ಗೋಕಾಕ:ಕರ್ತವ್ಯ ನಿರತ ಪೊಲೀಸರಿಗೆ ಉಪಹಾರ ಹಾಗೂ ನೀರಿನ ಬಾಟಲ್‍ಗಳ ವ್ಯವಸ್ಥೆ
ಕರ್ತವ್ಯ ನಿರತ ಪೊಲೀಸರಿಗೆ ಉಪಹಾರ ಹಾಗೂ ನೀರಿನ ಬಾಟಲ್‍ಗಳ ವ್ಯವಸ್ಥೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 29 :
ಇಲ್ಲಿನ ಶೂನ್ಯ ಸಂಪಾದನಮಠ ಹಾಗೂ ಲಿಂಗಾಯತ ಮಹಿಳಾ ವೇದಿಕೆ ಮತ್ತು ಇವುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರದಂದು ನಗರದಲ್ಲಿ ಕರ್ತವ್ಯ ನಿರತ ಪೊಲೀಸರಿಗೆ ಉಪಹಾರ ಹಾಗೂ ನೀರಿನ ಬಾಟಲ್‍ಗಳನ್ನು ನೀಡುವ ಮೂಲಕ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಚಾಲನೆ ನೀಡಿದರು.
ಸಂಗೋಳ್ಳಿ ರಾಯಣ್ಣ ವೃತ್ತ, ವಾಲ್ಮೀಕಿ ವೃತ್ತ, ನಾಕಾ ನಂ 1 ಸೇರಿದಂತೆ ವಿವಿಧೆಡೆ ಕರ್ತವ್ಯ ನಿರತ ಪೆÇಲೀಸ್ ಸಿಬ್ಬಂದಿಗಳಿಗೆ ಹಾಗೂ ನಗರಸಭೆ ಪೌರ ಕಾರ್ಮಿಕರಿಗೆ ಉಪಹಾರ ಮತ್ತು ನೀರಿನ ಬಾಟಲ್, ಮಜ್ಜಿಗೆ ವಿತರಿಸಲಾಯಿತು.
ಕಳೆದ ಒಂದು ವಾರದಿಂದ ಜಾರಿಯಲ್ಲಿರುವ ಲಾಕ್‍ಡೌನ್‍ನ್ಹಿನ್ನಲೆಯಲ್ಲಿ ಸರಿಯಾಗಿ ಊಟ ಉಪಚಾರವಿಲ್ಲದೆ ಕೊರೋನಾ ವೈರಸ್ ಮುಂಜಾಗೃತ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುÀವುದು ಹಾಗೂ ಜನದಟ್ಟನೆಯಾಗದಂತೆ ಕಟ್ಟನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಪೆÇಲೀಸರಿಗೆ ಹಾಗೂ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರು ಪೌರಕಾರ್ಮಿಕರಿಗೆ ನಗರದ ಜೆ.ಸಿ.ಐ ಸಂಸ್ಥೆ,ಮ ಕೆ.ಬಿ.ಎಸ್.ನಂ 3 ಶಾಲೆಯ ಗೆಳೆಯರ ಬಳಗದ ವತಿಯಿಂದ ಮುಂಜಾನೆ ಉಪಹಾರ ಹಾಗೂ ಜೆ.ಸಿ.ಐ ಸಂಸ್ಥೆಯಿಂದ ಮಧ್ಯಾಹ್ನ ಊಟದ ವ್ಯವಸ್ಥೆ ನಿರಂತರವಾಗಿ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಡಿವಾಯ್‍ಎಸ್‍ಪಿ ಪ್ರಭು ಡಿ.ಟಿ., ವಿವೇಕ ಜತ್ತಿ, ಅಡಿವೇಶ ಗವಿಮಠ, ಶ್ರೀಮತಿ ಶಕುಂತಲಾ ಕಟ್ಟಿ, ಶ್ರೀಮತಿ ಸೇವಂತಾ ಮುಚ್ಚಂಡಿಹಿರೇಮಠ, ಸತೀಶ ಬನ್ನಿಶೆಟ್ಟಿ ಸೇರಿದಂತೆ ಅನೇಕರು ಇದ್ದರು .