ಗೋಕಾಕ:ಮಾಸ್ಕ ವಿತರಿಸಿ ಕೊರೋನಾ ವೈರಸ ಹರಡದಂತೆ ಜಾಗೃತಿ ಮೂಡಿಸಿದ ಅಧಿಕಾರಿಗಳು
ಮಾಸ್ಕ ವಿತರಿಸಿ ಕೊರೋನಾ ವೈರಸ ಹರಡದಂತೆ ಜಾಗೃತಿ ಮೂಡಿಸಿದ ಅಧಿಕಾರಿಗಳು
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 1 :
ಕೊರೋನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮವಾಗಿ ನಗರದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ಮಾಸ್ಕ ವಿತರಿಸಿ ಜಾಗೃತಿ ಮೂಡಿಸಿದರು
ಬುಧವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಅಗತ್ಯ ವಸ್ತುಗಳಿಗೆ ಮತ್ತು ಔಷಧಿಗಳ ಖರೀದಿಗೆ ರಸ್ತೆಗೆ ಇಳಿದ ಸಾರ್ವಜನಿಕರಿಗೆ ಗೋಕಾಕ ವಿಭಾಗದ ಡಿ.ಎಸ್.ಪಿ ಡಿ.ಟಿ ಪ್ರಭು ಅವರು ಮಾಸ್ಕ್ ವಿತರಿಸಿ ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಹೋರಾಡಲು ಮನೆಯಲ್ಲಿಯೇ ಇರಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸರಕಾರ ಮತ್ತು ತಾಲೂಕಾಡಳಿತ ನೀಡುವ ನಿರ್ದೆಶನಗಳನ್ನು ತಪ್ಪದೆ ಪಾಲಿಸಿ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಹೋರಗಡೆ ಬಂದು ತಮ್ಮ ಅಗತ್ಯತೆಯನ್ನು ಪೂರೈಸಿಕೋಳಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ , ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಸಿ.ಪಿ.ಐ ಗೋಪಾಲ ರಾಠೋಡ, ವಿ.ಎಸ್.ತಡಸಲೂರು ಇದ್ದರು .