ಗೋಕಾಕ:ಕೊರೋನಾ ವೈರಸ ಹಿನ್ನೆಲೆ : ಜವಾಬ್ದಾರಿಯುತ ಕಾರ್ಯ ನಿರ್ವಹಿಸಿ : ಡಿ.ಎಸ್.ಪಿ ಡಿ.ಟಿ ಪ್ರಭು
ಕೊರೋನಾ ವೈರಸ ಹಿನ್ನೆಲೆ : ಜವಾಬ್ದಾರಿಯುತ ಕಾರ್ಯ ನಿರ್ವಹಿಸಿ : ಡಿ.ಎಸ್.ಪಿ ಡಿ.ಟಿ ಪ್ರಭು
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಎ 2 :
ಜನಪ್ರತಿನಿಧಿಗಳು , ಮುಖಂಡರುಗಳು ಕೊರೋನಾ ವೈರಸ್ ಹರಡದಂತೆ ಜವಾಬ್ದಾರಿಯುತ ಕಾರ್ಯ ನಿರ್ವಹಿಸಬೇ ವಹಿಸಬೇಕಾಗಿದೆ ಎಂದು ಡಿ.ಎಸ್.ಪಿ ಡಿ.ಟಿ ಪ್ರಭು ಹೇಳಿದರು
ಗುರುವಾರದಂದು ನಗರದ ಶಹರ ಠಾಣೆಯಲ್ಲಿ ನಡೆದ ವಿವಿಧ ಮುಖಂಡರುಗಳ ಸಭೆಯಲ್ಲಿ ಮಾತನಾಡಿದ ಅವರು ಕಳೆದ ಒಂದು ವಾರದಿಂದ ರಾಜಾದ್ಯಂತ ಲಾಕಡೌನ ಜಾರಿಯಲ್ಲಿದ್ದು , ಗೋಕಾಕ ನಗರದಲ್ಲಿಯೂ ಸಹ ಲಾಕಡೌನ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ. ಸಾರ್ವಜನಿಕರು ಪೊಲೀಸ ಇಲಾಖೆಗೆ ಎಲ್ಲ ರೀತಿಯ ಸಹಕಾರ ನೀಡಬೇಕು. ಹೊರಗಡೆಯಿಂದ ಬರುವವರ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು, ಯಾರಾದರೂ ಬೇರೆ ರಾಜ್ಯ, ಜಿಲ್ಲೆಯಿಂದ ನಗರಕ್ಕೆ ಆಗಮಿಸಿದ್ದರೆ ಅಂತವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಅಂತಹ ವ್ಯಕ್ತಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ವೈದ್ಯರ ಸಲಹೆ ಮೇರೆಗೆ ಕಾರ್ಯ ನಿರ್ವಹಿಸಲಾಗುವದು ಇದಕ್ಕೆ ಎಲ್ಲರೂ ಸಹಕರಿಸಬೇಕು. ಕೊರೋನಾ ವೈರಸಗೆ ಇನ್ನುವರೆಗೆ ಯಾವುದೆ ಔಷಧಿ ಹಾಗೂ ಲಸಿಕೆ ಕಂಡು ಹಿಡಿಯಲಾಗಿಲ್ಲಾ ಅದಕ್ಕಾಗಿ ಸಾರ್ವಜನಿಕರು ತುಂಬಾ ಜಾಗೃಕತೆಯಿಂದ ಕಾರ್ಯ ನಿರ್ವಹಿಸಿ ಜನರಲ್ಲಿ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ . ಜಾಗೃತಿ ಮೂಡಿಸುವ ಜವಾಬ್ದಾರಿ ಪೊಲೀಸ ಒಬ್ಬರಿಂದ ಸಾಧ್ಯವಿಲ್ಲ ಪ್ರತಿಯೊಬ್ಬರು ಪೊಲೀಸ ಇಲಾಖೆಯೊಂದಿಗೆ ಕೈ ಜೋಡಿಸಬೇಕು.
ಈಗಾಗಲೇ ಬೇರೆ ಕಡೆಯಿಂದ ಬಂದ 17 ಜನಕ್ಕೆ ವೈದ್ಯಕೀಯ ತಪಾಸಣೆ ಮಾಡಲಾಗಿದೆ ಅವರಲ್ಲಿ ಯಾವುದೆ ಸೋಂಕು ಕಾಣಿಸಿಕೊಂಡಿಲ್ಲಾ .
ಮಾಗ,ಆಗಿದೆ . ದುಡಿಯಲು, ಹೋರ ಜಿಲ್ಲೆಗಳಿಂದಲೂ ಬಂದರು ತಪಾಸಣೆ ಮಾಡಿ. ಒಬ್ಬನಿಂದ ಇಡಿ ವ್ಯವಸ್ಥೆ ಹಾಳಾಗುದನ್ನೂ ಬಿಡಲು ಸಾಧ್ಯವಿಲ್ಲ . ಒಬ್ಬನಿಂದ ಸೂಮಾರು ಜನರಿಗೆ ತಲಗುತ್ತದೆ. ಆದ್ದರಿಂದ ಎಲ್ಲರೂ ಜವಾಬ್ದಾರಿಯುತ್ತ ಕಾರ್ಯನಿರ್ವಹಿಸಬೇಕು . ಗೋಕಾಕ ಇಲ್ಲಿಯವರೆಗೆ ಸೋಂಕು ರಹಿತ ತಾಲೂಕಾಗಿದ್ದು, ಇದನ್ನು ಮುಂದುವರೆಸಿಕೊಂಡು ಹೋಗುವದು ಪ್ರತಿಯೊಬ್ಬರ ಜವಾಬ್ದಾರಿ ಮಾತ್ರವಲ್ಲ ಕರ್ತವ್ಯ ಕೂಡಾ ಆಗಿದೆ ಆ ದಿಸೆಯಲ್ಲಿ ಎಲ್ಲ ಸಮಾಜದ ಮುಖಂಡರುಗಳು ಲಾಕಡೌನ ಯಶಸ್ವಿಯಾಗಿ ಮುಗಿಯಲು ಪೊಲೀಸ ಇಲಾಖೆಯೊಂದಿಗೆ ಸಹಕರಿಸಬೇಕಾಗಿದೆ ಎಂದು ಹೇಳಿದ ಡಿ.ಟಿ.ಪ್ರಭು ಅವರು ಪ್ರತಿದಿನ ಬೆಳಿಗ್ಗೆ 7 ಘಂಟೆಯಿಂದ 10 ಘಂಟೆವರೆಗೆ ಅಗತ್ಯ ವಸ್ತುಗಳನ್ನು ದೊರಕುವ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಶಾಂತತೆಯಿಂದ ಅವಶ್ಯಕ ವಸ್ತುಗಳನ್ನು ಖರೀದಿಸಬೇಕು . ಪ್ರತಿ ಗಲ್ಲಿಗಲ್ಲಿಗಳಲ್ಲಿಯೂ ಸಹ ಕಾಯಿಪಲ್ಲೆ, ದಿನಸಿ ವಸ್ತುಗಳ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಆದಾಗ್ಯೂ ಯಾವುದಾದರೂ ಗಲ್ಲಿಯಲ್ಲಿ ಕಾಯಿಪಲ್ಲೆ , ದಿನಸಿ ವಸ್ತುಗಳ ಕೊರತೆ ಕಂಡು ಬಂದ್ದಿದಲ್ಲಿ ನಮ್ಮ ಗಮನಕ್ಕೆ ತಂದರೆ ತಕ್ಷಣ ಅದರ ವ್ಯವಸ್ಥೆ ಮಾಡಿಕೋಡಲಾಗುವದು ಜನರು ಮನೆಯಲ್ಲಿಯೇ ಇದ್ದು ಕೊರೋನಾ ವೈರಸ ಹೊಡೆದೊಡಿಸಲು ಸಹಕರಿಸಬೇಕೆಂದು ಡಿ.ಎಸ್.ಪಿ ಪ್ರಭು ಹೇಳಿದರು
ಸಭೆಯಲ್ಲಿ ಮುಖಂಡರುಗಳಾದ ಎಸ್.ಎ.ಕೊತವಾಲ, ಅಬ್ಬಾಸ ದೇಸಾಯಿ , ಜೋತಿಬಾ ಸುಂಭಜಿ, ದುರ್ಗಪ್ಪ ಶಾಸ್ತ್ರಿಗೋಲ್ಲರ , ಇಲಾಹಿ ಖೈರದಿ , ವಿವೇಕ ಜತ್ತಿ , ಬಸವರಾಜ ಅರೆನ್ನವರ , ಜಾವೇದ ಗೋಕಾಕ , ವಿಶ್ವನಾಥ ಬಿಳ್ಳೂರ , ಗಿರೀಶ್ ಖೋತ , ಭಗವಂತ ಹೂಳ್ಳಿ, ಬಸವರಾಜ ದೇಶನೂರ, ಹರೀಶ ಬೂದಿಹಾಳ , ಜಯಾನಂದ ಹುಣ್ಣಶ್ಯಾಳ , ಸಿದ್ದಪ ಹುಚ್ಚರಾಯಪ್ಪಗೋಳ ಸೇರಿದಂತೆ ಇತರರು ಇದ್ದರು