ಘಟಪ್ರಭಾ:ಜಾಮಿಯಾ ಮಸ್ಜೀದ ಯುಂಗ ಕಮೀಟಿ ವತಿಯಿಂದ 60 ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಣೆ
ಜಾಮಿಯಾ ಮಸ್ಜೀದ ಯುಂಗ ಕಮೀಟಿ ವತಿಯಿಂದ 60 ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಎ 3 :
ಕೊರೋನಾ ಸೊಂಕಿನ ಕಾರಣ ಉದ್ಯೋಗ ಇಲ್ಲದೇ ತೊಂದರೆ ಅನುಭವಿಸುತ್ತಿರುವ ಜನರಿಗೆ ಇಲ್ಲಿಯ ಜಾಮಿಯಾ ಮಸ್ಜೀದ ಯುಂಗ ಕಮೀಟಿ ವತಿಯಿಂದ 60 ಕುಟುಂಬಗಳಿಂಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಶುಕ್ರವಾರÀ ಇಲ್ಲಿಯ ಜಾಮಿಯಾ ಮಸೀದಿ ಆವರಣದಲ್ಲಿ ಬಡವರಿಗೆ ಘಟಪ್ರಭಾ ಪಿ.ಎಸ್.ಐ ಹಾಲಪ್ಪ ಬಾಲದಂಡಿ ಆಹಾರ ಸಾಮಗ್ರಿಗಳನ್ನು ವಿತರಿಸಿ, ಮಾತನಾಡುತ್ತ, ಕೊರೋನಾ ವೈರಸ ಸೋಕ ತಡೆಯದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ಮತ್ತು ಯಾವುದೇ ಸಭೆ ಸಮಾರಂಭಗಳನ್ನು ಮಾಡದೇ ಕಡಾಯವಾಗಿ ಮಾಸ್ಕ್ ಧರಿಸಬೇಕು. ಬಡವರಿಗಾಗಿ ಘಟಪ್ರಭಾ ಜಾಮಿಯಾ ಮಸ್ಜೀದ ಯುಂಗ ಕಮೀಟಿಯವರು ಮಾಡುತ್ತಿರುವ ಕಾರ್ಯ ಶ್ಲಾಘಣಿಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಾಮಿಯಾ ಮಸ್ಜೀದ ಮತ್ವಲ್ಲಿ ನೂರ ಪೀರಜಾದೆ, ಮೌಲಾನಾ ಅಬ್ದುಲ ಗಫೂರ ನÀಯೀಮಿ, ಪ.ಪಂ ಸದಸ್ಯರಾದ ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ, ಹಿರಿಯರಾದ ಹಾಜಿ ಅಹ್ಮದ ಹುಸೇನ ಬಾಗವಾನ, ಗೌಸ ಬಾಗವಾನ, ಹಾಜಿ ಇಮಾಹುಸೇನ ಮುಲ್ಲಾ, ಮೌಲಾ ಬಾಗವಾನ, ನದೀಮ ಬಾಗವಾನ, ಶಾಹೀದ ಹುದಲಿ, ಫೈಜಲ ಬಾಗವಾನ, ಅಕೀಬ ಸಯ್ಯದ, ಶಬ್ಬೀರ ಜಮಖಂಡಿ, ಉಸ್ಮಾನ ಬಾಗವಾನ ಪೊಲೀಸ ಸಿಬ್ಬಂದಿಗಳಾದ ಬಿ.ಎಸ್.ನಾಯಿಕ ಸೇರಿದಂತೆ ಅನೇಕರು ಇದ್ದರು.