಮಗಳ ಕುರಿತು ತಾಲೂಕಾ ಅಧಿಕಾರಿಗಳ ಸಭೆ ನಡೆಸಿ  ಪತ್ರಕರ್ತರೊಂದಿಗೆ  ಮಾತನಾಡಿದ ಅವರು
  ಆಕಸ್ಮಿಕವಾಗಿ ದೇಶಾದ್ಯಂತ ಭೀಕರ ಕೊರೋನಾ ವೈರಸ ಅಪ್ಪಳಿಸಿ ಜನರ ಜೀವನವನ್ನೇ ಅಸ್ತವ್ಯಸ್ತ ಗೋಳಿಸಿದೆ ಜನತೆ ಅನಾವಶ್ಯಕವಾಗಿ ಹೊರ ಬರದಂತೆ ಮನೆಯಲ್ಲಿಯೇ ಇದ್ದು ವೈರಸ ಹರಡದಂತೆ ಸಹಕರಿಸಬೇಕು ಅಧಿಕಾರಿಗಳು ವಾಸ್ತವಿಕತೆಯನ್ನು ಅರಿತು ಸೂಕ್ತ ಕ್ರಮ ಕೈಗೊಂಡು ಜನರ ಸಮಸ್ಯೆಗಳಿಗೆ ಸ್ವಂದಿಸಿ ಜೀವನಾವಶಕ ವಸ್ತುಗಳು ದೋರೆಯುವಂತೆ ವ್ಯವಸ್ಥೆ ಮಾಡಬೇಕು .ನಗರ ಹಾಗೂ ಗ್ರಾಮ ಮಟ್ಟದಲ್ಲಿ ಜನಪ್ರತಿನಿಧಿಗಳು ತಮ್ಮ ವಾರ್ಡುಗಳಲ್ಲಿ ಪ್ರತಿನಿತ್ಯ ಎರೆಡು ಸಲ ಆರೋಗ್ಯವನ್ನು ವಿಚಾರಿಸಿ ಅವಶ್ಯಕತೆ ಬಿದ್ದರೆ ವೈದ್ಯರನ್ನು ಸಂರ್ಪಕಿಸಿ ಸೂಕ್ತ ಚಿಕಿತ್ಸೆ ಕೊಡಿಸಿ , ಅವರ ಸಮಸ್ಯೆಗಳಿಗೆ ಸ್ವಂದಿಸಬೇಕು ಎಂದು ಹೇಳಿದರು

ಅಗತ್ಯ ವಸ್ತುಗಳು ದಾಸ್ತಾನು ಮಾಡಿದರೆ ಜಪ್ತಿ :
ವ್ಯಾಪಾರಸ್ಥರು ಅಗತ್ಯ ವಸ್ತುಗಳನ್ನು ದಾಸ್ತಾನು ಮಾಡಿ ಸಾರ್ವಜನಿಕರಿಂದ  ಹೆಚ್ಚಿನ ದರ ಪಡೆದರೆ ಅವರ ದಾಸ್ತಾನುಗಳನ್ನು ಜಪ್ತಿಮಾಡಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ತಹಶೀಲ್ದಾರ್ ಅವರಿಗೆ ಸೂಚಿಸಿದರು

ಸಭೆಯ ನಂತರ ಹಿರಿಯ ನಗರಸಭೆ ಸದಸ್ಯ ಎಸ್.ಎ. ಕೊತವಾಲ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ನಗರಾದ್ಯಂತ ಸಂಚರಿಸಿ  ಸಾರ್ವಜನಿಕರು ಧೈರ್ಯದಿಂದ ಈ ಸಂಕಷ್ಟವನ್ನು ಎದುರಿಸಬೇಕು ಸರಕಾರ ಕೈಗೊಂಡ ಕ್ರಮಗಳಿಗೆ ಸಹಕಾರ ನೀಡಬೇಕು ,ಅನಾವಶ್ಯಕ ವಾಗಿ ಮನೆಯಿಂದ ಹೋರ ಬರದೆ ಮನೆಯಲ್ಲೇ ಇರುವಂತೆ ವಿನಂತಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಪ್ರಕಾಶ ಹೋಳೆಪ್ಪಗೋಳ , ಡಿ.ಎಸ್.ಪಿ ಡಿ.ಟಿ.ಪ್ರಭು, ಪೌರಾಯುಕ್ತ ಶಿವಾನಂದ ಹಿರೇಮಠ, ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ ಉಪಸ್ಥಿತರಿದ್ದರು

Related posts: