RNI NO. KARKAN/2006/27779|Saturday, December 14, 2024
You are here: Home » breaking news » ಮೂಡಲಗಿ:ದಿನಬಳಕೆ ವಸ್ತುಗಳ ಕಿಟ್ ನೀಡಿ ಮಾನವೀಯತೆ ಮೆರೆದ ಸಿಪಿಐ ಮುರನಾಳ

ಮೂಡಲಗಿ:ದಿನಬಳಕೆ ವಸ್ತುಗಳ ಕಿಟ್ ನೀಡಿ ಮಾನವೀಯತೆ ಮೆರೆದ ಸಿಪಿಐ ಮುರನಾಳ 

ದಿನಬಳಕೆ ವಸ್ತುಗಳ ಕಿಟ್ ನೀಡಿ ಮಾನವೀಯತೆ ಮೆರೆದ ಸಿಪಿಐ ಮುರನಾಳ

 

 

ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಮಾ 31 :

 

 

ದೇಶದಲ್ಲಿ ಕೋರೊನಾ ವೈರಸ್ ಹತೋಟಿಗೆ ತರಲು ಪ್ರಧಾನಿ ಮೋದಿಯವರು ದೇಶದಲ್ಲಿ ಏ.14ರವರೆಗೆ ಲಾಕ್‍ಡೌನ್ ಮಾಡಲಾಗಿದ್ದು ಇದರಿಂದ ಪಟ್ಟಣದ ಕೂಲಿ ಮಾಡುವ ಬಡ ಜನತೆ ಕೆಲಸವಿಲ್ಲದೇ ಕಂಗೆಟ್ಟು ಹೋಗಿದ್ದಾರೆ. ಅಗತ್ಯ ವಸ್ತುಗಳನ್ನು ತರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಇದನ್ನು ಮನಕಂಡು ಮೂಡಲಗಿಯ ಸಿಪಿಐ ವೃತ್ತ ನಿರೀಕ್ಷಕ ವೆಂಕಟೇಶ ಮುರನಾಳ ಇಂತಹ ಬಡ ಜನತೆಗೆ ದಿನ ನಿತ್ಯ ಉಪಯೋಗಿಸುವ ಅಗತ್ಯ ವಸ್ತುಗಳಿರುವ ಕಿಟ್‍ಗಳನ್ನು ವಿತರಿಸಿ ಮಾನವೀಯತೆ ಮೆರೆದರು.
ಪಟ್ಟಣದ ಲಕ್ಷ್ಮಿ ನಗರ, ದುರ್ಗಾದೇವಿ ನಗರ, ಗಾಂಧಿಚೌಕ್, ಗಂಗಾನಗರ, ಚಿಕ್ಕಲಗಾರ ಓಣಿಯಲ್ಲಿರುವ ಬಡ ಜನರಿಗೆ ದಿನಬಳಕೆಯ ಅಗತ್ಯ ವಸ್ತುಗಳ ಕಿಟ್‍ಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಸಂತೋಷ ಸೋನವಾಲ್ಕರ, ಅನ್ವರ್ ನದಾಪ್, ಹನುಮಂತ ಗುಡ್ಲಮನಿ, ಬಸು ಝಂಡೆಕುರುಬರ, ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್, ಕಾರ್ಯದರ್ಶಿ ಸುಭಾಸ್ ಗೊಡ್ಯಾಗೋಳ, ಭಗವಂತ ಉಪ್ಪಾರ, ಭೀಮಶಿ ಸೋರಗಾಂವಿ, ರಮೇಶ ಉಪ್ಪಾರ, ಈಶ್ವರ ಢವಳೇಶ್ವರ ಉಪಸ್ಥಿತರಿದ್ದರು.

Related posts: