ಗೋಕಾಕ:ಲಾಕಡೌನ ಹಿನ್ನೆಲೆ: ಅಜರ್ ಮುಜಾವರ ಗ್ರೂಫಾ ನಿರ್ಗತಿಕರಿಗೆ ಊಟ ವಿತರಣೆ
ಲಾಕಡೌನ ಹಿನ್ನೆಲೆ: ಅಜರ್ ಮುಜಾವರ ಗ್ರೂಫಾ
ನಿರ್ಗತಿಕರಿಗೆ ಊಟ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಎ 2 :
ಇಲ್ಲಿನ ಅಜರ್ ಮುಜಾವರ ವತಿಯಿಂದ ನಗರದಲ್ಲಿ ಕರ್ತವ್ಯ ನಿರತ ಪೊಲೀಸರಿಗೆ , ನಗರಸಭೆ ಪೌರ ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ಮಧ್ಯಾಹ್ನ ಊಟ ವಿತರಿಸಲಾಯಿತು
ಲಾಕಡೌನ ಜಾರಿ ಯಾದಾಗಿನಿಂದ ಪೊಲೀಸರು ಕಷ್ಟಗಳನ್ನು ಎದುರಿಸಿ ಯಾರು ಹೋರ ಬಾರದಂತೆ ಕಟ್ಟನಿಟ್ಟಿನ ಕ್ರಮ ಜರುಗಿಸುತ್ತಿದ್ದಾರೆ . ಅವರ ಕರ್ತವ್ಯವನ್ನು ಅರಿತು ಲಾಕಡೌನ ಜಾರಿಯಾದಾಗಿನಿಂದಲೂ ಸಹ ನಗರದ ಸಂಘ, ಸಂಸ್ಥೆಗಳು ಪೊಲೀಸರಿಗಾಗಿ ಊಟ ,ಊಪಹಾರ ,ತಂಪು ಪಾನಿಯಾ ಸೇರಿದಂತೆ ಬೇರೆ ಬೇರೆ ಆಹಾರ ಪದಾರ್ಥಗಳನ್ನು ವಿತರಿಸುತ್ತಿದ್ದಾರೆ
ಗುರುವಾರವು ಸಹ ಈ ಕಾರ್ಯ ಮುಂದುವರೆದು ಸ್ಥಳೀಯ ಅಜರ್ ಮುಜಾವರ ಮತ್ತು ಹಲವು ಯುವಕರು ತಂಪು ಪಾನಿಯಾ , ಊಟವನ್ನು ವಿತರಿಸಿ ಮಾನವೀಯತೆ ಮೆರೆದರು
ಈ ಸಂದರ್ಭದಲ್ಲಿ ಸಲದಾಕತ್ಅಲಿ , ಸದ್ದಾಂ , ಹಮೀದ , ಮೋಸಿನ , ರಿಯಾಜ, ಕಯ್ಯೂಮ , ನಹೀಮ್, ಆಸೀಪ ಉಪಸ್ಥಿತರಿದ್ದರು