RNI NO. KARKAN/2006/27779|Saturday, October 19, 2024
You are here: Home » breaking news » ಮೂಡಲಗಿ:ರೈತರು ಬೆಳೆದಿರುವ ಕೃಷಿ ಉತ್ಪನ್ನಗಳನ್ನು ಖರೀದಿಸಲು ಸರಕಾರದಿಂದಲೇ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ : ಗಡಾದ ಮನವಿ

ಮೂಡಲಗಿ:ರೈತರು ಬೆಳೆದಿರುವ ಕೃಷಿ ಉತ್ಪನ್ನಗಳನ್ನು ಖರೀದಿಸಲು ಸರಕಾರದಿಂದಲೇ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ : ಗಡಾದ ಮನವಿ 

ರೈತರು ಬೆಳೆದಿರುವ ಕೃಷಿ ಉತ್ಪನ್ನಗಳನ್ನು ಖರೀದಿಸಲು ಸರಕಾರದಿಂದಲೇ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ : ಗಡಾದ ಮನವಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಮಾ 30 :

 

 

ರೈತರು ಬೆಳೆದಿರುವ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಂಬಲ ಬೆಲೆ ನೀಡಿ ಖರೀದಿಸುವ ಸಲುವಾಗಿ, ಪ್ರತಿ ತಾಲೂಕು ಹೋಬಳಿ ಮಟ್ಟದಲ್ಲಿ ಸರಕಾರದಿಂದಲೇ ಖರೀದಿ ಕೇಂದ್ರಗಳನ್ನು ಪ್ರಾರಂಭಿಸುವುದರ ಮೂಲಕ ಸಂಭವಿಸಬಹುದಾದ ರೈತರ ಆತ್ಮಹತ್ಯೆಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಉತ್ತರ ಕರ್ನಾಟಕ ಹೋರಾಟ ಸಮೀತಿ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದ್ದಾರೆ.

ಅವರು ಸೋಮವಾರ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ದೇಶದಲ್ಲಿ ಹರಡಿರುವ ಭಯಾನಕ ಕರೋನಾ ರೋಗವನ್ನು ನಿಯಂತ್ರಿಸಲು ಕೇಂದ್ರ ಸರಕಾರವು ಸಂಪೂರ್ಣ ಲಾಕ್‍ಡೌನ್ ಜಾರಿಗೆ ಮಾಡಿರುವುದರಿಂದ ಜಿಲ್ಲೆಯ ರೈತರು ಬೆಳೆದಿರುವ ಗೋವಿನ ಜೋಳ, ಅರಷಿಣ, ದ್ರಾಕ್ಷಿ, ಕಲ್ಲಂಗಡಿ, ಟೋಮ್ಯಾಟೋ ಸೇರಿದಂತೆ ಇನ್ನಿತರ ಕೃಷಿ/ತೋಟಗಾರಿಕಾ ಉತ್ಪನ್ನಗಳನ್ನು ಬೇರೆ ಕಡೆಗೆ ಸಾಗಾಣಿಕೆ ಮಾಡಲು ವಾಹನಗಳ ಇರುವುದಿಲ್ಲ. ಅಲ್ಲದೇ ಜಿಲ್ಲಾ ಮತ್ತು ಅಂತರ ರಾಜ್ಯ ನಿರ್ಬಂಧ ವಿರುವುದರಿಂದ ನೆರೆಯ ಮಹಾರಾಷ್ಟ್ರ ಮತ್ತು ಇತರ ಜಿಲ್ಲೆಗಳಲ್ಲಿರುವ ಮಾರುಕಟ್ಟೆಗಳಿಗೆ ಹೋಗಿ ಈ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಸ್ಥಳಿಯವಾಗಿ ಇವುಗಳನ್ನು ಖರೀದಿಸಲು ಸಹ ವ್ಯಾಪಾರಸ್ಥರು ಮುಂದೆ ಬರುತ್ತಿಲ್ಲವಾದ್ದರಿಂದ ಈ ಎಲ್ಲ ಉತ್ಪನ್ನಗಳ ಬೆಲೆಗಳು ಕುಸಿದಿರುತ್ತವೆ. ಇದ್ದರಿಂದಾಗಿ ರೈತರು ಸಾಲ ಮಾಡಿ ಹಣತಂದು ಖರ್ಚು ಮಾಡಿ ಬೆಳೆದಿರುವ ಇವುಗಳನ್ನು ರಸ್ತೆಯ ಬದಿಗೆ, ಹಳ್ಳಕ್ಕೆ ಎಸೆಯುತ್ತಿರುವದು ವಿಷಾದನೀಯವಾಗಿದೆ.
ಸದ್ಯ ದೇಶದಲ್ಲಿ ಹಬ್ಬುತ್ತಲಿರುವ ಭಯಂಕರ ಕರೋನಾ ರೋಗದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಒಂದು ಕಡೆಯಾದರೆ, ಕಷ್ಟ ಪಟ್ಟು ತಾವು ಬೆಳೆದಿರುವ ಬೆಳೆಗಳಿಗೆ ಯೋಗ್ಯ ದಾರಣಿ ಸಿಗಲಿಲ್ಲವೆಂಬ ಕಾರಣಕ್ಕಾಗಿ ಸಾಲ ಮಾಡಿ ಇವುಗಳನ್ನು ಬೆಳೆದ ರೈತರು ಆತ್ಮಹತ್ಯಗೆ ಶರಣಾಗುವ ಪ್ರಸಂಗಗಳು ಕೂಡಾ ನಡೆಯಬಹುದಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಕೊಳ್ಳುವ ಸಲುವಾಗಿ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿ ಕೂಡಲೇ ಇದನ್ನು ಕಾರ್ಯರೂಪಕ್ಕೆ ತರುವಂತೆ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ವಿನಂತಿಸಿದ್ದಾರೆ.

Related posts: