ಘಟಪ್ರಭಾ:ಅಲೇಮಾರಿ ಜನಾಂಗದ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಣೆ
ಅಲೇಮಾರಿ ಜನಾಂಗದ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಮಾ 31 :
ಮಾರಕ ಕೊರೋನಾ ಸೊಂಕಿನ ಕಾರಣ ಉದ್ಯೋಗ ಕಳೆದುಕೊಂಡಿರುವ ಆಂದ್ರ ಹಾಗೂ ವಿಜಯಪೂರ ಮೂಲದ ಅಲೇಮಾರಿ ಜನಾಂಗದ ಕುಟುಂಬಗಳಿಗೆ ಸ್ಥಳೀಯ ಮುಖಂಡರಾದ ಡಿ.ಎಂ.ದಳವಾಯಿ ತಮ್ಮ ಸ್ವಂತ ಖರ್ಚಿನಿಂದ ಆಹಾರ ಸಾಮಗ್ರಿಗಳನ್ನು ವಿತರಿಸಿದರು.
ಮಂಗಳವಾರ ಇಲ್ಲಿಯ ದನಗಳ ಪೇಟೆ ಹತ್ತಿರ ಗುಡಿಸಲುಗಳಲ್ಲಿ ವಾಸವಾಗಿರುವ ಅಲೇಮಾರಿ ಜನರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ದಳವಾಯಿ ಅವರು, ಲಾಕ್ ಡೌವನಗೆ ನೂರಾರು ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಅದರಲ್ಲಿ ಅಲೇಮಾರಿ ಜನರು ಊಟಕ್ಕೂ ಪರದಾಡುವಂತಾಗಿದೆ. ಸದ್ಯ ನಮ್ಮ ಸ್ವಂತ ಖರ್ಚಿನಿಂದ ಇವರಿಗೆ ಸುಮಾರು ಒಂದು ವಾರಕ್ಕೆ ಆಗುವಷ್ಟು ದಿನಸಿ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಲ್ಲಾಪೂರ ಪಿಜಿ ಪಟ್ಟಣ ಪಂಚಾಯಿತಿಯಿಂದ ಬರುವ ಸರ್ಕಾರದÀ ಎಲ್ಲ ಸವಲತ್ತುಗಳನ್ನು ಬಡವರಿಗೆ ಒದಗಿಸಲಾಗುವುದು ಎಂದು ಹೇಳಿದರು. ಇದೇ ವೇಳೆ ಪಟ್ಟಣದಲ್ಲಿರುವ ಹೊರ ರಾಜ್ಯದ ಕಾರ್ಮಿಕರು ಒಲಸೆ ಹೋಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಘಟಪ್ರಭಾ ಪಿ.ಎಸ್.ಐ ಹಾಲಪ್ಪ ಬಾಲದಂಡಿ, ಪ.ಪಂ ಮುಖ್ಯಾಧಿಕಾರಿ ಕೆ.ಭಿ.ಪಾಟೀಲ, ಪ.ಪಂ ಸದಸ್ಯರಾದ ವಿಕ್ರಮ ದಳವಾಯಿ, ಇಮ್ರಾನ ಬಟಕುರ್ಕಿ, ಸಲೀಮ ಕಬ್ಬೂರ, ಹಿರಿಯರಾದ ಸುರೇಶ ಪೂಜಾರಿ, ಈರಣ್ಣಾ ಸಂಗಮನವರ, ಕೆಂಪಣ್ಣಾ ಚೌಕಶಿ, ಭರಮಣ್ಣಾ ಗಾಡಿವಡ್ಡರ, ಮಕ್ಸೂದ ಮುಲ್ಲಾ, ಶಣ್ಮುಖ ಬಿದರಿ, ಪೊಲೀಸ ಸಿಬ್ಬಂದಿಗಳಾದ ಬಿ.ಎಸ್.ನಾಯಿಕ ಸೇರಿದಂತೆ ಅನೇಕರು ಇದ್ದರು.