ಗೋಕಾಕ:ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಮದ್ಯ ಚೆಲ್ಲಿ ಪರಾರಿ : ಉಪ್ಪಾರಹಟ್ಟಿ ಗ್ರಾಮದಲ್ಲಿ ಘಟನೆ
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಮದ್ಯ ಚೆಲ್ಲಿ ಪರಾರಿ : ಉಪ್ಪಾರಹಟ್ಟಿ ಗ್ರಾಮದಲ್ಲಿ ಘಟನೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 31 :
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯು ಮದ್ಯವನ್ನು ಚೆಲ್ಲಿ ಪರಾರಿಯಾದ ಘಟನೆ ತಾಲೂಕಿನ ಉಪ್ಪಾರಹಟ್ಟಿ ಗ್ರಾಮದಲ್ಲಿ ಜರುಗಿದೆ.
ಸೋಮವಾರದಂದು ರಾತ್ರಿ ತಾಲೂಕಿನ ಉಪ್ಪಾರಹಟ್ಟಿ ಗ್ರಾಮದ ಭಗೀರಥ ಸರ್ಕಲ್‍ನ ಹತ್ತಿರ ಸಾರ್ವಜನಿಕ ರಸ್ತೆ ಮೇಲೆ ಹಣಮಂತ ಪುಂಡಲೀಕ ಬೂದಿಗೊಪ್ಪ ಎಂಬವನು ಆಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ಗೋಕಾಕ ಸಿಪಿಐ ಗೋಪಾಲ ರಾಠೋಡ ಹಾಗೂ ಪಿಎಸ್‍ಐ ನಾಗರಾಜ ಖಿಲಾರೆ ಅವರು ತಮ್ಮ ಸಿಬ್ಬಂದಿ ಜೊತೆ ದಾಳಿ ನಡೆಸಿದಾಗ ಆರೋಪಿ ಓಡಿ ಹೋಗಿದ್ದಾನೆ.
ವಿವಿಧ ಬ್ರ್ಯಾಂಡಿನ್ 8559 ರೂ.ಗಳ ಮೌಲ್ಯದ ಮದ್ಯದ ಪೌಚಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.