RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ನಮಗಾಗಿ ನೀವು ಮನೆಯಲ್ಲಿರಿ, ನಿಮಗಾಗಿ ನಾವು ರಸ್ತೆ ಮೇಲೆ ಕರ್ತವ್ಯ ನಿರ್ವಹಿಸುತ್ತೆವೆ : ಸಾರ್ವಜನಿಕರಲ್ಲಿ ಸಿ.ಪಿ.ಐ ಗೋಪಾಲ ಮನವಿ

ಗೋಕಾಕ:ನಮಗಾಗಿ ನೀವು ಮನೆಯಲ್ಲಿರಿ, ನಿಮಗಾಗಿ ನಾವು ರಸ್ತೆ ಮೇಲೆ ಕರ್ತವ್ಯ ನಿರ್ವಹಿಸುತ್ತೆವೆ : ಸಾರ್ವಜನಿಕರಲ್ಲಿ ಸಿ.ಪಿ.ಐ ಗೋಪಾಲ ಮನವಿ 

ನಮಗಾಗಿ ನೀವು ಮನೆಯಲ್ಲಿರಿ, ನಿಮಗಾಗಿ ನಾವು ರಸ್ತೆ ಮೇಲೆ ಕರ್ತವ್ಯ ನಿರ್ವಹಿಸುತ್ತೆವೆ : ಸಾರ್ವಜನಿಕರಲ್ಲಿ ಸಿ.ಪಿ.ಐ ಗೋಪಾಲ ಮನವಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 30 :

 

 

ನಮಗಾಗಿ ನೀವು ಮನೆಯಲ್ಲಿರಿ, ನಿಮಗಾಗಿ ನಾವು ರಸ್ತೆ ಮೇಲೆ ಇದ್ದೇವೆ. ಅನಗತ್ಯವಾಗಿ ರಸ್ತೆ ಮೇಲೆ ಸಂಚಾರ ಬೇಡವೆಂದು ಗೋಕಾಕ ಸಿಪಿಐ ಗೋಪಾಲ ರಾಥೋಡ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಸೋಮವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್‍ನ್ನು ತಡೆಗಟ್ಟಲು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಎಪ್ರೀಲ್-14 ರವರೆಗೆ ಲಾಕ್‍ಡೌನ್ ಘೋಷಿಸಿದೆ ಅದಕ್ಕಾಗಿ ಸಾರ್ವಜನಿಕರು ಅಂತರವನ್ನು ಕಾಪಾಡಲು ಮುತುವರ್ಜಿ ವಹಿಸಿ ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕೆಂದು ತಿಳಿಸಿದರು.
ಅಪಾಯಕಾರಿಯ ಇಂತಹ ಸಂದರ್ಭದಲ್ಲಿ ನಾವು ನಮ್ಮ ಹೊಣೆಗಾರಿಕೆಯನ್ನು ಹೊತ್ತು ನಿಮ್ಮ ರಕ್ಷಣೆಗಾಗಿ ಪೋಲಿಸ್ ಇಲಾಖೆಯ ಎಲ್ಲ ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದು, ತಾಲೂಕಾಡಳಿತದ ವತಿಯಿಂದ ಅಗತ್ಯ ವಸ್ತುಗಳನ್ನು ಕೊರತೆಯಾಗದಂತೆ ಕ್ರಮವಹಿಸಲಾಗಿದೆ. ಸಾರ್ವಜನಿಕರು ಕೂಡಾ ಇಲಾಖೆಯೊಂದಿಗೆ ಸಹಕರಿಸಬೇಕು. ಬೇಕಾಬಿಟ್ಟಿಯಾಗಿ ರಸ್ತೆಗೆ ಇಳಿಯದೇ ತುರ್ತು ಕೆಲಸವಿದ್ದಾಗ ಮಾತ್ರ ಹೊರಬಂದು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಬೇಕಾಬಿಟ್ಟಿಯಾಗಿ ರಸ್ತೆಯಲ್ಲಿ ಸಂಚಾರ ನಡೆಸುವುದು ಹಾಗೂ ಗುಂಪುಗೂಡುವುದನ್ನು ಮಾಡಿದರೇ ನಿರ್ದಾಕ್ಷೀಣವಾಗಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು. ಬೈಕ ಸವಾರರರು ವಿನಾಕಾರಣ ಅಡ್ಡಾಡಿದರೇ ಆಯ್‍ಪಿಸಿ ಸೆಕ್ಸನ್ 279ರ ಅಡಿಯಲ್ಲಿ ಪ್ರಕರಣ ದಾಖಲಿಸಿ ವಾಹನಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಖಡಕ್ಕಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಪೇದೆ ಅಶೋಕ ಶೆಂಡಗೆ ಇದ್ದರು

Related posts: