ಗೋಕಾಕ:ಬೀದಿಯಲ್ಲಿ ವಾಸಿಸುವ ಗೋವುಗಳಿಗೆ ಮೇವು ನೀಡಿ ಮಾನವೀಯತೆಯನ್ನು ಮೆರೆದ ಯುವಕರು
ಬೀದಿಯಲ್ಲಿ ವಾಸಿಸುವ ಗೋವುಗಳಿಗೆ ಮೇವು ನೀಡಿ ಮಾನವೀಯತೆಯನ್ನು ಮೆರೆದ ಯುವಕರು
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 31 :
ಆರ್.ಎಸ್‍ಎಸ್, ಹಿಂದು ಜಾಗರಣಾ ವೇದಿಕೆ ಹಾಗೂ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿಯ ಬೀದಿಯಲ್ಲಿ ವಾಸಿಸುವ ಗೋವುಗಳಿಗೆ(ಬಿಡಾಡಿ ದನಗಳಿಗೆ) ಮೇವುನ್ನು ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ.
ಕೊರೊನಾ ವೈರಸಿನಿಂದ ಲಾಕ್‍ಡೌನ್ ಹಿನ್ನಲೆಯಲ್ಲಿ ಕಳೆದ ಒಂದು ವಾರದಿಂದ ಆಹಾರವಿಲ್ಲದೇ ಪರಿತಪಿಸುತ್ತಿದ್ದ ಗೋವುಗಳಿಗೆ ನಗರದ ವಿವಿಧೆಡೆ ಸಂಚರಿಸಿ ಅವುಗಳಿಗೆ ಅಗತ್ಯವಾದ ಆಹಾರವನ್ನು ಪೂರೈಸಿ ಮಾನವೀಯತೆಯನ್ನು ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಶಂಕರ ವಣಕಿ, ಅಜೀತ, ಸುನೀಲ ಬೆನವಾಡ, ರಮೇಶ ಬಿರಡಿ, ಅಂಕುಶ ರೇಣುಕೆ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.