RNI NO. KARKAN/2006/27779|Thursday, November 21, 2024
You are here: Home » breaking news » ಗೋಕಾಕ:ಕೊರೊನಾ ವೈರಸ್ ಮುಂಜಾಗೃತ : ಪಶುವೈದ್ಯಕೀಯ ಸಂಸ್ಥೆಗಳಿಗೆ ಸಲಕರಣೆ ವಿತರಣೆ

ಗೋಕಾಕ:ಕೊರೊನಾ ವೈರಸ್ ಮುಂಜಾಗೃತ : ಪಶುವೈದ್ಯಕೀಯ ಸಂಸ್ಥೆಗಳಿಗೆ ಸಲಕರಣೆ ವಿತರಣೆ 

ಕೊರೊನಾ ವೈರಸ್ ಮುಂಜಾಗೃತ : ಪಶುವೈದ್ಯಕೀಯ ಸಂಸ್ಥೆಗಳಿಗೆ ಸಲಕರಣೆ ವಿತರಣೆ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಎ 3 :

 

 

ಕೊರೊನಾ ವೈರಸ್ ತಡೆಗಟ್ಟುವ ಮುಂಜಾಗೃತ ಕ್ರಮವಾಗಿ ತಾಲೂಕಿನ ಎಲ್ಲ ಪಶುವೈದ್ಯಕೀಯ ಸಂಸ್ಥೆಗಳ ವೈದ್ಯಾಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಸಲಕರಣೆಗಳನ್ನು ತಾಲೂಕಾ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ: ಮೋಹನ ಕಮತ ಅವರು ಶುಕ್ರವಾರದಂದು ವಿತರಿಸಿದರು.
ಕೊರೊನಾ ವೈರಸ್ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು. ಜೊತೆಗೆ ಜಾನುವಾರಗಳ ಆರೋಗ್ಯವು ಅಷ್ಟೇ ಮುಖ್ಯವಾಗಿದೆ ಎಂದು ಡಾ: ಮೋಹನ ಕಮತ ಅವರು ತಿಳಿಸಿದರು.
ಪಶು ವೈದ್ಯರಿಗೆ ಮತ್ತು ಸಿಬ್ಬಂದಿಗಳಿಗೆ ಗುರುತಿನ ಚೀಟಿ, ಮಾಸ್ಕ್, ಹ್ಯಾಂಡವಾಶ್, ಪಶು ಚಿಕಿತ್ಸೆಗಳ ಸ್ವಚ್ಛತೆಗಾಗಿ ಫಿನಾಯಿಲ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಡಾ: ಶಶಿಕಾಂತ ಕೌಜಲಗಿ,ಡಾ: ಪಿ.ಕೆ.ಕೊರ್ತಿ,ಡಾ: ಆನಂದ ಗುರಿಕಾರ, ಡಾ: ಸಯಿದಅಹ್ಮದ ಸನದಿ,ಡಾ:ಸಚಿನ ಗೊಂಧಳಿ,ಡಾ: ಪುರಂದರ ಕಾಂಬಳೆ, ಡಾ: ಧರೆಪ್ಪ ಹೊಸಮನಿ, ಡಾ: ಪ್ರವೀಣ ಮರಗಾಲಿ, ಡಾ: ಆರ್.ಕೆ.ಬಂಬಲಾಡಿ, ಡಾ: ವಿನೋದ ಗುಡಕೇತ್ರ, ಡಾ: ವಿಠ್ಠಲ ಕೌಜಲಗಿ,ಡಾ: ಎಸ್.ಪಿ.ಚನ್ನಾಳ, ಡಾ: ಶಿವಾನಂದ ಪೂಜೇರಿ, ಡಾ: ಪ್ರವೀಣ ವಡೇರ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts: