ಖಾನಾಪುರ:ಕೊರೋನಾ ತಡೆಗಟ್ಟುವ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ : ಶಾಸಕಿ ಅಂಜಲಿ
ಕೊರೋನಾ ತಡೆಗಟ್ಟುವ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ : ಶಾಸಕಿ ಅಂಜಲಿ
ನಮ್ಮ ಬೆಳಗಾವಿ ಇ – ವಾರ್ತೆ , ಖಾನಾಪುರ ಎ 4 :
ಮಹಾಮಾರಿ ಕೊರೋನಾ ವೈರಸ್ ತಡೆಗಟ್ಟಲು ನಾವೆಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೋಳಬೇಕು ಎಂದು ಶಾಸಕಿ ಅಂಜಲಿ ನಿಂಬಾಳ್ಕರ ಹೇಳಿದರು
ಶನಿವಾರದಂದು ಪಟ್ಟಣದ ತಾಲೂಕಾ ಪಂಚಾಯತ ಸಭಾಭವನದ ಆವರಣದಲ್ಲಿ ಹಮ್ಮಿಕೊಂಡ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
ರಾಜಾದ್ಯಂತ ಲಾಕಡೌನ ಜಾರಿಯಲ್ಲಿದೆ ಖಾನಾಪುರ ತಾಲೂಕಿನಲ್ಲಿಯೂ ಸಹ ಸರಕಾರದ ಆದೇಶವನ್ನು ಎಲ್ಲರೂ ಪಾಲಿಸಿ ಕೊರೋನಾ ವೈರಸ್ ನ್ನು ಹೊಡೆದೊಡಿಸಲು ಸಹಕರಿಸಬೇಕು . ಅಗತ್ಯ ವಸ್ತುಗಳನ್ನು ಖರೀದಿಸಲು ಹೊರಗಡೆ ಬಂದಾಗ ಒಬ್ಬರಿಗೊಬ್ಬರು ಅಂತರವನ್ನು ಕಾಯ್ದುಕೊಂಡು ಅಗತಿ ವಸ್ತುಗಳನ್ನು ಖರೀದಿಸಬೇಕು . ಆಗಾಗ ಸಾಬೂನು ಅಥವಾ ಸಾನಿಟೈಜರ್ ನಿಂದ ಕೈ ತೊಳೆದುಕೊಳ್ಳಬೇಕು . ಮಾಸ್ಕಗಳನ್ನು ಧರಿಸಬೇಕು ಬಹು ಮುಖ್ಯವಾಗಿ ಸ್ವಚ್ಛತೆಯನ್ನು ಕಾಪಾಡಿಕೋಳ್ಳಬೇಕು
ಕೊರೋನಾ ಹೋಗಲಾಡಿಸಲು ಇಲ್ಲಿಯವರೆಗೆ ಯಾವುದೇ ಔಷಧಿ ಕಂಡು ಹಿಡಿಯಲಾಗಿಲ್ಲ ಅಧಿಕಾರಿಗಳು ಇದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿಬೇಕು ಎಂದರು
ಲಾಕಡೌನ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ತೊಂದರೆ ಉದ್ಭವಿಸದಂತೆ ಸೂಕ್ತ ಕ್ರಮ ಕೈಗೋಳ್ಳಬೇಕು .ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ತೊಂದರೆ ಆಗದ ಹಾಗೇ ಎಚ್ಚರ ವಹಿಸಬೇಕು ಎಂದು ಶಾಸಕಿ ಅಂಜಲಿ ಹೇಳಿದರು .
ತಹಶೀಲ್ದಾರ ರೇಶ್ಮಾ ತಾಳಿಕೋಟಿ
ಮಾತನಾಡಿ ಆರೋಗ್ಯ ಇಲಾಖೆ, ಪೋಲಿಸ ಇಲಾಖೆ ಹಾಗೂ ಗ್ರಾಮಿಣಾಭಿವೃದ್ಧಿ ಪಂಚಾಯತ ರಾಜ್ ಇಲಾಖೆಗಳ ಸಹಕಾರದೊಂದಿಗೆ ತಾಲೂಕಿನಾದ್ಯಂತ ಕೊವಿಡ್-19 ಟಾಸ್ಕಪೊರ್ಸ ಕಮೀಟಿಗಳನ್ನು ರಚನೆ ಮಾಡಲಾಗಿದೆ ಕೊರೋನಾ ವೈರಸ್ ತಡೆಗಟ್ಟಲು ಖಾನಾಪುರ ತಾಲೂಕಿನಲ್ಲಿ ಎಲ್ಲ ಮುಂಜಾಗೃತ ಕ್ರಮ ಕೈಗೋಳ್ಳಲಾಗಿದೆ .ವಿದೇಶದಿಂದ ಬಂದಿರುವ 22 ಜನರ ಹಾಗೂ ಹೊರ ರಾಜ್ಯದಿಂದ ಬಂದ ಕೂಲಿಕಾರ್ಮಿಕರಿಗೂ ಹೋಮ್ ಕ್ವಾರೆಂಟನ್ ವ್ಯವಸ್ಥೆ ಮಾಡಲಾಗಿದ್ದು , ಎಲ್ಲರೂ ಆರೋಗ್ಯವಾಗಿದ್ದಾರೆ
ತಾಲೂಕಿನಾದ್ಯಂತ 136 ನ್ಯಾಯಬೆಲೆ ಅಂಗಡಿಗಳಿದ್ದು, ಅದರಲ್ಲಿ ಈಗಾಗಲೇ 66 ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯ ( ಗೋಧಿ ಹೊರತು ಪಡಸಿ ) ವಿತರಿಸುವ ಕಾರ್ಯ ಆರಂಭಿಸಲಾಗಿದೆ ಎಂದು ಹೇಳಿದರು
ಸಭೆಯಲ್ಲಿ ತಾಪಂ ಇಓ ಅಡವಿಮಠ, ಸಿಪಿಐ ಸುರೇಶ ಶಿಂಗೆ, ಆರೋಗ್ಯ ಅಧಿಕಾರಿ ಎಸ್.ಆರ್ ನಾಂದ್ರೆ, ಕೃಷಿ ಅಧಿಕಾರಿ ಡಿ.ಬಿ.ಚವ್ಹಾನ, ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಣ ಯಕ್ಕುಂಡಿ, ಸಿಡಿಪಿಓ ಪರ್ವಿನ ಶೇಖ, ತಾಲೂಕಿನ ಸಮಾಜ ಕಲ್ಯಾಣ ಇಲಾಖೆ, ಅಬಕಾರಿ ಇಲಾಖೆ, ಪಟ್ಟಣ ಪಂಚಾಯತ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.