ಗೋಕಾಕ:ಕೊರೊನಾ ವೈರಸ್ಸಿನ್ ಬಿಕ್ಕಟ್ಟು : ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ನೆರವಿಗೆ ಧಾವಿಸಬೇಕು: ಭೀಮಶಿ ಗದಾಡಿ
ಕೊರೊನಾ ವೈರಸ್ಸಿನ್ ಬಿಕ್ಕಟ್ಟು : ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ನೆರವಿಗೆ ಧಾವಿಸಬೇಕು: ಭೀಮಶಿ ಗದಾಡಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 4 :
ಕೊರೊನಾ ವೈರಸ್ಸಿನ್ ಬಿಕ್ಕಟ್ಟಿನಿಂದಾಗಿ ನಾಡಿನ ರೈತರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅವರ ನೆರವಿಗೆ ಧಾವಿಸುವಂತೆ ರೈತ ಸಂಘದ ರಾಜ್ಯ ಕಾರ್ಯದರ್ಶಿ ಭೀಮಶಿ ಗದಾಡಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಕಳೆದ ವರ್ಷ ಪ್ರವಾಹದ ಕರಾಳ ಛಾಯೆಯಿಂದ ಬೆಳೆಗಳೆಲ್ಲಾ ಹಾನಿಗೊಳಗಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದ ರೈತರು, ಇಂದಿನ ಕೊರೊನಾ ವೈರಸ್ಸಿನ ತಾವು ಬೆಳೆದ ಬೆಳೆಗೆ ಯೋಗ್ಯ ಬೆಲೆಗಳು ಸಿಗದೇ ಇರುವುದರಿಂದ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಗಿದ್ದು ಕೂಡಲೇ ಸರ್ಕಾರಗಳು ರೈತರ ನೆರವಿಗೆ ಬರಬೇಕೆಂದು ಮನವಿ ಮಾಡಿದ್ದಾರೆ.
ನೆರೆ ಸಂದರ್ಭದಲ್ಲಿ ರಾಜ್ಯದಾದ್ಯಂತ ರೈತರ ಬೆಳೆದ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದವು. ರಾಜ್ಯ ಹಾಗೂ ಕೇಂದ್ರ ಸರ್ಕಾರ ಘೋಷಿಸಿದ ಬೆಳೆ ಪರಿಹಾರಧನ ಇನ್ನೂವರೆಗೂ ರೈತರಿಗೆ ದೊರಕಿಲ್ಲ. ಈಗ ಕೇವಲ ಕಾಟಾಚಾರಕ್ಕೆ ಅಂತಾ ರಾಜ್ಯ ಹಾಗೂ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಪರಿಹಾರಧನ ರೈತರ ಮೂಗಿಗೆ ತುಪ್ಪ ಹಚ್ಚಿದಂತಾಗಿದೆ. ಕರ್ನಾಟಕ ರಾಜ್ಯ ಕೃಷಿ ಸಚಿವರಾದ ಬಿ.ಸಿ.ಪಾಟೀಲ ಅವರು ರೈತರಿಗೆ ಗ್ರೀನ್ ಕಾರ್ಡ ಹಂಚಿಕೆಯನ್ನು ಮಾಡುತ್ತೇವೆ ಅದರ ಮೂಲಕ ರೈತರು ವ್ಯವಹರಿಸಬಹುದು ಅಂತಾ ಹೇಳಿ ಕೆಲವೊಂದು ನಿರ್ಣಯ ಕೈಗೊಂಡಿದ್ದಾರೆ. ಈ ನಿರ್ಣಯಗಳು ರೈತ ಸಮುದಾಯಕ್ಕೆ ತೃಪ್ತಿಯನ್ನು ತಂದಿಲ್ಲ. ರೈತರ ಪೂರಕವಾಗುವ ನಿರ್ಣಗಳನ್ನು ಸರ್ಕಾರಗಳು ಕೈಗೊಳ್ಳಬೇಕೆಂದು ವಿನಂತಿಸಿದ್ದಾರೆ.
ಕೊರೊನಾ ವೈರಸ್ಸು ರೈತರಿಗೆ ಶಾಪವಾಗಿದ್ದು ಪರಿಣಮಿಸಿದ್ದು. ಮೊದಲೇ ಬಾಗಿದ ಬೆನ್ನಿಗೆ ಮತ್ತೊಂದು ಗುದ್ದು ನೀಡಿದಂತಾಗಿದೆ. ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ವಾಹನಗಳ ಸೌಕರ್ಯವಿಲ್ಲದೇ ಇರುವುದರಿಂದ ಹಾಗೂ ದಲ್ಲಾಳ್ಳಿಗಳ ಕುಟಿಲ ನೀತಿಯಿಂದಾಗಿ ರಸ್ತೆಯಲ್ಲಿ ಚೆಲ್ಲಾಡುವ ಪ್ರಸಂಗ ಎದುರಾಗಿದ್ದು. ಸರ್ಕಾರಗಳು ರೈತರ ಬೆಳೆಗಳ ಸಮೀಕ್ಷೆಯನ್ನು ನಡೆಸಿ, ಬೆಳೆದ ಬೆಳೆಗಳನ್ನು ಯೋಗ್ಯದರದಲ್ಲಿ ಎಪಿಎಮ್‍ಸಿ ಮೂಲಕ ನೇರವಾಗಿ ಖರೀದಿಸಿ ಸಾರ್ವಜನಿಕರಿಗೆ ವಿತರಿಸುವ ಕಾರ್ಯವನ್ನು ಸರ್ಕಾರ ಮಾಡಬೇಕೆಂದು ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.