ಗೋಕಾಕ:ಪ್ರಧಾನಿ ಮೋದಿ ಕರೆ ನೀಡಿದ ದೀಪ ಬೆಳಗುವ ಅಭಿಯಾನಕ್ಕೆ ಗೋಕಾಕ ನಗರದಲ್ಲಿ ಭಾರಿ ಬೆಂಬಲ
ಪ್ರಧಾನಿ ಮೋದಿ ಕರೆ ನೀಡಿದ ದೀಪ ಬೆಳಗುವ ಅಭಿಯಾನಕ್ಕೆ ಗೋಕಾಕ ನಗರದಲ್ಲಿ ಭಾರಿ ಬೆಂಬಲ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಏ 5 :
ಕೊರೋನಾ ವೈರಸ್ ಎಂಬ ಗಾಢಾಂಧಕಾರದಿಂದ ದೇಶವನ್ನು ಹೊಸ ಬೆಳಕಿನಡೆ ಒಯ್ಯಲು ಪ್ರಧಾನಿ ಮೋದಿ ಅವರು ಕರೆ ನೀಡಿದ ದೀಪ ಬೆಳಗುವ ಅಭಿಯಾನಕ್ಕೆ ಗೋಕಾಕ ನಗರದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ
ರವಿವಾರದಂದು ರಾತ್ರಿ 9 ಘಂಟೆಗೆ 9 ನಿಮಿಷಗಳ ಕಾಲ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ ಮನೆಯ ಹೊರಗಡೆ, ಬಾಲ್ಕನಿಯಲ್ಲಿ ನಿಂತು ಜನರು ಮೆನದ ಬತ್ತಿ , ಫನತಿ , ಟಾರ್ಚ್ ಗಳನ್ನು ಹಚ್ಚಿ ಮೋದಿ ಕರೆಗೆ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದರು.
ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಪತ್ನಿಯೊಂದಿಗೆ ದೀಪ ಬೆಳಗುವ ಅಭಿಯಾನದಲ್ಲಿ ಭಾಗವಹಿಸಿ ದೀಪವನ್ನು ಬೆಳಗಿದರು
ನಗರದ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು
ಈ ಅಭಿಯಾನದಲ್ಲಿ ಭಾಗವಹಿಸಿ ಕಳೆದ 2 ವಾರಗಳಿಂದ ಏಕಾಂತವಾಸದಿಂದ ಬೆಸತ್ತ ಜನರಿಗೆ ಹೊಸ ಉತ್ಸಾಹ ತುಂಬಿದರು
ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ , ಕೆ.ಎಂ.ಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಅವರು ಸಹ ದೀಪ ಬೆಳಗು ಅಭಿಯಾನದಲ್ಲಿ ಭಾಗವಹಿಸಿ ಜನರಿಗೆ ಧೈರ್ಯ ತುಂಬಿದರು
ನಗರದ ಎಲ್ಲಾ ಗಲ್ಲಿಗಳಲ್ಲಿ ಜನರು ತಮ್ಮ ಬಾಲ್ಕನಿ , ಟಾರ್ಚ್ , ಮೊಬೈಲ್ ಪ್ಯಾಶಲೈಟ್ ಗಳನ್ನು ಪ್ರದರ್ಶಿಸಿ ಮಹಾಮಾರಿ ಕೊರೋನಾ ಹೋರಾಟದಲ್ಲಿ ಇಡೀ ದೇಶ ಒಗ್ಗಟಾಗಿದೆ ಎಂಬ ಸಂದೇಶವನ್ನು ಸಾರಿದರು